ನವದೆಹಲಿ : ಡಿಜಿಟಲ್ ಪಾವತಿಗಳ ವ್ಯಾಪಕ ಬಳಕೆಯನ್ನು ಉತ್ತೇಜಿಸುವ ಉದ್ದೇಶದಿಂದ, 2000 ರೂ.ವರೆಗಿನ ಡೆಬಿಟ್ ಕಾರ್ಡ್ ವಹಿವಾಟಿನ ಮೇಲೆ ಯಾವುದೇ ಮರ್ಚೆಂಟ್ ಡಿಸ್ಕೌಂಟ್ ರೇಟ್ (MDR) ಶುಲ್ಕಗಳನ್ನು ವಿಧಿಸಲಾಗುವುದಿಲ್ಲ ಎಂದು ಶುಕ್ರವಾರ ಸರ್ಕಾರ ಹೇಳಿದೆ.


COMMERCIAL BREAK
SCROLL TO CONTINUE READING

2000 ರೂ. ಮತ್ತು ಅದಕ್ಕಿಂತ ಕಡಿಮೆ ಮೌಲ್ಯದ ಎಲ್ಲಾ ಡೆಬಿಟ್ ಕಾರ್ಡ್/ಬಿಎಚ್ಐಎಂ ಯುಪಿಐ / ಎಇಪಿಎಸ್ ವಹಿವಾಟುಗಳನ್ನು ಒಳಗೊಂಡಂತೆ ಜನವರಿ, 2018 ರಿಂದ 2 ವರ್ಷಗಳವರೆಗೆ ಮರ್ಚೆಂಟ್ ಡಿಸ್ಕೌಂಟ್ ರೇಟ್ (MDR) ಅನ್ನು ಸರ್ಕಾರದಿಂದ ಭರಿಸಲಾಗುವುದು ಮತ್ತು ಬ್ಯಾಂಕುಗಳಿಗೆ ಮರುಪಾವತಿ ಮಾಡಲು ಎಂದು ಕೇಂದ್ರ ಸಚಿವ ಸಂಪುಟ ನಿರ್ಧರಿಸಿದೆ. 


ಎಂಡಿಆರ್ ಎಂಬುದು ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಸೇವೆಗಳನ್ನು ಒದಗಿಸಲು ಬ್ಯಾಂಕಿನಿಂದ ವ್ಯಾಪಾರಿಗೆ ವಿಧಿಸುವ ಶುಲ್ಕವಾಗಿದೆ.


ಡಿಜಿಟಲ್ ಪಾವತಿಗಳನ್ನು ಉತ್ತೇಜಿಸುವ ಸಲುವಾಗಿ, ಈ ಮೊದಲು ಡೆಬಿಟ್ ಕಾರ್ಡ್ ವಹಿವಾಟುಗಳಿಗಾಗಿ ವಿಭಿನ್ನ ವ್ಯಾಪಾರಿ ರಿಯಾಯಿತಿ ದರಗಳನ್ನು (ಎಮ್ಡಿಆರ್) ನೀಡಿದ್ದ ರಿಸರ್ವ್ ಬ್ಯಾಂಕ್, ಸಣ್ಣ ಮತ್ತು ದೊಡ್ಡ ವ್ಯಾಪಾರಿಗಳಿಗೆ ಪ್ರತ್ಯೇಕ ದರಗಳನ್ನು ಸೂಚಿಸಿತ್ತು.


ಇತ್ತೀಚಿನ ಅಧಿಸೂಚನೆಯ ಪ್ರಕಾರ, ಸಣ್ಣ ವ್ಯಾಪಾರಿಗಳಿಗೆ ರೂ. 20 ಲಕ್ಷದವರೆಗಿನ ವಾರ್ಷಿಕ ವಹಿವಾಟಿಗೆ ಎಂಡಿಆರ್ ಶುಲ್ಕವನ್ನು ಡೆಬಿಟ್ ಕಾರ್ಡ್ಗ ಮೂಲಕ ಪಾಯಿಂಟ್ ಆಫ್ ಸೇಲ್ ಯಂತ್ರಗಳಲ್ಲಿ ಆನ್ಲೈನ್ನಲ್ಲಿ ನಡೆಸುವ ಪ್ರತಿ 200 ರೂ. ವ್ಯವಹಾರಕ್ಕೆ  0.40 ಪ್ರತಿಶತದಂತೆ ಶುಲ್ಕ ವಿಧಿಸಲಾಗಿತ್ತು. 


ಒಂದು ವೇಳೆ ವ್ಯಾಪಾರಿಯ ವಾರ್ಷಿಕ ವಹಿವಾಟು 20 ಲಕ್ಷ ರೂ.ಗಿಂತ ಹೆಚ್ಚಿದ್ದರೆ, ಪ್ರತಿ 1000 ರೂ. ವ್ಯವಹಾರಕ್ಕೆ 0.90 ಪ್ರತಿಶತ ಎಂ.ಡಿ.ಆರ್ ಶುಲ್ಕಗಳು ಅನ್ವಯವಾಗಲಿದೆ. ಈ ನಿರ್ದೇಶನ ಜನವರಿ 1 ರಿಂದ ಜಾರಿಗೆ ಬರಲಿದೆ ಎಂದು ಆರ್ಬಿಐ ತಿಳಿಸಿದೆ.