ನವದೆಹಲಿ:  ಕಾಂಗ್ರೆಸ್ ಹಿರಿಯ ಮುಖಂಡ ಅಹ್ಮದ್ ಪಟೇಲ್ ಅವರು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರನ್ನು ಬುಧವಾರ ಇಲ್ಲಿ ಭೇಟಿಯಾಗಿ ರೈತರ ಕುಂದುಕೊರತೆ ಮತ್ತು ಗುಜರಾತ್‌ನಲ್ಲಿನ ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ (ಎಂಎಸ್‌ಎಂಇ) ಪರಿಹಾರ ಕ್ರಮಗಳು ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಚರ್ಚಿಸಿದರು. 


COMMERCIAL BREAK
SCROLL TO CONTINUE READING

ಈ ಭೇಟಿಯ ನಂತರ ಮಾತನಾಡಿದ ಅಹ್ಮದ್ ಪಟೇಲ್ 'ಇದು ರಾಜಕೀಯ ಸಭೆ ಅಥವಾ ಮಹಾರಾಷ್ಟ್ರ ರಾಜಕಾರಣವಲ್ಲ' ಎಂದು ಅವರು ಎಎನ್‌ಐಗೆ ತಿಳಿಸಿದರು. ನಂತರ, ಪಟೇಲ್ ಅವರು ಗಡ್ಕರಿಯನ್ನು ಉದ್ದೇಶಿಸಿ ಬರೆದ ಪತ್ರವೊಂದನ್ನು ಟ್ವೀಟ್ ಮಾಡಿ, 'ನನ್ನ ಕ್ಷೇತ್ರ ಮತ್ತು ಗುಜರಾತ್ ರಾಜ್ಯಕ್ಕಾಗಿ- ಭರೂಚ್ ಜಿಲ್ಲೆಯಲ್ಲಿ ಅಂಡರ್‌ಪಾಸ್ ನಿರ್ಮಾಣ, ಎಕ್ಸ್‌ಪ್ರೆಸ್‌ವೇ ಯೋಜನೆಯ ಸಮೀಪ ರೈತರಿಗೆ ಪರಿಹಾರ ಮತ್ತು ಎಂಎಸ್‌ಎಂಇಗಳಿಗೆ ಪರಿಹಾರ ನೀಡಲು ವಿವಿಧ ಪ್ರಾತಿನಿಧ್ಯಗಳನ್ನು ಸಲ್ಲಿಸಲು ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಲಾಯಿತು' ಎಂದು ಬರೆದುಕೊಂಡಿದ್ದಾರೆ.


ಗುಜರಾತ್‌ನಲ್ಲಿ ಎಂಎಸ್‌ಎಂಇಗಳ ಸ್ಥಿತಿಯನ್ನುಅವರು ಎತ್ತಿ ತೋರಿಸಿದ್ದು, ಎಂಎಸ್‌ಎಂಇಗಳಿಗೆ ಸಹಾಯ ಮಾಡಲು ದೃಡವಾದ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.ಕೇಂದ್ರ ಸರ್ಕಾರದ ಎಂಎಸ್‌ಎಂಇ - ಕ್ಲಸ್ಟರ್ ಅಭಿವೃದ್ಧಿ ಕಾರ್ಯಕ್ರಮವನ್ನು ಗುಜರಾತ್‌ನ ಬುಡಕಟ್ಟು ಜಿಲ್ಲೆಗಳಿಗೆ ವಿಸ್ತರಿಸುವ ತುರ್ತು ಅಗತ್ಯವನ್ನು ನಿಮ್ಮ ಗಮನಕ್ಕೆ ತರಲು ನಾನು ಬಯಸುತ್ತೇನೆ. ರಾಜ್ಯದ ಅತ್ಯಂತ ಹಿಂದುಳಿದ ಪ್ರದೇಶಗಳಲ್ಲಿ ಕೈಗಾರಿಕಾ ಸಮೂಹಗಳನ್ನು ಅಭಿವೃದ್ಧಿಪಡಿಸಲು ನಾವು ಸಮರ್ಥರಾಗಿದ್ದೇವೆ. ಎಂಎಸ್ಎಂಇ ವಲಯವು ಭಾರತೀಯ ಆರ್ಥಿಕತೆಯ ಬೆನ್ನೆಲುಬಾಗಿದೆ ಎಂದು ಹೇಳಿದರು.


'ನಾವು ಸಣ್ಣ ಉದ್ಯಮಗಳ ಸಮಸ್ಯೆಗಳನ್ನು ಪರಿಹರಿಸದ ಹೊರತು ಉದ್ಯೋಗ ಬಿಕ್ಕಟ್ಟು ಮತ್ತು ಆರ್ಥಿಕ ಕುಸಿತವನ್ನು ಪರಿಹರಿಸಲಾಗುವುದಿಲ್ಲ. ಈ ಸಲಹೆಗಳನ್ನು ಪರಿಶೀಲಿಸಲು ಮತ್ತು ಅಗತ್ಯ ನಿರ್ದೇಶನಗಳನ್ನು ನೀಡುವಂತೆ ನಾನು ಪ್ರಾಮಾಣಿಕವಾಗಿ ವಿನಂತಿಸುತ್ತೇನೆ' ಎಂದು ಪಟೇಲ್ ವಿವರಿಸಿದ್ದಾರೆ.