ನವದೆಹಲಿ : ಕೇಂದ್ರ ಸರ್ಕಾರವು ದೇಶದ ಹಲವು ರಾಜ್ಯಗಳಲ್ಲಿ ಉಚಿತ ಪಡಿತರ ನೀಡಲು ಹೊರಟಿದೆ. 'one nation  one ration card'  ಜಾರಿಯಾದ ನಂತರ, ದೆಹಲಿ-ಎನ್‌ಸಿಆರ್‌ನಲ್ಲಿಇತರ ರಾಜ್ಯಗಳ ಜನರು ಕೂಡಾ ಉಚಿತ ಪಡಿತರ ಪಡೆಯುತ್ತಿದ್ದಾರೆ. ಯುಪಿ, ಬಿಹಾರ, ಮಧ್ಯಪ್ರದೇಶ, ರಾಜಸ್ಥಾನ, ಮಹಾರಾಷ್ಟ್ರ, ಜಾರ್ಖಂಡ್‌ನಲ್ಲಿ ಪಡಿತರ ಚೀಟಿ ಒಂದಿಲ್ಲದಿದ್ದರೂ ಉಚಿತವಾಗಿ ರೇಶನ್ (Free ration) ನೀಡಲಾಗುತ್ತಿದೆ. 


COMMERCIAL BREAK
SCROLL TO CONTINUE READING

ಭರದಿಂದ ಸಾಗುತ್ತಿವೆ ಪಡಿತರ ಚೀಟಿ ಕಾರ್ಯ : 
ಇದರೊಂದಿಗೆ, ದೇಶದಲ್ಲಿ ಹೊಸ ಪಡಿತರ ಚೀಟಿಗಳ ಜೊತೆಗೆ, ಹಳೆಯ ಪಡಿತರ ಚೀಟಿಗಳಲ್ಲಿ ಹೆಸರುಗಳನ್ನು ಸೇರಿಸುವ ಮತ್ತು ಅಳಿಸುವ ಕೆಲಸವೂ ನಡೆಯುತ್ತಿದೆ. ಒಂದು ವೇಳೆ, ನಿಮ್ಮ ಪಡಿತರ ಚೀಟಿಯನ್ನು ಆಧಾರ್ (Aadhaar) ಅಥವಾ ಬ್ಯಾಂಕ್ ಖಾತೆಗೆ ಲಿಂಕ್ ಮಾಡಿರದಿದ್ದರೆ, ಅಥವಾ ನಿಮ್ಮ ಪಡಿತರ ಚೀಟಿಯನ್ನು (Ration card) ಕೆಲವು ದಿನಗಳವರೆಗೆ ಸ್ಥಗಿತಗೊಳಿಸಿದ್ದರೆ, ಆಗಸ್ಟ್ 31 ರೊಳಗೆ ಈ ಕೆಲಸವನ್ನು ಪೂರ್ಣಗೊಳಿಸಬೇಕು. 


ಇದನ್ನೂ ಓದಿ :  Vodafone Ideaದ ಈ ಪ್ಲಾನ್ ನಲ್ಲಿ ಕುಟುಂಬದ ಎಲ್ಲಾ ಸದಸ್ಯರಿಗೂ ಸಿಗಲಿದೆ unlimited internet


ಆನ್‌ಲೈನ್ ಆಧಾರ್‌ಗೆ ಲಿಂಕ್ ಮಾಡಿ :
ಆನ್‌ಲೈನ್‌ನಲ್ಲಿ (Online) ಪಡಿತರ ಚೀಟಿಯೊಂದಿಗೆ ಆಧಾರ್ ಅನ್ನು ಲಿಂಕ್ ಮಾಡಬಹುದು. ರಾಷ್ಟ್ರೀಯ ಆಹಾರ ಭದ್ರತೆ ಯೋಜನೆಯಡಿ, ಕೇಂದ್ರ ಸರ್ಕಾರದ ಸೂಚನೆಗಳ ಮೇರೆಗೆ, ಪಡಿತರ ಚೀಟಿಯಲ್ಲಿ ನಮೂದಿಸಲಾಗಿರುವ ಎಲ್ಲಾ ಕುಟುಂಬದ ಸದಸ್ಯರ ಆಧಾರ್ ಸಂಖ್ಯೆಯನ್ನು ಈಗ ಕಡ್ಡಾಯಗೊಳಿಸಲಾಗಿದೆ. 31 ಆಗಸ್ಟ್ 2021 ರ ನಂತರ, ನಿಮ್ಮ ಪಡಿತರ ಚೀಟಿಯನ್ನು ಆಧಾರ್‌ನೊಂದಿಗೆ ಲಿಂಕ್ (Aadhaar link) ಮಾಡದಿದ್ದರೆ, ಅದನ್ನು ನಿರ್ಬಂಧಿಸಲಾಗುತ್ತದೆ.


ಈ ಸಂಖ್ಯೆಗೆ ಕರೆ ಮಾಡಿ, ಮಾಹಿತಿ ಪಡೆಯಬಹುದು : 
ಟೋಲ್ ಫ್ರೀ ಸಂಖ್ಯೆ 18003456194 ಅಥವಾ 1967 ಸಂಖ್ಯೆಗೆ ಕರೆ ಮಾಡುವ ಮೂಲಕ ನೀವು ಸಂಪೂರ್ಣ ಮಾಹಿತಿಯನ್ನು ಪಡೆಯಬಹುದು. ಈ ಸಂಖ್ಯೆಯ ಮೂಲಕ ಪಡಿತರ ಚೀಟಿಯ ಬಗ್ಗೆ ಸಂಪೂರ್ಣ ಮಾಹಿತಿ ಸಿಗುತ್ತದೆ. ಪ್ರಸ್ತುತ, ನೀವು ಈ ಸೌಲಭ್ಯವನ್ನು ಆಗಸ್ಟ್ 31 ರವರೆಗೆ ಮಾತ್ರ ಪಡೆಯುತ್ತೀರಿ. ನೀವು ಪಡಿತರ ಚೀಟಿಯನ್ನು ಆಧಾರ್ ಕಾರ್ಡ್ ಅಥವಾ ಬ್ಯಾಂಕ್ ಖಾತೆಯೊಂದಿಗೆ ಲಿಂಕ್ ಮಾಡದಿದ್ದರೆ, ಸೆಪ್ಟೆಂಬರ್ 1 ರಿಂದ ಪಡಿತರ ಸಿಗುವುದಿಲ್ಲ. 


ಇದನ್ನೂ ಓದಿ :   Ram Mandir Ayodhya Darshan Update: ಈಗ ಎಲ್ಲರೂ ವೀಕ್ಷಿಸಬಹುದು ರಾಮ ಮಂದಿರ ನಿರ್ಮಾಣ ಕಾರ್ಯ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ