ನವದೆಹಲಿ: Aadhaar Card Latest Update- ಆಧಾರ್ ಕಾರ್ಡ್ಗೆ ಸಂಬಂಧಿಸಿದ ಒಂದು ದೊಡ್ಡ ಸುದ್ದಿಯಿದೆ. ಭಾರತದ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ಈ ಮೊದಲು ಯಾವುದೇ ಪುರಾವೆ ಇಲ್ಲದೆ ವಿಳಾಸವನ್ನು ಬದಲಾಯಿಸಲು (Address Update without Proof) ಅನುಮತಿ ನೀಡಿತ್ತು. ಆದರೆ ಈಗ ಈ ವೈಶಿಷ್ಟ್ಯವನ್ನು ಸ್ಥಗಿತಗೊಳಿಸಲಾಗಿದೆ. ಮುಂದಿನ ಆದೇಶದವರೆಗೆ ವಿಳಾಸ ದೃಢೀಕರಣ ಪತ್ರ ಸೌಲಭ್ಯವನ್ನು ಮುಚ್ಚಲಾಗಿದೆ ಎಂದು ಯುಐಡಿಎಐ ತಿಳಿಸಿದೆ. ಅಂದರೆ, ಈಗ ನೀವು ನಿಮ್ಮ ವಿಳಾಸವನ್ನು ಬದಲಾಯಿಸಲು ಬಯಸಿದರೆ, ಅದಕ್ಕಾಗಿ ವಿಳಾಸ ಪುರಾವೆ ಅಗತ್ಯವಾಗಿದೆ.
ಯುಐಡಿಎಐ ಮಾಹಿತಿ ನೀಡಿದೆ:
ಯುಐಡಿಎಐ ನೀಡಿದ ಮಾಹಿತಿಯ ಪ್ರಕಾರ, ಈ ಸೌಲಭ್ಯವನ್ನು ಮುಚ್ಚುವುದರಿಂದ, ವಿಳಾಸವನ್ನು ನವೀಕರಿಸಲು ಯಾವುದೇ ದಾಖಲೆಗಳನ್ನು ಹೊಂದಿರದ ಜನರಿಗೆ ತೊಂದರೆಯಾಗಲಿದೆ. ನಿಮ್ಮ ವಿಳಾಸವನ್ನು ನಿಮ್ಮ ಆಧಾರ್ ಕಾರ್ಡ್ನಲ್ಲಿ (Aadhaar Card) ಆಫ್ಲೈನ್ ಮತ್ತು ಆನ್ಲೈನ್ ವಿಧಾನಗಳ ಮೂಲಕ ಪ್ರೂಫ್ ಮೂಲಕ ಅಪ್ಡೇಟ್ ಮಾಡಬಹುದು. ಆನ್ಲೈನ್ ಮೂಲಕ ವಿಳಾಸ ಅಪ್ಡೇಟ್ಗಾಗಿ, ನೀವು UIDAI ನ ಅಧಿಕೃತ ವೆಬ್ಸೈಟ್ಗೆ ssup.uidai.gov.in/ssup/ ಗೆ ಭೇಟಿ ನೀಡಬೇಕು. ಅದರ ಸಂಪೂರ್ಣ ಪ್ರಕ್ರಿಯೆಯನ್ನು ತಿಳಿಯಿರಿ.
ಇದನ್ನೂ ಓದಿ- Aadhaar Card Update: ಈಗ ನಿಮ್ಮ ಆಧಾರ್ ಕಾರ್ಡ್ ಕಳೆದುಹೋದರೂ ಚಿಂತಿಸಬೇಕಿಲ್ಲ
ಆಧಾರ್ ಕಾರ್ಡ್ನಲ್ಲಿ ವಿಳಾಸ ಬದಲಾವಣೆಗಾಗಿ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ?
1. UIDAI ವೆಬ್ಸೈಟ್ಗೆ ಹೋಗಿ ಮತ್ತು 'ಆಧಾರ್ ಅಪ್ಡೇಟ್ ಮಾಡಲು ಮುಂದುವರಿಯಿರಿ' ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
2. ಇದರ ನಂತರ ನಿಮ್ಮ 12 ಅಂಕಿಯ ಆಧಾರ್ ಸಂಖ್ಯೆಯನ್ನು ನಮೂದಿಸಿ. ನಂತರ ಭದ್ರತಾ ಕೋಡ್ ಅಥವಾ ಕ್ಯಾಪ್ಚಾ ಕೋಡ್ ಅನ್ನು ನಮೂದಿಸಿ.
3. ಇದರ ನಂತರ 'OTP ಕಳುಹಿಸಿ' ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
4. ನಿಮ್ಮ ಆಧಾರ್ (Aadhaar) ನಲ್ಲಿ ನೋಂದಾಯಿಸಲಾದ ಮೊಬೈಲ್ ಸಂಖ್ಯೆಗೆ ಒಟಿಪಿ ಕಳುಹಿಸಲಾಗುವುದು, ಅದನ್ನು ನಮೂದಿಸಬೇಕು.
5. ಇದರ ನಂತರ 'ಲಾಗಿನ್' ಮೇಲೆ ಕ್ಲಿಕ್ ಮಾಡಿ.
6. ನೀವು ಲಾಗಿನ್ ಆದ ತಕ್ಷಣ, ನಿಮ್ಮ ಆಧಾರ್ ವಿವರಗಳು ಪರದೆಯ ಮೇಲೆ ಕಾಣಿಸಿಕೊಳ್ಳಲಿದೆ.
7. ಇದರಲ್ಲಿ ನಿಮ್ಮ ವಿಳಾಸವನ್ನು ಬದಲಾಯಿಸಿ ಮತ್ತು ನೀಡಿರುವ 32 ದಾಖಲೆಗಳಲ್ಲಿ ಯಾವುದಾದರೂ ಒಂದು ದಾಖಲೆಯನ್ನು ಸ್ಕ್ಯಾನ್ ಮಾಡಿದ ಪ್ರತಿಯನ್ನು ಅಪ್ಲೋಡ್ ಮಾಡಿ ಮತ್ತು ಅದನ್ನು ಸಲ್ಲಿಸಿ.
ಇದನ್ನೂ ಓದಿ- Aadhaar- ವ್ಯಕ್ತಿಯ ಮರಣದ ನಂತರ ಆತನ ಆಧಾರ್ ಸಂಖ್ಯೆ ಏನಾಗುತ್ತೆ? ಸರ್ಕಾರ ಏನು ಮಾಡಲಿದೆ ಎಂದು ತಿಳಿಯಿರಿ
ಆಫ್ಲೈನ್ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ?
1. ಆಫ್ಲೈನ್ ಅರ್ಜಿಗಾಗಿ, ನಿಮ್ಮ ಹತ್ತಿರದ ಆಧಾರ್ ಕೇಂದ್ರಕ್ಕೆ ಹೋಗಿ ಮತ್ತು ಆಧಾರ್ ಕಾರ್ಡ್ ಅಪ್ಡೇಟ್ ಫಾರ್ಮ್ ಅನ್ನು ಭರ್ತಿ ಮಾಡಿ.
2. ನಂತರ ಈ ಫಾರ್ಮ್ ಅನ್ನು ಸಲ್ಲಿಸಿ ಮತ್ತು ನಿಮ್ಮ ಬಯೋಮೆಟ್ರಿಕ್ಸ್ ಅನ್ನು ಪರಿಶೀಲನೆಗಾಗಿ ನೀಡಿ.
3. ಈಗ ಉದ್ಯೋಗಿಯು ನಿಮಗೆ ರಶೀದಿಯನ್ನು ನೀಡುತ್ತಾನೆ, ಅದರಲ್ಲಿ ನವೀಕರಣ ವಿನಂತಿಯ ಸಂಖ್ಯೆ (URN) ಇರುತ್ತದೆ.
4. ಈ URN ಬಳಸಿ ಆಧಾರ್ ನವೀಕರಣ ಸ್ಥಿತಿಯನ್ನು ಟ್ರ್ಯಾಕ್ ಮಾಡಬಹುದು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ