ನವದೆಹಲಿ: ರೈಲ್ವೆ ನಿಲ್ದಾಣಗಳಲ್ಲಿ ಅಶುಚಿತ್ವ ತಾಂಡವವಾಡುತ್ತಿದೆಯೇ? ಸುಚಿತ್ವವನ್ನು ನಿರ್ಲಕ್ಷಿಸಲಾಗಿದೆಯೇ? ಹಾಗಿದ್ದರೆ ಈ ಕೂಡಲೇ ಆ ನಿಲ್ದಾಣದ ಫೋಟೊ ತೆಗೆದು ಪಶ್ಚಿಮ ರೈಲ್ವೇಗೆ ವಾಟ್ಸ್ ಆಪ್ ಮಾಡಿ. ನಿಲ್ದಾಣಗಳಲ್ಲಿ ಶುಚಿತ್ವ ಕಾಪಾಡಲು ರೈಲ್ವೇ ಇಲಾಖೆ ನೂತನ ಕ್ರಮ ಕೈಗೊಂಡಿದ್ದು, ನೀವು ವಾಟ್ಸಪ್ ಮೂಲಕ ನೀಡಿದ ದೂರನ್ನು ಅಧಿಕಾರಿಗಳು ಪರಿಶೀಲಿಸಿ ಸ್ವಚ್ಛತೆಗೆ ಕ್ರಮ ಕೈಗೊಳ್ಳಲಿದ್ದಾರೆ. 


COMMERCIAL BREAK
SCROLL TO CONTINUE READING

ಪ್ರಯಾಣಿಕರು ವಾಟ್ಸಪ್ ಮೂಲಕ ಕಳುಹಿಸಿದ ಸಂದೇಶಗಳನ್ನು ಮೇಲ್ವಿಚಾರಣೆ ಮಾಡಲು ವಿಶೇಷ ತಂಡಗಳನ್ನು ರಚಿಸಿ ದಿನದ 24ಗಂಟೆಗಳೂ ಕಾರ್ಯನಿರ್ವಹಿಸುವಂತೆ ಕ್ರಮ ಕೈಗೊಳ್ಳಲಾಗಿದೆ. ಈ ಮೂಲಕ ರೈಲ್ವೆ ನಿಲ್ದಾಣದ ಆವರಣದಲ್ಲಿ, ಶೌಚಾಲಯಗಳಲ್ಲಿ ಸ್ವಚ್ಛತೆ ಆದ್ಯತೆ ನೀಡಲಾಗುವುದು ಎಂದು ಅಧಿಕಾರಿಗಳು ಭರವಸೆ ನೀಡಿದ್ದಾರೆ.


ಅಶುಚಿತ್ವದಿಂದ ಕೂಡಿರುವ ಮುಂಬೈ ಉಪನಗರ ರೈಲ್ವೆ ನಿಲ್ದಾಣಗಳ ಫೋಟೋಗಳನ್ನು ಪ್ರಯಾಣಿಕರು ವೆಸ್ಟರ್ನ್ ರೈಲ್ವೆ ವಾಟ್ಸಪ್ ಸಂಖ್ಯೆ 9004499733ಕ್ಕೆ ಕಳುಹಿಸಬಹುದು. ಇದಲ್ಲದೆ ವಡೋದರ(9724091426), ಅಹಮದಾಬಾದ್ (9724093981), ಭಾವನಗರ (9724097967), ರಾಜ್ಕೋಟ್ (9724094983) ಮತ್ತು ರತ್ಲಂ (9752492970) ಐದು ವಿಭಾಗಗಳಿಗೂ ಪಶ್ಚಿಮ ರೈಲ್ವೆ WhatsApp ಸಂಖ್ಯೆಗಳನ್ನು ಒದಗಿಸಿದೆ.