ನವದೆಹಲಿ: ಲಾಕ್ ಡೌನ್ ಹಿನ್ನೆಲೆ ವಿಶ್ವಾದ್ಯಂತ ಹಾಗೂ ದೇಶಾದ್ಯಂತ ಜನರು ತಮ್ಮ ತಮ್ಮ ಮನೆಗಳಲ್ಲಿ ಬಂಧಿಯಗಿದ್ದಾರೆ. ಈ ನಡುವೆ ಬ್ಯಾಂಕ್ ಗಳು ತಮ್ಮ ಗ್ರಾಹಕರನ್ನು ತಲುಪಲು ಅತ್ಯಾವಶ್ಯಕ ಸೇವೆಗಳನ್ನು ಅವರ ಮನೆ ಬಾಗಿಲಿಗೆ ತಲುಪಿಸುವ ಯತ್ನದಲ್ಲಿ ತೊಡಗಿವೆ. ಇದನ್ನೇ ಗಮನದಲ್ಲಿಟ್ಟುಕೊಂಡಿರುವ ದೇಶದ ಖಾಸಗಿ ವಲಯದ ಬ್ಯಾಂಕ್ ICICI ಬ್ಯಾಂಕ್, ಹೊಸ ರೀತಿಯ ಬ್ಯಾಂಕಿಂಗ್ ಸೇವೆಗೆ ನಾಂದಿ ಹಾಡಿದೆ. ಹೌದು, ಇಂದಿನಿಂದ ICICI ಬ್ಯಾಂಕ್ ತನ್ನ ಗ್ರಾಹಕರಿಗೆ ವಾಟ್ಸ್ ಆಪ್ ಮೂಲಕ ಬ್ಯಾಂಕಿಂಗ್ ಸೌಕರ್ಯಗಳನ್ನು ತಲುಪಿಸಲು ನಿರ್ಧರಿಸಿದೆ. ಈ ಸೌಕರ್ಯದ ಆರಂಭದಿಂದ ICICI ಬ್ಯಾಂಕ್ ಗ್ರಾಹಕರಿಗೆ ಬ್ಯಾಂಕಿಂಗ್ ವ್ಯವಸ್ಥೆ ಇನ್ನಷ್ಟು ಹತ್ತಿರವಾಗಲಿದೆ.


COMMERCIAL BREAK
SCROLL TO CONTINUE READING

WhatsApp ನಲ್ಲಿಯೇ ಸಿಗಲಿವೆ ಈ ಸೇವೆಗಳು
ಐಸಿಐಸಿಐ ಬ್ಯಾಂಕ್ ಸೋಮವಾರದಿಂದಲೇ ತನ್ನ ಈ ಸೇವೆಗಳನ್ನು ವಾಟ್ಸ್ ಆಪ್ ಮೂಲಕ ನೀಡಲು ಆರಂಭಿಸಿದೆ. ಈ ಸೇವೆಗಳನ್ನು ಬಳಸಿ ಗ್ರಾಹಕರು ತಮ್ಮ ವಾಟ್ಸ್ ಆಪ್ ಖಾತೆಯಲ್ಲಿಯೇ ತಮ್ಮ ಉಳಿತಾಯ ಖಾತೆಯ ಮಾಹಿತಿ, ಕೊನೆಯ ಮೂರು ವ್ಯವಹಾರಗಳ ಮಾಹಿತಿ ಕ್ರೆಡಿಟ್ ಕಾರ್ಡ್ ಲಿಮಿಟ್ ನ ಮಾಹಿತಿಯನ್ನು ಪಡೆಯಬಹುದಾಗಿದೆ. ಅಷ್ಟೇ ಅಲ್ಲ ಇನ್ಸ್ಟೆಂಟ್ ಲೋನ್, ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಅನ್ನು ಬ್ಲಾಕ್ ಅಥವಾ ಅನ್ ಬ್ಲಾಕ್ ಕೂಡ ಮಾಡಬಹುದಾಗಿದೆ. ಅದರಲ್ಲೂ ವಿಶೇಷವಾಗಿ ಗ್ರಾಹಕರು ತಮ್ಮ ಹತ್ತಿರದಲ್ಲಿ ಇರುವ ಮೂರು ICICI ಬ್ಯಾಂಕ್ ಶಾಖೆಗಳು ಹಾಗೂ ATMಗಳ ಮಾಹಿತಿಯನ್ನೂ ಸಹ ಇದರಲ್ಲಿ ಪಡೆಯಬಹುದಾಗಿದೆ.


ಬ್ಯಾಂಕ್ ಟ್ವೀಟ್ ಏನ್ ಹೇಳುತ್ತದೆ?
ಇದಕ್ಕೆ ಸಂಬಂಧಿಸಿದಂತೆ ಟ್ವೀಟ್ ಮಾಡಿರುವ ICICI ಬ್ಯಾಂಕ್ ತನ್ನ ಗ್ರಾಹಕರಿಗೆ ಈ ಮಾಹಿತಿಯನ್ನು ನೀಡಿದೆ. ತನ್ನ ಟ್ವೀಟ್ ನಲ್ಲಿ ಬರೆದುಕೊಂಡಿರುವ ಬ್ಯಾಂಕ್, ಗ್ರಾಹಕರೇ ಇನ್ಮುಂದೆ ನೀವು ನಿಮ್ಮ ಮನೆಯಲ್ಲಿಯೇ ಕುರಿತು ಬ್ಯಾಂಕಿಂಗ್ ಗೆ ಸಂಬಂಧಿಸಿದ ಎಲ್ಲ ಕೆಲಸಗಳನ್ನು ಮಾಡಬಹುದು. ಇದಕ್ಕಾಗಿ http://bit.ly/ICICIBankWhatsAppBanking ಲಿಂಕ್ ಮೇಲೆ ಕ್ಲಿಕ್ಕಿಸಿ ನೀವು ಸುಲಭವಾಗಿ ಈ ಕೆಲಸವನ್ನು ಮಾಡಬಹುದು ಎಂದು ಬ್ಯಾಂಕ್ ಹೇಳಿದೆ.


ಯಾರಿಗೆ ಸಿಗಲಿದೆ ಈ ಸೌಕರ್ಯ
ಯಾವ ಗ್ರಾಹಕರ ಮೊಬೈಲ್ ಸಂಖ್ಯೆ ಬ್ಯಾಂಕ್ ಜೊತೆ ರಿಜಿಸ್ಟರ್ ಆಗಿದೆಯೋ, ಅದೇ ಗ್ರಾಹಕರಿಗ ICICI ಬ್ಯಾಂಕ್ ನ ಈ ಸೌಕರ್ಯ ಸಿಗಲಿದೆ. ಒಂದು ವೇಳೆ ನಿಮ್ಮ ಮೊಬೈಲ್ ಸಂಖ್ಯೆ ಬ್ಯಾಂಕ್ ಜೊತೆ ರಿಜಿಸ್ಟರ್ ಆಗದೆ ಇದ್ದಲ್ಲಿ, ಬ್ಯಾಂಕ್ ನ ಈ ಸೌಕರ್ಯ ಪಡೆಯಲು ನಿಮಗೆ ಸ್ವಲ್ಪ ತೊಂದರೆಯಾಗಲಿದೆ.


ಸಿಗಲಿದೆ ಹಲವು ಲಾಭಗಳು
ಒಂದುವೇಳೆ ನೀವು ಐಸಿಐಸಿಐ ಬ್ಯಾಂಕ್ ನಲ್ಲಿ ಉಳಿತಾಯ ಖಾತೆ ಹೊಂದಿದ್ದರೆ ಬ್ಯಾಂಕ್ ನ ಈ ನೂತನ ಸೇವೆಯ ಲಾಭವನ್ನು ನೀವು ಪಡೆಯಬಹುದಾಗಿದೆ. ಜೊತೆಗೆ ಕೇವಲ ICICI ಬ್ಯಾಂಕ್ ನ ಕ್ರೆಡಿಟ್ ಕಾರ್ಡ್ ಹೊಂದಿರುವ ಗ್ರಾಹಕರು ತಮ್ಮ ಕಾರ್ಡ್ ಅನ್ನು ಬ್ಲಾಕ್ ಅಥವಾ ಅನ್ ಬ್ಲಾಕ್ ಮಾಡಲು ಮಾತ್ರ ಈ ಸೇವೆಯನ್ನು ಬಳಸಬಹುದು, ಐಸಿಐಸಿಐ ಬ್ಯಾಂಕೇತರ ಗ್ರಾಹಕರು ತಮ್ಮ ಹತ್ತಿರದ ಕ್ಷೇತ್ರದಲ್ಲಿ ಇರುವ ಬ್ಯಾಂಕ್ ಶಾಖೆಯನ್ನು / ATM ನ ಸ್ಥಳ ಪತ್ತೆಗಾಗಿ ಈ ಸೇವೆಯ ಉಪಯೋಗ ಮಾಡಬಹುದಾಗಿದೆ.