ನವದೆಹಲಿ : ರೈಲಿನಲ್ಲಿ ಪ್ರಯಾಣಿಸಬೇಕಾದರೆ ಟಿಕೆಟ್ ಬೇಕು.  ಟಿಕೆಟ್ ಇಲ್ಲದೆ ಪ್ರಯಾಣ ಮಾಡಿದರೆ ದಂಡ ತೆರಬೇಕಾಗಿತ್ತು. ಆದರೆ ಈಗ ಹಾಗಾಗುವುದಿಲ್ಲ. ಟಿಕೆಟ್ ಇಲ್ಲ ಎಂದಾದರೆ ಭಯ ಪಡುವ ಅಗತ್ಯವಿಲ್ಲ. ಇದೀಗ ರಿಸರ್ವೇಶನ್ (Reservation Rules) ಇಲ್ಲದೆಯೂ ರೈಲು ಪ್ರಯಾಣ ಮಾಡಬಹುದು. ಮೊದಲು,  ರಿಸರ್ವೇಶನ್ ಇಲ್ಲ ಎಂದಾದರೆ,  ತತ್ಕಾಲ್ ಟಿಕೆಟ್ ಬುಕಿಂಗ್ (Tatkal ticket booking) ಮಾತ್ರ ಆಯ್ಕೆಯಾಗಿತ್ತು. ತತ್ಕಾಲ್ ನಲ್ಲೂ ಟಿಕೆಟ್ ಸಿಕ್ಕೇ ಸಿಗುತ್ತದೆ ಎಂಬ ಭರವಸೆಯಿಲ್ಲ. ಇದೀಗ, ರೈಲ್ವೆ ಹೊಸ ನಿಯಮವನ್ನು ಜಾರಿಗೆ ಬಂದಿದೆ. ಈ  ಸೌಲಭ್ಯದ ಅಡಿಯಲ್ಲಿ ರಿಸರ್ವೇಶನ್ ಮಾಡದೆಯೇ ರೈಲಿನಲ್ಲಿ ಪ್ರಯಾಣಿಸಬಹುದು.


COMMERCIAL BREAK
SCROLL TO CONTINUE READING

ಪ್ಲಾಟ್‌ಫಾರ್ಮ್ ಟಿಕೆಟ್‌ ಇದ್ದರೂ ರೈಲು ಪ್ರಯಾಣ ಸಾಧ್ಯ : 
ರೈಲ್ವೆ ನಿಯಮಗಳ ಪ್ರಕಾರ, ರಿಸರ್ವೇಶನ್ (Reservation Rules) ಇಲ್ಲದಿದ್ದರೆ, ಪ್ಲಾಟ್‌ಫಾರ್ಮ್ ಟಿಕೆಟ್ ಇದ್ದರು ರೈಲು ಹತ್ತಬಹುದು (Platform Ticket Rules). ನಂತರ  ಟಿಕೆಟ್ ಕಲೆಕ್ಟರ್ ಬಳಿ ಹೋಗಿ,  ಸುಲಭವಾಗಿ ಟಿಕೆಟ್‌ಗಳನ್ನು ಪಡೆಯಬಹುದು. ಅಂದರೆ ನಿಮ್ಮಲ್ಲಿರುವ ,  ಪ್ಲಾಟ್‌ಫಾರ್ಮ್ ಟಿಕೆಟ್ ಅನ್ನು ತೆಗೆದುಕೊಂಡು, ತಕ್ಷಣ TTE ಯನ್ನು ಸಂಪರ್ಕಿಸಬೇಕು. ನಂತರ ಟಿಟಿಇಯಿಂದ ನಿಮಗೆ ಎಲ್ಲಿಯವರೆಗೆ ಟಿಕೆಟ್ ಬೇಕೋ ಅಲ್ಲಗೆ ಟಿಕೆಟ್ ಪಡೆದುಕೊಳ್ಳಬಹುದು.  


ಇದನ್ನೂ ಓದಿ :  ಈ ಬ್ಯಾಂಕ್ ಗ್ರಾಹಕರಿಗೆ ನೀಡುತ್ತಿದೆ 2 ಲಕ್ಷ ರೂ. ಗಳ ಲಾಭ, ಬಳಸಿಕೊಳ್ಳುವುದು ಹೇಗೆ ತಿಳಿಯಿರಿ


ಸೀಟು ಖಾಲಿ ಇಲ್ಲದಿದ್ದರೂ ಪ್ರಯಾಣ ಸಾಧ್ಯ : 
ರೈಲಿನಲ್ಲಿ ಸೀಟ್ ಖಾಲಿ ಇಲ್ಲದಿದ್ದರೆ, ಟಿಟಿಇ (TTE) ನಿಮಗೆ ರಿಸರ್ವೇಶನ್ ನೀಡಲು ನಿರಾಕರಿಸಬಹುದು. ಆದರೆ, ಪ್ರಯಾಣ ಮಾಡದಂತೆ ತಡೆಯಲು ಸಾಧ್ಯವಿಲ್ಲ. ರಿಸರ್ವೇಶನ್ ಇಲ್ಲ ಎಂದಾದರೆ ಪ್ರಯಾಣಿಕರಿಂದ ರೂ 250 ದಂಡದೊಂದಿಗೆ, ಪ್ರಯಾಣದ ಒಟ್ಟು ಶುಲ್ಕವನ್ನು ಪಾವತಿಸಿ  ಟಿಕೆಟ್ ಪಡೆಯಬೇಕು. 


ಪ್ಲಾಟ್‌ಫಾರ್ಮ್ ಟಿಕೆಟ್ ದರ :
ಪ್ಲಾಟ್‌ಫಾರ್ಮ್ ಟಿಕೆಟ್ (Platform Ticket ) ಸಹಾಯದಿಂದ ಪ್ರಯಾಣಿಕ ರೈಲು ಹತ್ತಬಹುದು. ಇದರೊಂದಿಗೆ, ಪ್ರಯಾಣಿಕ ಪ್ಲಾಟ್‌ಫಾರ್ಮ್ ಟಿಕೆಟ್ ತೆಗೆದುಕೊಂಡ ಸ್ಥಳದಿಂದಲೇ ಟಿಕೆಟ್ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಶುಲ್ಕವನ್ನು ವಿಧಿಸುವಾಗ, ನಿರ್ಗಮನ ಕೇಂದ್ರವನ್ನು ಸಹ ಅದೇ ನಿಲ್ದಾಣವೆಂದು ಪರಿಗಣಿಸಲಾಗುತ್ತದೆ. ಇನ್ನೂ ಮುಖ್ಯ ವಿಷಯವೆಂದರೆ ಯಾವ ವರ್ಗದಲ್ಲಿ ಪ್ರಯಾಣಿಸುತ್ತೀರೋ ಅದೇ ವರ್ಗದ ಶುಲ್ಕವನ್ನು ಪಾವತಿಸಬೇಕಾಗುತ್ತದೆ.


ಇದನ್ನೂ ಓದಿ :  ಆಧಾರ್ ಗೆ ಸಂಬಂಧಿಸಿದ ಈ ಕೆಲಸವನ್ನು ತಕ್ಷಣ ಮಾಡಿ ಮುಗಿಸಿ, ಇಲ್ಲವಾದರೆ ತೆರಬೇಕಾದೀತು ದಂಡ


ಒಂದು ವೇಳೆ, ಯಾವುದೇ ಕಾರಣಕ್ಕೆ ರೈಲು ತಪ್ಪಿಹೋದರೆ ಮುಂದಿನ ಎರಡು ನಿಲ್ದಾಣಗಳವರೆಗೆ TTE ನಿಮ್ಮ ಸೀಟನ್ನು ಯಾರಿಗೂ ಕೊಡಲು ಸಾಧ್ಯವಿಲ್ಲ. ಎರಡು ನಿಲ್ದಾಣಗಳ ನಂತರ, ಟಿಟಿಇ ಆರ್‌ಎಸಿ ಟಿಕೆಟ್ ಹೊಂದಿರುವ ಪ್ರಯಾಣಿಕರಿಗೆ ಸೀಟು ಹಂಚಬಹುದು. 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ