ಸಿಲ್ಚಾರ್: ರಾಷ್ಟ್ರೀಯ ನಾಗರಿಕ ನೋಂದಣಿ ವಿವಾದಕ್ಕೆ ಸಂಬಂಧಿಸಿದಂತೆ ಸಂತ್ರಸ್ಥರೊಂದಿಗೆ ಮಾತುಕತೆ ನಡೆಸಲು ಆಗಮಿಸಿದ್ದ ಟಿಎಂಸಿ ಸಂಸದರು ಮತ್ತು ಶಾಸಕರ ನಿಯೋಗವನ್ನು ಅಸ್ಸಾಂ ಸರ್ಕಾರ ಸಿಲ್ಚಾರ್ ವಿಮಾನ ನಿಲ್ದಾಣದಲ್ಲಿ ತಡೆಹಿಡಿದಿದೆ.


COMMERCIAL BREAK
SCROLL TO CONTINUE READING

ಅಸ್ಸಾಂ ನೋಂದಣಿ ಕರಡು ವಿಚಾರ: ರಾಜೀವ್ ಗಾಂಧಿ ಮಾಡಿದ್ದೂ ಇದನ್ನೇ- ಅಮಿತ್ ಷಾ


ಅಸ್ಸಾಂ NRC ಕರಡಿನ ಸಂಬಂಧ ತೃಣಮೂಲ ಕಾಂಗ್ರೆಸ್ ಪಕ್ಷದ ಮುಖ್ಯಸ್ಥೆ ಹಾಗೂ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೀಡಿರುವ ಹೇಳಿಕೆ ವಿವಾದಕ್ಕೆ ಕಾರಣವಾಗಿದ್ದು, ಇದೀಗ ಆ ಪಕ್ಷದ ನಿಯೋಗ ಅಸ್ಸಾಂಗೆ ಭೇಟಿ ನೀಡಿರುವುದರಿಂದ ಅನಿರೀಕ್ಷಿತ ಘಟನೆಗಳು ಸಂಭವಿಸಬಹುದು ಎಂಬ ಮುನ್ನೆಚ್ಚರಿಕೆಯಿಂದ ಅವರನ್ನು ವಿಮಾನ ನಿಲ್ದಾಣದಲ್ಲೇ ತಡೆ ಹಿಡಿಯಲಾಗಿದೆ. ಅಲ್ಲದೆ, ಕಚ್ಚಾರ್ ಜಿಲ್ಲಾಡಳಿತ ಸಿಲ್ಚಾರ್ ಪ್ರದೇಶದಲ್ಲಿ ನಿಷೇಧಾಜ್ಞೆ ಜಾರಿ ಮಾಡಿದೆ. 


ಮಮತಾ ಬ್ಯಾನರ್ಜಿ NRC ಹೋರಾಟಕ್ಕೆ ದೇವೇಗೌಡರ ಬೆಂಬಲ


ಈ ಘಟನೆಗೆ ಪ್ರತಿಕ್ರಿಯಿಸಿರುವ ಟಿಎಂಸಿ ಸಂಸದ ದಿರೇಕ್ ಒ ಬ್ರಿನ್, ಜನರನ್ನು ಭೇಟಿ ಮಾಡುವುದು ಪ್ರಜಾಪ್ರಭುತ್ವದ ಹಕ್ಕು. ಆದರೆ ಅದನ್ನು ಅಸ್ಸಾಂ ಸರ್ಕಾರ ತದೆಡಿದು. ಇದು ಒಂದು ರೀತಿಯ ಸೂಪರ್ ಎಮೆರ್ಜನ್ಸಿ ಎಂದಿದ್ದಾರೆ. 



ಟಿಎಂಸಿ ಸಂಸದರಾದ ಸುಖೇಂದ್ ಶೇಖರ್ ರೇ, ಕಕೊಲಿ ಘೋಷ್ ದಸ್ತಿದಾರ್, ನದೀಮುಲ್ ಹಕ್ ಮತ್ತು ಆರ್ಪಿತಾ ಘೋಷ್, ಪಶ್ಚಿಮ ಬಂಗಾಳ ಮಂತ್ರಿ ಫಿರ್ಹಾದ್ ಸೇರಿದಂತೆ ಇತರರನ್ನು ಒಳಗೊಂಡ ನಿಯೋಗವು ಇಂದು ಮಧ್ಯಾಹ್ನ 1.30ಕ್ಕೆ ಸಿಲ್ಚಾರ್ ವಿಮಾನ ನಿಲ್ದಾಣವನ್ನು ತಲುಪಿತ್ತು.