ಭೋಪಾಲ್: ಮಧ್ಯಪ್ರದೇಶ ಸರ್ಕಾರ ಸೋಮವಾರ ಕ್ಯಾಬಿನೆಟ್ ಸಭೆಯಲ್ಲಿ ಎರಡು ಮಹತ್ವದ ನಿರ್ಧಾರಗಳನ್ನು ಕೈಗೊಂಡಿದೆ. ಮೊದಲನೆಯದಾಗಿ, ನೌಕರರು ಮತ್ತು ಪಿಂಚಣಿದಾರರಿಗೆ 3% ತುಟ್ಟಿ ಭತ್ಯೆ ನೀಡಲು ನಿರ್ಧರಿಸಿದೆ. ಇದು 4.5 ಲಕ್ಷ ಪಿಂಚಣಿದಾರರಿಗೆ 7 ಲಕ್ಷ ಉದ್ಯೋಗಿಗಳಿಗೆ ಲಾಭ ನೀಡುತ್ತದೆ. ಎರಡನೆಯದಾಗಿ, ಇತರ ಹಿಂದುಳಿದ ವರ್ಗಗಳಿಗೆ ರಾಜ್ಯದಲ್ಲಿ ಶೇ.27ರಷ್ಟು ಮೀಸಲಾತಿ ನೀಡುವ ಪ್ರಸ್ತಾವನೆಯನ್ನು ಸರ್ಕಾರ ಅಂಗೀಕರಿಸಿದೆ. ಒಬಿಸಿ ಮೀಸಲಾತಿಯ ಬಗ್ಗೆ ಮಾನ್ಸೂನ್ ಅಧಿವೇಶನದಲ್ಲಿ ಚರ್ಚಿಸಲಾಗುವುದು. ಮುಖ್ಯಮಂತ್ರಿ ಕಮಲ್ ನಾಥ್ ಅವರು ಚುನಾವಣೆಗೆ ಮುಂಚಿತವಾಗಿ ಒಬಿಸಿ ಮೀಸಲಾತಿ ಹೆಚ್ಚಳದ ಭರವಸೆ ನೀಡಿದ್ದರು.


COMMERCIAL BREAK
SCROLL TO CONTINUE READING

ಇದೀಗ ಸರ್ಕಾರ ಅಧಿಕಾರಕ್ಕೆ ಬಂದ ನಂತರ, ಒಬಿಸಿ ಮೀಸಲಾತಿಯನ್ನು 14% ರಿಂದ 27% ಹೆಚ್ಚಿಸಲು ನಿರ್ಧರಿಸಿದೆ. ಇದರ ಆದೇಶವನ್ನು ಸಹ ನೀಡಲಾಯಿತು. ಆದರೆ ಹತ್ತು ದಿನಗಳ ನಂತರ, ಮಧ್ಯಪ್ರದೇಶ ಹೈಕೋರ್ಟ್ನಲ್ಲಿ ಈ ತೀರ್ಮಾನವನ್ನು ಪ್ರಶ್ನಿಸಲಾಯಿತು ಮತ್ತು ಹೈಕೋರ್ಟ್ ಇದನ್ನು ತಡೆಹಿಡಿದಿದೆ. ರಾಜ್ಯದಲ್ಲಿ ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳಿಗೆ ಶೇ. 36 ಮೀಸಲಾತಿ ನೀಡಲಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ, ಇದೀಗ ರಾಜ್ಯ ಸರ್ಕಾರವು ಎಲ್ಲಾ ವಿಭಾಗಗಳಲ್ಲಿ ನೇಮಕಾತಿ ನಿಯಮಗಳಲ್ಲಿ ಬದಲಾವಣೆಗಳನ್ನು ಮಾಡಬೇಕಾಗಿದೆ.


ಮಧ್ಯಪ್ರದೇಶ ಸರ್ಕಾರವು ಸೋಮವಾರ ಕ್ಯಾಬಿನೆಟ್ ಸಭೆಯಲ್ಲಿ, ಮಧ್ಯಪ್ರದೇಶ ಸಾರ್ವಜನಿಕ ಸೇವೆಯಲ್ಲಿ(ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡಗಳಿಗೆ ಮೀಸಲಾತಿ) ಅನುಮೋದನೆ ನೀಡಿದೆ ಎಂದು ತಿಳಿಸಿದೆ. ರಾಜ್ಯದ ಇತರ ಹಿಂದುಳಿದ ವರ್ಗಗಳಿಗೆ 14% ರಿಂದ 27% ರವರೆಗೆ ಮೀಸಲಾತಿಯನ್ನು ಹೆಚ್ಚಿಸಲು ನಿರ್ಧರಿಸಲಾಗಿದೆ. ಈ ರೀತಿಯಾಗಿ, ಮೀಸಲಾತಿ ಹೆಚ್ಚಳದ ನಂತರ, ರಾಜ್ಯದ ಎಲ್ಲ ಇಲಾಖೆಗಳು ತಮ್ಮ ನೇಮಕಾತಿ ನಿಯಮಗಳಲ್ಲಿ ಬದಲಾವಣೆಗಳನ್ನು ಮಾಡಬೇಕಾಗುತ್ತದೆ ಎಂದು ತಿಳಿಸಿದೆ.


ಅದೇ ಸಮಯದಲ್ಲಿ, ಛತ್ರಾರ್ಪುರ್ ಜಿಲ್ಲೆಯಲ್ಲಿ ವಜ್ರ ಗಣಿಗಾರಿಕೆ ಹರಾಜಿಗೆ ಅನುಮೋದನೆ, ಉಜ್ಜಯಿನಿ ಉಪ ಉಪಗ್ರಹ ವಿಜ್ಞಾನ ಕೇಂದ್ರವನ್ನು ಸ್ಥಾಪಿಸುವುದು, ಪ್ಲಾನೆಟೇರಿಯಮ್ ವಿಸ್ತರಣೆ ಯೋಜನೆ, ಚೈಂಡ್ವಾರಾದಲ್ಲಿ ವಿಜ್ಞಾನ ಕೇಂದ್ರ ಸೇರಿದಂತೆ ಈ ಸಭೆಯಲ್ಲಿ ಸರ್ಕಾರವು ಹಲವಾರು ನಿರ್ಧಾರಗಳನ್ನು ತೆಗೆದುಕೊಂಡಿದೆ. ಜಬಲ್ಪುರ್, ಭೋಪಾಲ್ನಲ್ಲಿ  ಒಂದು ವಿಜ್ಞಾನ ನಗರವನ್ನು ನಿರ್ಮಿಸುವ ಯೋಜನೆಯನ್ನು ಒಳಗೊಂಡಿದೆ.