ಗುನಾ: ಗ್ರಾಮಾಂತರ ಮಟ್ಟದ ಅಧಿಕಾರಿಗಳಿಗೆ ಚಿಕನ್ ಮತ್ತು ಮದ್ಯವನ್ನು ತರುವಂತೆ ಡಿಮ್ಯಾಂಡ್ ಮಾಡುತ್ತಿದ್ದ ಆರೋಪದ ಮೇಲೆ ಮಧ್ಯ ಪ್ರದೇಶದ ಗುನಾ ಜಿಲ್ಲೆಯ ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್ ದಿಲೀಪ್ ಮಾಂಡವಿ ಅವರನ್ನು ಗುರುವಾರ ವರ್ಗಾವಣೆ ಮಾಡಲಾಗಿದೆ.


COMMERCIAL BREAK
SCROLL TO CONTINUE READING

ಇತ್ತೀಚೆಗೆ ಮಹಿಳಾ ಅಧಿಕಾರಿಯೊಬ್ಬರು "ಎಡಿಎಂ ದಿಲೀಪ್ ಮಂಡವಿ ಅವರ ಇಂತಹ ಬೇಡಿಕೆಗಳಿಗೆ ಆಸ್ಪದ ನೀಡಬಾರದು" ಎಂದು ಪಟ್ವಾರೀಸ್(ಗ್ರಾಮ ಮಟ್ಟದ ಕಂದಾಯ ಅಧಿಕಾರಿಗಳು)ನ ವಾಟ್ಸಪ್ ಗ್ರೂಪ್'ನಲ್ಲಿ ಮೆಸೇಜ್ ಹಾಕಿದ್ದರು. "ಯಾರೂ ಕೂಡ ಇನ್ಮುಂದೆ ಎಡಿಎಂಗೆ ಚಿಕನ್ ಕಳುಹಿಸುವಂತಿಲ್ಲ. ಒಂದು ವೇಳೆ ಯಾರಾದರೂ ಕಳುಹಿಸಿದ್ದು ಕಂಡು ಬಂದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು" ಎಂದು ಸಬ್ ಡಿವಿಶನಲ್ ಮ್ಯಾಜಿಸ್ಟ್ರೇಟ್ ಶಿವಾನಿ ಗಾರ್ಗ್ ಅವರು WhatsApp ಗ್ರೂಪ್ ನಲ್ಲಿ ಎಚ್ಚರಿಕೆ ನೀಡಿದ್ದರು.


ಈ ವಿಚಾರವನ್ನು ಗಂಭಿರವಾಗಿ ಪರಿಗಣಿಸಿದ ರಾಜ್ಯಸರ್ಕಾರ ಎಡಿಎಂ ದಿಲೀಪ್ ಮಂಡವಿ ಅವರನ್ನು ಗುನಾದಿಂದ ವರ್ಗಾಯಿಸಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.