ನೂತನ ಮಂತ್ರಿ ಗಳಿಗೆ ಟ್ವಿಟ್ಟರ್ ಖಾತೆ ಅಪ್ ಡೇಟ್ ಮಾಡಲು ಸೂಚಿಸಿದ ಓಮರ್ ಅಬ್ದುಲ್ಲಾ..!
ಪ್ರಧಾನಿ ನರೇಂದ್ರ ಮೋದಿ ಅವರ ಸಚಿವ ಸಂಪುಟದಲ್ಲಿ ನೂತನ ಮಂತ್ರಿಗಳ ಖಾತೆಗಳನ್ನು ಶುಕ್ರವಾರ ಘೋಷಿಸಲಾಗಿದೆ. ಇನ್ನು ಕೆಲವರು ಅಪ್ಡೇಟ್ ಮಾಡದ ಹಿನ್ನಲೆಯಲ್ಲಿ ಅವರಿಗೆ ನವಿಕರಿಸಲು ಸಲಹೆ ನೀಡಿದ್ದಾರೆ.
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಸಚಿವ ಸಂಪುಟದಲ್ಲಿ ನೂತನ ಮಂತ್ರಿಗಳ ಖಾತೆಗಳನ್ನು ಶುಕ್ರವಾರ ಘೋಷಿಸಲಾಗಿದೆ. ಇನ್ನು ಕೆಲವರು ಅಪ್ಡೇಟ್ ಮಾಡದ ಹಿನ್ನಲೆಯಲ್ಲಿ ಅವರಿಗೆ ನವಿಕರಿಸಲು ಸಲಹೆ ನೀಡಿದ್ದಾರೆ.
ಈ ಬಾರಿಗೆ ಮೋದಿ ಸಚಿವ ಸಂಪುಟದಲ್ಲಿ ಹಲವು ಬದಲಾವಣೆಗಳಾಗಿವೆ.ಅದರಲ್ಲಿ ಬಿಜೆಪಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಅಮಿತ್ ಷಾ ಅವರಿಗೆ ಗೃಹ ಖಾತೆ ದೊರೆತಿದೆ. ಇನ್ನೊಂದೆಡೆಗೆ ರಾಜ್ ನಾಥ್ ಸಿಂಗ್ ಅವರಿಗೆ ರಕ್ಷಣಾ ಖಾತೆಯನ್ನು ನೀಡಲಾಗಿದೆ.
ಇನ್ನು ಕಳೆದ ಸರ್ಕಾರದಲ್ಲಿ ರಕ್ಷಣಾ ಖಾತೆಯ ಜವಾಬ್ದಾರಿಯನ್ನು ಹೊತ್ತಿದ್ದ ನಿರ್ಮಲಾ ಸಿತಾರಾಮನ್ ಅವರಿಗೆ ಈ ಬಾರಿ ಹಣಕಾಸು ಖಾತೆಯನ್ನು ನೀಡಲಾಗಿದೆ. ಆ ಮೂಲಕ ಪೂರ್ಣ ಪ್ರಮಾಣದಲ್ಲಿ ಈ ಖಾತೆಯನ್ನು ವಹಿಸಿದ ಮೊದಲ ಮಹಿಳೆ ಎನ್ನುವ ಖ್ಯಾತಿಗೆ ಪಾತ್ರರಾಗಿದ್ದಾರೆ. ಈ ಸಂಪುಟದಲ್ಲಿನ ಅಚ್ಚರಿ ಬೆಳವಣಿಗೆಯಲ್ಲಿ ಮಾಜಿ ವಿದೇಶಾಂಗ ಕಾರ್ಯದರ್ಶಿ ಎಸ್ ಜೈಶಂಕರ್ ಅವರಿಗೆ ವಿದೇಶಾಂಗ ವ್ಯವಹಾರ ಖಾತೆಯ ಜವಾಬ್ದಾರಿಯನ್ನು ನೀಡಲಾಗಿದೆ.
ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲಾ "ಎಲ್ಲಾ ಮಂತ್ರಿಗಳಿಗೆ ತಮ್ಮ ಟ್ವಿಟ್ಟರ್ ಖಾತೆ ಅಪ್ಡೆಟ್ ಮಾಡಲು ಇದು ಸೂಕ್ತ ಸಮಯ ಎಂದು ಟ್ವೀಟ್ ಮಾಡಿ ನೆನಪಿಸಿದ್ದಾರೆ.