Cobra Video: ಹಾವುಗಳಿಗೆ ಸಂಬಂಧಿಸಿದ ಹಲವು ವಿಡಿಯೋಗಳನ್ನೂ ನಾವು ಆಗಾಗ್ಗೆ ಸಾಮಾಜಿಕ ಜಾಲತಾಣದಲ್ಲಿ ನೋಡಿರುತ್ತೇವೆ. ಹಾವನ್ನು ನೋಡುವುದಿರಲಿ ಅದರ ಹೆಸರನ್ನು ಕೇಳಿದೊಡನೆಯೇ ಹೆದರುವ ಹಲವು ಮಂದಿಯನ್ನು ನೀವು ನೋಡಿರಬಹುದು. ಆದರೆ ಸಾಮಾಜಿಕ ಜಾಲತಾಣದಲ್ಲಿ ನಾಗರಹಾವನ್ನು ಹಿಡಿಯುತ್ತಿರುವ ಮಹಿಳೆಯ ವಿಡಿಯೋವೊಂದು ವೈರಲ್ ಆಗುತ್ತಿದೆ. 


COMMERCIAL BREAK
SCROLL TO CONTINUE READING

ಮಹಿಳೆಯರು ಇಂದು ಎಲ್ಲಾ ಕ್ಷೇತ್ರಗಳಲ್ಲಿಯೂ ಮುಂದಿದ್ದಾರೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಆದಾಗ್ಯೂ, ಮನೆಯಲ್ಲಿ ಕಂಡು ಬರುವ ಸಣ್ಣ-ಪುಟ್ಟ ಕೀಟಗಳನ್ನು ಕಂಡು ಹೆದರುವ ಹೆಣ್ಣು ಮಕ್ಕಳಿದ್ದಾರೆ. ಆದರೆ ಇಲ್ಲೊಬ್ಬ ಮಹಿಳೆ ಅತ್ಯಂತ ವಿಷಕಾರಿ ನಾಗರಹಾವನ್ನು ಹಿಡಿಯಲು ಯತ್ನಿಸುತ್ತಿರುವುದನ್ನು ನೀವು ಕಾಣಬಹುದು. ವೈರಲ್ ವಿಡಿಯೋದಲ್ಲಿ (Snake Viral Video) ಮಹಿಳೆ ನಾಜೂಕಾಗಿ ಮತ್ತು ಅಷ್ಟೇ ಹುಷಾರಾಗಿ ನಾಗರಹಾವನ್ನು ಹಿಡಿದಿದ್ದಾರೆ. ವೀಡಿಯೋ ಕಾಣಿಸಿಕೊಂಡಾಗಿನಿಂದ ಹಾವು ಹಿಡಿದ ಮಹಿಳೆಯ ಸ್ಟೈಲ್ ಕಂಡು ಜನರು ಆಕೆಗೆ ಮೆಚ್ಚುಗೆಯನ್ನೂ ವ್ಯಕ್ತಪಡಿಸುತ್ತಿದ್ದಾರೆ.


ಇದನ್ನೂ ಓದಿ- Viral Video: ಹಾವು ಮರಿಗೆ ಜನ್ಮ ನೀಡುವುದನ್ನು ಎಂದಾದರೂ ನೋಡಿದ್ದೀರಾ? ಇಲ್ಲಿದೆ ಅಪರೂಪದ ವೈರಲ್ ವಿಡಿಯೋ


ಮಹಿಳೆ ಈ ರೀತಿ ನಾಗರ ಹಾವನ್ನು ಹಿಡಿದಿದ್ದಾರೆ:
ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ (Viral Video) ಒಂದು ಕಾಂಪೌಂಡ್ ಪಕ್ಕದಲ್ಲಿ ಅರಣ್ಯ ಇಲಾಖೆಯ ಮಹಿಳಾ ತಂಡದೊಂದಿಗೆ ಹಾವನ್ನು ರಕ್ಷಿಸುತ್ತಿರುವುದನ್ನು ಕಾಣಬಹುದು. ಮಹಿಳೆ ಮೊದಲು ಹಾವಿನ ಬಾಲವನ್ನು ಹಿಡಿದು ನಂತರ ಮರದ ಸಹಾಯದಿಂದ ಆ ಹಾವನ್ನು ಚೀಲದಲ್ಲಿ ಹಾಕಿದರು. ಮಹಿಳೆ ಹಾವು ಹಿಡಿಯುತ್ತಿದ್ದಾಗ, ದೂರದಲ್ಲಿ ನಿಂತಿದ್ದ ತಂಡದ ಸದಸ್ಯರೂ ಸಾಕಷ್ಟು ಆಘಾತಕ್ಕೊಳಗಾದರು. ಆದರೆ ಮಹಿಳೆ ತುಂಬಾ ಧೈರ್ಯದಿಂದ ಹಾವನ್ನು ಹಿಡಿದಿದ್ದಾರೆ. 


Snake Video: ಹಕ್ಕಿ ಗೂಡಿನ ಮೇಲೆ ದಾಳಿ ಮಾಡಿದ ಹಾವು; ಮುಂದೇನಾಯ್ತು, ನೀವೇ ನೋಡಿ!


IFS ಅಧಿಕಾರಿ ಪೋಸ್ಟ್ ಮಾಡಿದ ವಿಡಿಯೋ:
ಈ ವಿಡಿಯೋವನ್ನು ಐಎಫ್‌ಎಸ್ ಅಧಿಕಾರಿ ಸುಧಾ ರಾಮನ್ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಮಾಹಿತಿಯನ್ನು ನೀಡುತ್ತಾ, “ರೋಶ್ನಿ, ಧೈರ್ಯಶಾಲಿ ಅರಣ್ಯ ಸಿಬ್ಬಂದಿ, ಜನವಸತಿ ಕಟ್ಟಡದಲ್ಲಿ ಹಾವನ್ನು ರಕ್ಷಿಸಿದ್ದಾರೆ. ಹಾವು ಹಿಡಿಯುವುದರಲ್ಲಿ ಇವರದು ಟ್ರೆಂಡ್. ದೇಶಾದ್ಯಂತ ಅರಣ್ಯ ಇಲಾಖೆಗಳಲ್ಲಿ ಮಹಿಳಾ ಬಲ ಹೆಚ್ಚುತ್ತಿದೆ ಅವರು ಬರೆದಿದ್ದಾರೆ. 


ಈ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ಬಾರಿ ವೈರಲ್ ಆಗುತ್ತಿದ್ದು, ವೀಡಿಯೊವನ್ನು 200 ಕ್ಕೂ ಹೆಚ್ಚು ಬಾರಿ ರೀಟ್ವೀಟ್ ಮಾಡಲಾಗಿದೆ. ಇದಕ್ಕೆ ಸಾವಿರಾರು ಲೈಕ್ಸ್ ಕೂಡ ಬಂದಿವೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.