Snake Viral Video: ಹಾವಿನ ಗೊಂಚಲನ್ನು ಹುಳದಂತೆ ಹಿಡಿದು ಎಸೆಯುತ್ತಿರುವ ವ್ಯಕ್ತಿ, ಇಲ್ಲದೆ ಎದೆ ಝಲ್ ಎನಿಸುವ ವಿಡಿಯೋ

Snake Viral Video: ಹಾವಿನ ಹೆಸರು ಕೇಳಿದರೆ ಸಾಕು ಹಲವರಿಗೆ ಎದೆ ನಡುಗುತ್ತದೆ. ಆದರೆ ಇಲ್ಲೊಬ್ಬ ವ್ಯಕ್ತಿ ಹಗ್ಗವನ್ನು ಎತ್ತಿ ಬಿಸಾಡುವಂತೆ ಹಿಂಡು ಹಾವುಗಳನ್ನು ಹಿಡಿದು ಎಸೆಯುತ್ತಿರುವ ದೃಶ್ಯ ಸಾಮಾಜಿಕ ಮಾಧ್ಯಮದಲ್ಲಿ ಸಖತ್ ವೈರಲ್ ಆಗುತ್ತಿದೆ. 

Written by - Yashaswini V | Last Updated : Nov 19, 2021, 07:46 AM IST
  • ಸೋಶಿಯಲ್ ಮಿಡಿಯಾದಲ್ಲಿ ವಿವಿಧ ವಿಚಿತ್ರ ವೈರಲ್ ವೀಡಿಯೊಗಳು ಕಂಡು ಬರುತ್ತವೆ
  • ಹಲವು ಸಂದರ್ಭಗಳಲ್ಲಿ ಈ ವಿಡಿಯೋಗಳನ್ನು ಕಂಡು ನೆಟ್ಟಿಗರು ತಮ್ಮ ಒತ್ತಡ ಮರೆತು ಒಂದಿಷ್ಟು ಮೋಜಿನ ಕ್ಷಣಗಳನ್ನು ಕಳೆಯುತ್ತಾರೆ
  • ಆದರೆ ಕೆಲವೊಮ್ಮೆ ಕೆಲವುವ್ ವಿಡಿಯೋಗಳನ್ನು ಕಂಡು ಎದೆ ಝಲ್ ಎಂದೆನಿಸುತ್ತದೆ
Snake Viral Video: ಹಾವಿನ ಗೊಂಚಲನ್ನು ಹುಳದಂತೆ ಹಿಡಿದು ಎಸೆಯುತ್ತಿರುವ ವ್ಯಕ್ತಿ, ಇಲ್ಲದೆ ಎದೆ ಝಲ್ ಎನಿಸುವ ವಿಡಿಯೋ title=
Man catching snake video

Snake Viral Video: ಇಂಟರ್ನೆಟ್ ಜಗತ್ತು ಒಂದು ಮೋಜಿನ ಜಗತ್ತು. ನಾವು ಪ್ರತಿದಿನ ಇಲ್ಲಿ ಹಲವಾರು ವಿಭಿನ್ನ ವೀಡಿಯೊಗಳನ್ನು ನೋಡುತ್ತೇವೆ. ಇಂಟರ್‌ನೆಟ್‌ನಲ್ಲಿ ನಾವು ನೋಡುವ ವೀಡಿಯೋಗಳಲ್ಲಿನ ಅನೇಕ ವಿಷಯಗಳು ಕೆಲವೊಮ್ಮೆ ನಮ್ಮನ್ನು ನಗುವಂತೆ ಮಾಡುತ್ತದೆ, ಕೆಲವೊಮ್ಮೆ ನಮ್ಮನ್ನು ಯೋಚಿಸುವಂತೆ ಮಾಡುತ್ತದೆ, ಕೆಲವೊಮ್ಮೆ ಆಶ್ಚರ್ಯವನ್ನುಂಟು ಮಾಡುತ್ತದೆ, ಕೆಲವೊಮ್ಮೆ ನಮಗೆ ಆಘಾತವನ್ನುಂಟು ಮಾಡುತ್ತದೆ. 

ಸೋಶಿಯಲ್ ಮಿಡಿಯಾದಲ್ಲಿ ವಿವಿಧ ವಿಚಿತ್ರ ವೈರಲ್ ವೀಡಿಯೊಗಳು ಕಂಡು ಬರುತ್ತವೆ. ಹಲವು ಸಂದರ್ಭಗಳಲ್ಲಿ ಈ ವಿಡಿಯೋಗಳನ್ನು ಕಂಡು ನೆಟ್ಟಿಗರು ತಮ್ಮ ಒತ್ತಡ ಮರೆತು ಒಂದಿಷ್ಟು ಮೋಜಿನ ಕ್ಷಣಗಳನ್ನು ಕಳೆಯುತ್ತಾರೆ. ಆದರೆ ಕೆಲವೊಮ್ಮೆ ಕೆಲವುವ್ ವಿಡಿಯೋಗಳನ್ನು ಕಂಡು ಎದೆ ಝಲ್ ಎಂದೆನಿಸುತ್ತದೆ. ಇತ್ತೀಚಿನ ದಿನದಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಹೆಚ್ಚು ವೈರಲ್ ಆಗುವ ವಿಡಿಯೋಗಳಲ್ಲಿ ಹಾವಿನ ವೈರಲ್ ವಿಡಿಯೋಗಳು (Snake Viral Video) ಹೆಚ್ಚಾಗಿ ಕಂಡು ಬರುತ್ತವೆ. ಹಾವುಗಳ ವೀಡಿಯೋಗಳು ಅಂತರ್ಜಾಲದಲ್ಲಿ ರಾಕಿಂಗ್ ಮಾಡುತ್ತಿವೆ ಎಂದರೂ ತಪ್ಪಾಗಲಾರದು.

ಇದನ್ನೂ ಓದಿ- Viral Video: ಸಮುದ್ರದಲ್ಲಿ ದೈತ್ಯ ಹಾವಿನ ಜಲಕ್ರೀಡೆ, ನೋಡಿ ವೈರಲ್ ವಿಡಿಯೋ

ಸಾಮಾನ್ಯವಾಗಿ ಹಾವಿನ ಹೆಸರು ಕೇಳಿದರೆ ಸಾಕು ಹಲವರಿಗೆ ಎದೆ ನಡುಗುತ್ತದೆ. ಆದರೆ ಇಲ್ಲೊಬ್ಬ ವ್ಯಕ್ತಿ ಹಗ್ಗವನ್ನು ಎತ್ತಿ ಬಿಸಾಡುವಂತೆ ಹಿಂಡು ಹಾವುಗಳನ್ನು ಹಿಡಿದು ಎಸೆಯುತ್ತಿರುವ ದೃಶ್ಯ ಸಾಮಾಜಿಕ ಮಾಧ್ಯಮದಲ್ಲಿ ಸಖತ್ ವೈರಲ್ ಆಗುತ್ತಿದೆ. 

ಸರ್ಪವನ್ನು ಕಂಡರೆ ಸೈನ್ಯವೂ ನಡುಗುತ್ತದೆ ಎಂಬ ಮಾತಿದೆ. ಆದರೆ ಇದಕ್ಕೆ ತದ್ವಿರುದ್ದವಾಗಿ ಇಲ್ಲೊಬ್ಬ ವ್ಯಕ್ತಿ ಒಂದಲ್ಲಾ, ಎರಡಲ್ಲಾ, ಮೂರಲ್ಲಾ ಹಾವಿನ ಸೈನ್ಯವನ್ನು ಸಣ್ಣ ಹುಳಗಳಂತೆ ಎತ್ತಿ ಕಾಡಿಗೆ ಬಿಸಾಡುತ್ತಿದ್ದಾನೆ. ಸದ್ಯ ಅಂತರ್ಜಾಲದಲ್ಲಿ (Social Media) ಈ ವಿಡಿಯೋ ಸಖತ್ ಸದ್ದು ಮಾಡುತ್ತಿದೆ. 

ಇದನ್ನೂ ಓದಿ- Viral Video: ಸಿಂಹದ ವೇಷದಲ್ಲಿ ಇದ್ದಕ್ಕಿದ್ದಂತೆ ಉದ್ಯಾನವನಕ್ಕೆ ಪ್ರವೇಶಿಸಿದ ನಾಯಿ, ಮುಂದೆ...

ವಾಸ್ತವವಾಗಿ ಈ ದೃಶ್ಯವನ್ನು ನೋಡಿದರೆ ಜನರು ಓಡಾಡುವ ರಸ್ತೆಯ ಬದಿಯಲ್ಲಿ ಹಾವುಗಳು ಇದ್ದಂತೆ ತೋರುತ್ತದೆ. ರಸ್ತೆಯ ಬಳಿ ದಟ್ಟವಾದ ಕಾಡನ್ನೂ ನೋಡಬಹುದು. ಲೆಕ್ಕವಿಲ್ಲದಷ್ಟು ಹಾವುಗಳು ಆ ಕಾಡಿನಿಂದ ರಸ್ತೆಗೆ ಬರಲು ಯತ್ನಿಸುತ್ತಿವೆ. ಈ ಸಂದರ್ಭದಲ್ಲಿ ಒಬ್ಬ ವ್ಯಕ್ತಿ ರಸ್ತೆಗೆ ನುಗ್ಗುವ ಹಾವುಗಳನ್ನು ಒಂದೊಂದಾಗಿ ಮತ್ತೆ ಪೊದೆಗೆ ಎಸೆಯುತ್ತಾನೆ. ಇದು ನೋಡುಗರನ್ನು ಬೆಚ್ಚಿ ಬೀಳಿಸುತ್ತದೆ. 

ಹಾವು ಹಿಡಿದು ಜನಪ್ರಿಯರಾದ ವ್ಯಕ್ತಿಯ ವಿಡಿಯೋ ಇಲ್ಲಿದೆ:

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News