ನವದೆಹಲಿ: Home Ministry Advisory On Omicron - ಕೊರೊನಾವೈರಸ್‌ನ ಹೊಸ ರೂಪಾಂತರವಾದ ಓಮಿಕ್ರಾನ್ ಬಗ್ಗೆ ಕೇಂದ್ರ ಗೃಹ ಸಚಿವಾಲಯವು ಗಂಭೀರವಾಗಿದೆ. ಓಮಿಕ್ರಾನ್ ಆತಂಕವನ್ನು ಗಮನದಲ್ಲಿಟ್ಟುಕೊಂಡು, ಗೃಹ ಸಚಿವಾಲಯವು ರಾಜ್ಯಗಳಿಗೆ ಸಲಹೆಗಳನ್ನು ಜಾರಿಗೊಳಿಸಿದೆ. ಕೇಂದ್ರ ಗೃಹ ಸಚಿವಾಲಯವು ತನ್ನ ಆದೇಶದಲ್ಲಿ ಎಲ್ಲಾ ರಾಜ್ಯಗಳು ಅಂತರಾಷ್ಟ್ರೀಯ ಪ್ರಯಾಣಿಕರ ಸಂಪರ್ಕ ಪತ್ತೆಯನ್ನು ಸರಿಯಾದ ರೀತಿಯಲ್ಲಿ ನಡೆಸಲಾಗುತ್ತಿದೆ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಹೇಳಿದೆ.


COMMERCIAL BREAK
SCROLL TO CONTINUE READING

ಈ ಸಲಹೆಗಳು  ಡಿಸೆಂಬರ್ 31 ರವರೆಗೆ ಜಾರಿಯಲ್ಲಿರುತ್ತದೆ
ಇದಕ್ಕೂ ಮುನ್ನ ನವೆಂಬರ್ 25 ರಂದು ಆರೋಗ್ಯ ಸಚಿವಾಲಯವು ಮಾರ್ಗಸೂಚಿಗಳನ್ನು ಹೊರಡಿಸಿತ್ತು. ಆರೋಗ್ಯ ಸಚಿವಾಲಯದ ಸೂಚನೆಯ ಮೇರೆಗೆ ಗೃಹ ಸಚಿವಾಲಯವು (Home Ministry) ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸಲಹೆಯನ್ನು ನೀಡಿದೆ. ಗೃಹ ಸಚಿವಾಲಯದ ಮಾರ್ಗಸೂಚಿಗಳು ಡಿಸೆಂಬರ್ 31 ರವರೆಗೆ ಜಾರಿಯಲ್ಲಿರುತ್ತವೆ. ಕೋವಿಡ್ ತಡೆಗಟ್ಟಲು ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಅನುಸರಿಸಬೇಕು ಎಂದು ಗೃಹ ಸಚಿವಾಲಯದ ಸಲಹೆಯಲ್ಲಿ ಉಲ್ಲೇಖಿಸಲಾಗಿದೆ.


ಕರ್ನಾಟಕದಲ್ಲಿ ಓಮಿಕ್ರಾನ್ ಆತಂಕ
ಇತ್ತೀಚೆಗೆ ಇಬ್ಬರು ದಕ್ಷಿಣ ಆಫ್ರಿಕಾದಿಂದ (South Africa) ಕರ್ನಾಟಕದ ಬೆಂಗಳೂರಿನಲ್ಲಿ ಬಂದಿಳಿದ ಇಬ್ಬರ ವರದಿಯಲ್ಲಿ ಕೊರೊನಾ (Coronavirus) ಪಾಸಿಟಿವ್ ಬಂದಿದೆ. ಈ ಮಾದರಿಗಳಲ್ಲಿ ಒಂದರಲ್ಲಿ, ಡೆಲ್ಟಾ ರೂಪಾಂತರವನ್ನು ದೃಢೀಕರಿಸಲಾಗಿದೆ, ಆದರೆ ಮತ್ತೊಂದು ಮಾದರಿಯು ಡೆಲ್ಟಾಕ್ಕಿಂತ ವಿಭಿನ್ನವಾದ ರೂಪಾಂತರವನ್ನು ಹೊಂದಿದೆ, ಇದು ಓಮಿಕ್ರಾನ್ (Omicron Symptoms) ಆಗಿದೆಯೇ ಎಂಬ ಆತಂಕ ಎದುರಾಗಿದೆ. ಈ ವಿಷಯ ಬೆಳಕಿಗೆ ಬಂದ ನಂತರ, ಕರ್ನಾಟಕ ಸರ್ಕಾರವು ಕೇಂದ್ರ ಸರ್ಕಾರ ಮತ್ತು ICMR ನೊಂದಿಗೆ ನಿರಂತರ ಸಂಪರ್ಕದಲ್ಲಿದೆ. ICMR ದೃಢೀಕರಣಕ್ಕಾಗಿ ಕಾಯಲಾಗುತ್ತಿದೆ.


ಇದನ್ನೂ ಓದಿ-'Omicron' ಗಂಭೀರ ರೂಪಾಂತರಿಯಲ್ಲ, ರಾಜ್ಯ ಆರೋಗ್ಯ ಸಚಿವ ಕೆ. ಸುಧಾಕರ್ ಹೇಳಿಕೆ


ವಿಶ್ವದ 17 ದೇಶಗಳಿಗೆ ತಲುಪಿದ ಓಮಿಕ್ರಾನ್
ಕೋವಿಡ್-19 ರ ಹೊಸ ರೂಪಾಂತರಿ ಓಮಿಕ್ರಾನ್ ಅನ್ನು ಮೊದಲು ದಕ್ಷಿಣ ಆಫ್ರಿಕಾದಲ್ಲಿ ಪತ್ತೆಹಚ್ಚಲಾಗಿದೆ. ಅಂದಿನಿಂದ ಈ ರೂಪಾಂತರವು 17 ದೇಶಗಳಲ್ಲಿ ಕಂಡುಬಂದಿದೆ. ಅನೇಕ ದೇಶಗಳು ದಕ್ಷಿಣ ಆಫ್ರಿಕಾಕ್ಕೆ ವಿಮಾನಗಳನ್ನು ನಿಷೇಧಿಸಿವೆ.


ಇದನ್ನೂ ಓದಿ-Petrol-Diesel Price Drop: ಕೇಳಲು ವಿಚಿತ್ರ ಎನಿಸಬಹುದು ಆದರೆ... Omicronನಿಂದ Petrol-Diesel ಬೆಲೆ ಇಳಿಕೆ ಸಾಧ್ಯತೆ!


ಏತನ್ಮಧ್ಯೆ, ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ (Mansukh Mandavia) ಮಾತನಾಡಿ, ಭಾರತದಲ್ಲಿ (India) ಕರೋನದ ಹೊಸ ರೂಪಾಂತರಿ ಒಮಿಕ್ರಾನ್‌ನ ಒಂದೂ ಪ್ರಕರಣವೂ ಕಂಡುಬಂದಿಲ್ಲ ಆದರೆ, ನಾವು ಜಾಗರೂಕರಾಗಿರಬೇಕಾದ ಸನ್ನಿವೇಶ ಇದೆ ಎಂದು ಹೇಳಿದ್ದಾರೆ. 


ಇದನ್ನೂ ಓದಿ-Lockdown in Karnataka : ರಾಜ್ಯದಲ್ಲಿ ಮತ್ತೆ ಲಾಕ್‌ಡೌನ್ ಜಾರಿ ಇಲ್ಲ : ಸಚಿವ ಸುಧಾಕರ್ ಸ್ಪಷ್ಟನೆ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ