'Omicron' ಗಂಭೀರ ರೂಪಾಂತರಿಯಲ್ಲ, ರಾಜ್ಯ ಆರೋಗ್ಯ ಸಚಿವ ಕೆ. ಸುಧಾಕರ್ ಹೇಳಿಕೆ

Omicron Is Not A Severe Variant - ಕರ್ನಾಟಕ ಆರೋಗ್ಯ ಸಚಿವ (Karnataka Health Minister) ಡಾ. ಕೆ ಸುಧಾಕರ್ (Dr. K.Sudhakar) ಅವರು ಕೊರೊನಾ ಹೊಸ ರೂಪಾಂತರಿ 'ಓಮಿಕ್ರಾನ್; ಕುರಿತು ಮಾತನಾಡಿದ್ದಾರೆ. ದಕ್ಷಿಣ ಆಫ್ರಿಕಾದಲ್ಲಿ (South Africa) ವೃತ್ತಿಪರ ವೈದ್ಯರಾಗಿರುವ ತನ್ನ ಸ್ನೇಹಿತನೊಂದಿಗೆ ತಾವು ಓಮಿಕ್ರಾನ್ ಕುರಿತು ಚರ್ಚೆ ನಡೆಸಿರುವುದಾಗಿ ಅವರು ಹೇಳಿದ್ದಾರೆ. 

Written by - Nitin Tabib | Last Updated : Nov 29, 2021, 09:49 PM IST
  • ಕೊರೊನಾ ಹೊಸ ರೂಪಾಂತರಿ ಓಮಿಕ್ರಾನ್ ಅಪಾಯಕಾರಿಯಲ್ಲ
  • ರಾಜ್ಯ ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಹೇಳಿಕೆ
  • ದ.ಆಫ್ರಿಕಾದ ತಮ್ಮ ಸಹಪಾಠಿ ವೈದ್ಯರೊಂದಿಗೆ ಈ ಕುರಿತು ಚರ್ಚಿಸಿರುವುದಾಗಿ ಹೇಳಿದ ಸಚಿವರು.
'Omicron' ಗಂಭೀರ ರೂಪಾಂತರಿಯಲ್ಲ, ರಾಜ್ಯ ಆರೋಗ್ಯ ಸಚಿವ ಕೆ. ಸುಧಾಕರ್ ಹೇಳಿಕೆ

Omicron Is Not A Severe Variant - ಕರ್ನಾಟಕ ಆರೋಗ್ಯ ಸಚಿವ (Karnataka Health Minister) ಡಾ. ಕೆ ಸುಧಾಕರ್ (Dr. K.Sudhakar) ಅವರು ಕೊರೊನಾ ಹೊಸ ರೂಪಾಂತರಿ 'ಓಮಿಕ್ರಾನ್; ಕುರಿತು ಮಾತನಾಡಿದ್ದಾರೆ. ದಕ್ಷಿಣ ಆಫ್ರಿಕಾದಲ್ಲಿ (South Africa) ವೃತ್ತಿಪರ ವೈದ್ಯರಾಗಿರುವ ತನ್ನ ಸ್ನೇಹಿತನೊಂದಿಗೆ ತಾವು ಓಮಿಕ್ರಾನ್ ಕುರಿತು ಚರ್ಚೆ ನಡೆಸಿರುವುದಾಗಿ ಅವರು ಹೇಳಿದ್ದಾರೆ. ಓಮಿಕ್ರಾನ್‌ (Omicron) ಗೆ ಹೆಚ್ಚು ಭಯಪಡುವ ಅಗತ್ಯವಿಲ್ಲ ಎಂದು ಅವರು ಹೇಳಿದ್ದಾರೆ. ಓಮಿಕ್ರಾನ್ ರೂಪಾಂತರವು ಡೆಲ್ಟಾ (Delta) ಮತ್ತು ಡೆಲ್ಟಾ ಪ್ಲಸ್‌ನಂತೆ (Delta Plus) ಅಪಾಯಕಾರಿ ಅಲ್ಲ ಎಂದು ಅವರು ಹೇಳಿದ್ದಾರೆ. ಇದರ ತೀವ್ರತೆ ಗಂಭೀರವಾಗಿಲ್ಲ ಮತ್ತು ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆಯೂ ಕಡಿಮೆ ಇದೆ ಎಂದು ಸುಧಾಕರ್ ಸೋಮವಾರ ಹೇಳಿದ್ದಾರೆ.

ಕರ್ನಾಟಕದ ಆರೋಗ್ಯ ಸಚಿವರಾಗಿರುವ ಹಾಗೂ ವೈದ್ಯಕೀಯ ಶಾಸ್ತ್ರದಲ್ಲಿ ಪದವಿ ಪಡೆದಿರುವ ಡಾ.ಕೆ.ಸುಧಾಕರ್, ದಕ್ಷಿಣ ಆಫ್ರಿಕಾದ ವೃತ್ತಿಪರ ವೈದ್ಯರೊಬ್ಬರು ತಮ್ಮ ಸ್ನೇಹಿತರಾಗಿದ್ದಾರೆ. ಕರೋನಾದ (Coronavirus) ಹೊಸ ರೂಪಾನ್ತರಿಯಾದ ಓಮಿಕ್ರಾನ್ ಕುರಿತು ತಾವು ಅವರೊಂದಿಗೆ ಚರ್ಚೆ ನಡೆಸಿರುವುದಾಗಿ ಹೇಳಿದ್ದಾರೆ.  ಒಮಿಕ್ರಾನ್‌ನ ಲಕ್ಷಣಗಳ ಕುರಿತು ಮಾತನಾಡಿದ ಸಚಿವರು, ವೈದ್ಯರು ಹೇಳಿದಂತೆ ಇದು ಜನರಿಗೆ ವಾಕರಿಕೆ ಮತ್ತು ವಾಂತಿಯನ್ನು ಉಂಟುಮಾಡುತ್ತದೆ ಆದರೆ, ಈ ರೂಪಾಂತರಿಯಿಂದ ರುಚಿ ಮತ್ತು ವಾಸನೆ ಗ್ರಹಿಕೆ ಸಾಮರ್ಥ್ಯ ಹೋಗುವುದಿಲ್ಲ ಎಂದು ಅವರು ಹೇಳಿದ್ದಾರೆ. 

ಇದನ್ನೂ ಓದಿ-Omicron Scare: 7 ದಿನಗಳ ಕಾಲ ಕಡ್ಡಾಯ ಹೋಮ್ ಕ್ವಾರೆಂಟೈನ್

ಈ ಕುರಿತು PTI ಸುದ್ದಿ ಸಂಸ್ಥೆಗೆ ಮಾಹಿತಿ ನೀಡಿದ ಅವರು, "ದಕ್ಷಿಣ ಆಫ್ರಿಕಾದಲ್ಲಿ ನನ್ನ ಸಹಪಾಠಿ ಜೊತೆಗೆ  ಮಾತನಾಡಿದ ನಂತರ ನನಗೆ ತೃಪ್ತಿ ನೀಡಿದ ವಿಷಯವೆಂದರೆ,   ಓಮಿಕ್ರಾನ್ ರೂಪಾಂತರಿ ವೇಗವಾಗಿ ಹರಡುತ್ತದೆ, ಆದರೆ ಅದು ಡೆಲ್ಟಾದಷ್ಟು ಅಪಾಯಕಾರಿ ಅಲ್ಲ. ಜನರು ವಾಕರಿಕೆ ಮತ್ತು ವಾಂತಿಯನ್ನು ಅನುಭವಿಸುತ್ತಾರೆ ಮತ್ತು ಕೆಲವೊಮ್ಮೆ ನಾಡಿ ಬಡಿತದ ದರ ಹೆಚ್ಚಾಗುತ್ತದೆ, ಆದರೆ ರುಚಿ ಮತ್ತು ವಾಸನೆಯು ಕಳೆದುಹೋಗುವುದಿಲ್ಲ. ಇದರ ತೀವ್ರತೆ ಗಂಭೀರವಾಗಿಲ್ಲದ ಕಾರಣ ಇದರಿಂದ ಆಸ್ಪತ್ರೆಗೆ ದಾಖಲಾಗುವ ರೋಗಿಗಳ ಸಂಖ್ಯೆಯೂ ಕೂಡ ಕಡಿಮೆ ಇದೆ" ಎಂದು ಹೇಳಿದ್ದಾರೆ. 

ಇದನ್ನೂ ಓದಿ-Omicron Variant: Corona Vaccine ಮೇಲೆ ಭಾರಿ ಬೀಳಲಿದೆ ಓಮಿಕ್ರಾನ್ ರೂಪಾಂತರಿ? AIIMS ವೈದ್ಯರು ನೀಡಿದ ಹೇಳಿಕೆಯಿಂದ ಹೆಚ್ಚಾದ ಆತಂಕ

ದಕ್ಷಿಣ ಆಫ್ರಿಕಾದಿಂದ ರಾಜ್ಯಕ್ಕೆ ಬಂದಿಳಿದ ಇಬ್ಬರು ಪ್ರಯಾಣಿಕರಿಗೆ ಕೋವಿಡ್-19 ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಕರ್ನಾಟಕವನ್ನು ಹೈ ಅಲರ್ಟ್ ಮಾಡಲಾಗಿದೆ. ಅವರು ಡೆಲ್ಟಾ ರೂಪಾಂತರದಿಂದ ಸೋಂಕಿಗೆ ಒಳಗಾಗಿದ್ದಾರೆ ಎಂದು ಈಗಾಗಲೇ ಹೇಳಲಾಗಿದ್ದರೂ. ಅವರಲ್ಲಿ ಒಬ್ಬರು ಡೆಲ್ಟಾಕ್ಕಿಂತ ಭಿನ್ನವಾಗಿರುವ ಯಾವುದೋ ಒಂದು ಕಾಯಿಲೆಯಿಂದ ಬಳಲುತ್ತಿದ್ದಾರೆ ಎಂದು ಆರೋಗ್ಯ ಸಚಿವರು ಸೋಮವಾರ ಹೇಳಿದ್ದಾರೆ. ಹೆಚ್ಚಿನ ವಿವರಗಳನ್ನು ನೀಡದೆ, ಹೆಚ್ಚಿನ ಸ್ಪಷ್ಟೀಕರಣಕ್ಕಾಗಿ ಡೆಲ್ಟಾಕ್ಕೆ ಹೊಂದಿಕೆಯಾಗದ ಈ ರೂಪಾಂತರದ ಬಗ್ಗೆ ಸರ್ಕಾರವು ಈಗಾಗಲೇ ಕೇಂದ್ರಕ್ಕೆ ತಿಳಿಸಿದೆ ಎಂದು ಸಚಿವರು ಹೇಳಿದ್ದಾರೆ. ಕೋವಿಡ್-19 ಕುರಿತ ತಾಂತ್ರಿಕ ಸಲಹಾ ಸಮಿತಿಯ ಸದಸ್ಯರು ಪಾಲ್ಗೊಳ್ಳುವ ಸಭೆಯನ್ನು ಮಂಗಳವಾರ ರಾಜ್ಯ ಸರ್ಕಾರ ಕರೆಯಲಿದೆ ಎಂದು ಸಚಿವರು ಹೇಳಿದ್ದಾರೆ. 

ಇದನ್ನೂ ಓದಿ-Omicron ಭೀತಿ: ಕೊರೊನಾ ಪರೀಕ್ಷೆ, ಕಣ್ಗಾವಲು ಹೆಚ್ಚಿಸಲು ರಾಜ್ಯಗಳಿಗೆ ಕೇಂದ್ರ ಸೂಚನೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ. 

More Stories

Trending News