ಭಾರತದಲ್ಲಿ ಓಮಿಕ್ರಾನ್ ಹೊಸ ಸ್ಟ್ರೈನ್:  ರಾಷ್ಟ್ರ ರಾಜಧಾನಿ ದೆಹಲಿ ಮತ್ತು ಇತರ ರಾಜ್ಯಗಳಲ್ಲಿ ಹೆಚ್ಚುತ್ತಿರುವ ಕೋವಿಡ್-19 ಪ್ರಕರಣಗಳ ಮಧ್ಯೆ ಹೆಚ್ಚು ಅಪಾಯಕಾರಿಯಾದ ಒಮಿಕ್ರಾನ್‌ನ ಹಲವು ಹೊಸ ರೂಪಾಂತರಗಳು ಆತಂಕ ಹೆಚ್ಚಿಸಿವೆ.  ಓಮಿಕ್ರಾನ್‌ನ ಹೊಸ  ಈ ಹೊಸ ತಳಿಗಳು ಮೂಲ ಒಮಿಕ್ರಾನ್‌ ವೈರಸ್‌ಗಿಂತ 20-30 ಪ್ರತಿಶತ ಹೆಚ್ಚು ಸಾಂಕ್ರಾಮಿಕವಾಗಿವೆ ಎಂದು ಹೇಳಲಾಗುತ್ತಿದೆ.


COMMERCIAL BREAK
SCROLL TO CONTINUE READING

ಭಾರತೀಯ SARS-CoV-2 ಜೀನೋಮಿಕ್ಸ್ ಕನ್ಸೋರ್ಟಿಯಂ (INSACOG) ಶುಕ್ರವಾರ ಕೋವಿಡ್-19  ರೂಪಾಂತರಗಳ ಜೀನೋಮಿಕ್ ಕಣ್ಗಾವಲು ಡೇಟಾವನ್ನು ಪರಿಶೀಲಿಸುತ್ತದೆ ಎಂದು ಮೂಲಗಳು ತಿಳಿಸಿವೆ.


ಪ್ರಸ್ತುತ ಹೆಚ್ಚುತ್ತಿರುವ ತಳಿಗಳು ಓಮಿಕ್ರಾನ್ ಉಪ-ವ್ಯತ್ಯಯಗಳಿಗಿಂತ 20-30 ಪ್ರತಿಶತ ಹೆಚ್ಚು ಸಾಂಕ್ರಾಮಿಕವಾಗಿವೆ ಎಂದು ಕೋವಿಡ್ ವರ್ಕಿಂಗ್ ಗ್ರೂಪ್ ನ್ಯಾಷನಲ್ ಟೆಕ್ನಿಕಲ್ ಅಡ್ವೈಸರಿ ಗ್ರೂಪ್ ಆನ್ ಇಮ್ಯುನೈಸೇಶನ್ (ಎನ್‌ಟಿಎಜಿಐ) ಅಧ್ಯಕ್ಷರಾದ ಡಾ ಎನ್‌ಕೆ ಅರೋರಾ ಹೇಳಿದ್ದಾರೆ. 


ಇದನ್ನೂ ಓದಿ- ಆಗಸ್ಟ್ 16ಕ್ಕೆ ಬಿಹಾರ ಸರ್ಕಾರದ ನೂತನ ಸಂಪುಟ ವಿಸ್ತರಣೆ ಸಾಧ್ಯತೆ


ಒಮಿಕ್ರಾನ್‌ ತಳಿಗಳನ್ನು  BA.4, BA.5, BA.2.75, BA.2.38 ಎಂದು ಗುರುತಿಸಲಾಗಿದೆ. ಆದಾಗ್ಯೂ, ಈ ಹೊಸ ತಳಿಯ ಸೋಂಕಿತರು ಹೆಚ್ಚು ಆಸ್ಪತ್ರೆಗೆ ದಾಖಲಾದ ಬಗ್ಗೆ ಯಾವುದೇ ಅಂಕಿ-ಅಂಶಗಳು ಕಂಡು ಬಂದಿಲ್ಲ ಎಂದು ಡಾ. ಎನ್‌ಕೆ ಅರೋರಾ ತಿಳಿಸಿದ್ದಾರೆ.


ಜುಲೈ 11 ರಂದು INSACOG ಹೊರಡಿಸಿದ ಬುಲೆಟಿನ್ ಪ್ರಕಾರ, ಒಮಿಕ್ರಾನ್‌ ತ್ತು ಅದರ ಹೊಸ ರೂಪಾಂತರಗಳು ಭಾರತದಲ್ಲಿ ಪ್ರಮುಖವಾಗಿ ಹರಡುತ್ತಿವೆ. "BA.2.75 ಉಪ-ವ್ಯತ್ಯಯವು ಸ್ಪೈಕ್ ಪ್ರೊಟೀನ್ ಮತ್ತು SARS-CoV-2 ನ ಇತರ ಜೀನ್‌ಗಳಲ್ಲಿ ಹೆಚ್ಚಿನ ರೂಪಾಂತರಗಳನ್ನು ಪಡೆದುಕೊಂಡಿದೆ ಮತ್ತು ರೂಪಾಂತರವನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡಲಾಗುತ್ತಿದೆ" ಎಂದು ಅವರು ಮಾಹಿತಿ ನೀಡಿದ್ದಾರೆ.


ಇದನ್ನೂ ಓದಿ- ಕರೋನಾ ಹೆಚ್ಚಳ: ರಾಷ್ಟ್ರ ರಾಜಧಾನಿಯಲ್ಲಿ ಮಾಸ್ಕ್ ಕಡ್ಡಾಯ


INSACOG ಅನ್ನು ಕೇಂದ್ರ ಆರೋಗ್ಯ ಸಚಿವಾಲಯ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆ  ಜೊತೆಗೆ ಕೌನ್ಸಿಲ್ ಆಫ್ ಸೈಂಟಿಫಿಕ್ ಅಂಡ್ ಇಂಡಸ್ಟ್ರಿಯಲ್ ರಿಸರ್ಚ್  ಮತ್ತು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ಜಂಟಿಯಾಗಿ ಪ್ರಾರಂಭಿಸಿದೆ. 


ಹೆಚ್ಚುತ್ತಿರುವ ಕೊರೊನಾ ಸೋಂಕು ಮತ್ತು ಮುಂಬರುವ ಹಬ್ಬಗಳ ಹಿನ್ನೆಲೆಯಲ್ಲಿ, ಜನರು ಹೆಚ್ಚು ಜಾಗರೂಕರಾಗಿರಬೇಕು. ಸಾರ್ವಜನಿಕ ಸ್ಥಳಗಳಲ್ಲಿ  ಫೇಸ್‌ಮಾಸ್ಕ್ ಬಳಸಿ, ಆಗಾಗ್ಗೆ ಸ್ಯಾನಿಟೈಸರ್ ಬಳಸುವುದು ಮತ್ತು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದು ಅವಶ್ಯಕ ಎಂದು ವೈದ್ಯರು ಸಲಹೆ ನೀಡಿದ್ದಾರೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.