ISRO's 1st mission of 2024: ಹೊಸ ವರ್ಷದ ಸಂಭ್ರಮದಾಚರಣೆಯೊಂದಿಗೆ ಹೊಸ ವರ್ಷದ ಮೊದಲ ಮುಂಜಾನೆಯೇ ಇಸ್ರೋ ಮಹತ್ವ ಯೋಜನೆಗೆ ಕೈಹಾಕಿದೆ. ಚಂದ್ರನ ಮೇಲೆ ಚಂದ್ರಯಾನ-3 ಯಶಸ್ವಿ ಲ್ಯಾಂಡಿಂಗ್. ಆದಿತ್ಯ-L1 ಯಶಸ್ವಿ ಉಡಾವಣೆ. ಗಗನ್‌ಯಾನ ಯಶಸ್ವಿ ಪರೀಕ್ಷಾರ್ಥ ಉಡಾವಣೆ ಬಳಿಕ ಇಸ್ರೋ ಇದೀಗ ಹೊಸ ಉಡಾವಣೆಗೆ ಸಿದ್ಧತೆ ನಡೆಸಿದೆ.


COMMERCIAL BREAK
SCROLL TO CONTINUE READING

ಸೋಮವಾರ ಮುಂಜಾನೆಯಂದು ಶ್ರೀ ಹರಿಕೋಟಾದಲ್ಲಿ ಇಸ್ರೋ ಪಿಎಸ್‌ಎಲ್‌ ವಿ-ಸಿ58  ಮುಖಾಂತರ ಎಕ್ಸ್‌ಪೋಸ್ಯಾಟ್ ಎಂಬ ಉಪಗ್ರಹವನ್ನು ಬಾಹ್ಯಾಕಾಶಕ್ಕೆ ಹಾರಿಸುವ ಮೂಲಕ ಮತ್ತೊಂದು ಇತಿಹಾಸ ಸೃಷ್ಟಿಸಲು ಇಸ್ರೋ ಸಜ್ಜಾಗಿದೆ.  ಭಾನುವಾರ ಬೆಳಿಗ್ಗೆ ಶ್ರೀ ಹರಿಕೋಟಾದ  ಸತೀಶ್‌ ಧವನ್‌  ನೇತೃತ್ವದಲ್ಲಿ ಬಾಹ್ಯಾಕಾಶ ಕೇಂದ್ರದಿಂದ ಈ ಒಂದು  ಮಿಷನ್‌ ಅನ್ನು ಪ್ರಾರಂಭಿಸಲಾಯಿತು. 


ಇದನ್ನೂ  ಓದಿ:  ಇಸ್ರೋದ ಎಜಿಇಒಎಸ್: ಅಂಟಾರ್ಕ್‌ಟಿಕಾದ ರಿಮೋಟ್ ಸೆನ್ಸಿಂಗ್ ನೇತೃತ್ವ


ಈ ಮಿಷನ್‌ನ ಮುಖ್ಯ ಉದ್ದೇಶವೆಂದರೆ ಇದರ ಮೂಖಾಂತರ ಕಪ್ಪು ಕುಳಿಗಳು ಮತ್ತು ಸೂಪರ್ನೋವಾಗಳಂತಹ ದೂರದ ವಿಷಯಗಳನ್ನು ಅಧ್ಯಯನ ಮಾಡಲು ಭಾರತ ಪ್ರಯತ್ನಿಸುತ್ತಿದೆ.


ಎಕ್ಸ್‌ಪೋಸ್ಯಾಟ್ ಎಂಬ ಉಪಗ್ರಹವನ್ನು ಬಾಹ್ಯಾಕಾಶಕ್ಕೆ ಕಳುಹಿಸುವುದರ ಜೊತೆ ಜೊತೆಗೆ ಇತರ 10 ಉಪಗ್ರಹಗಳನ್ನು ಸಹ ಬಾಹ್ಯಾಕಾಶಕ್ಕೆ ಕಳುಹಿಸಲಾಗಿದೆ.


ಇದನ್ನೂ  ಓದಿ:  2023 ಇಸ್ರೋ ಸಾಧನೆಯ ವರ್ಷ: ಭಾರತಕ್ಕೆ ಚಂದ್ರ - ಸೂರ್ಯರ ಅನ್ವೇಷಣೆ, ಗಗನಯಾನ ತಂದ ಹರ್ಷ


ಇದನ್ನು ಎಕ್ಸ್‌ಪೋಸ್ಟ್ ಎಕ್ಸ್-ರೇ ಪೋಲಾರಿಮೀಟರ್ ಉಪಗ್ರಹ ಎಂದು ಕರೆಯಲಾಗಿದೆ.  ಭಾರತದ ಪಿಎಸ್‌ಎಲ್‌ ಈ ಉಪಗ್ರಹವನ್ನು ಭೂಮಿಯಿಂದ 650 ಕಿಲೋ ಮೀಟರ್‌ಗಳಷ್ಟು ಕಡಿಮೆ ಭೂಮಿಯ ಕಕ್ಷೆಯಲ್ಲಿ ಇರಿಸಲಾಗಿದೆ. ಅಲ್ಲದೇ ಐದು ವರ್ಷಗಳ ಕಾಳ ಕಾರ್ಯನಿರ್ವಸುಂತೆ ಎಕ್ಸ್‌ಪೋಸ್ಯಾಟ್ ಉಪಗ್ರಹವನ್ನು ವಿನ್ಯಾಸಗೊಳಿಸಲಾಗಿದೆ. ಇದರ ಪ್ರಮುಖ ಕಾರ್ಯ ಎಕ್ಸ್‌-ರೇ ಡೇಟಾಗಳನ್ನು ಸಂಗ್ರಹಿಸುವುದರೊಂದಿಗೆ ಬ್ರಹ್ಮಾಂಡವನ್ನು ಅರ್ಥಮಾಡಿಕೊಳ್ಳಲು ಇದು ನಮಗೆ ಸಹಾಯ ಮಾಡುತ್ತದೆ. ಎಕ್ಸ್‌ಪೋಸ್ಯಾಟ್‌ವು ವೀಕ್ಷಣಾಲಯವಾಗಿ ಕೆಲಸ ಮಾಡುವ ವಿಶ್ವದ ಎರಡನೇ ಉಪಗ್ರಹವಾಗಿದೆ.


ಡಿಸೆಂಬರ್ 25 ರಂದು ಬಿಡುಗಡೆ ಸಾಧ್ಯತೆ


ಇದನ್ನೂ  ಓದಿ:  ಭಾರತದ ಗಗನಯಾನ: ಮಾನವ ಬಾಹ್ಯಾಕಾಶ ಯಾನಕ್ಕೆ ವ್ಯೋಮಮಿತ್ರಳ ಯೋಗದಾನ


XPoSAT ಉಪಗ್ರಹದ ಒಟ್ಟು ತೂಕ 480 ಕೆಜಿ. ಇದು ತಲಾ 144 ಕೆಜಿಯ ಎರಡು ಪೇಲೋಡ್‌ಗಳನ್ನು ಹೊಂದಿದೆ. ಸಂಭವನೀಯ ಉಡಾವಣೆ ಡಿಸೆಂಬರ್ 25 ಆಗಿದೆ. ಶ್ರೀ ಹರಿಕೋಟಾದ ಸತೀಶ್‌ ಧವನ್‌ ಬಾಹ್ಯಾಕಾಶ ಕೇಂದ್ರದ ಮೊದಲ ಉಡಾವಣಾ ಕೇಂದ್ರದಿಂದ ಪಿ ಎಸ್‌ ಎಲ್‌ ವಿ ರಾಕೇಟ್‌ ಮೂಲಕ ಉಡಾವಣೆ ಮಾಡಲಾವುದು. ಇದುವರೆಗೆ 59 ಪಿ ಎಸ್‌ ಎಲ್‌ ವಿ ರಾಕೇಟ್‌ ಹಾರಾಟ ನಡೆಸಲಾಗಿದ್ದು, ಅದರಲ್ಲಿ ಎರಡು ಉಡಾವಣೆಗಳು ಮಾತ್ರ ವಿಫಲವಾಗಿವೆ. ಆದರೆ ಈ ಬಾರಿ ಪಿ ಎಸ್‌ ಎಲ್‌ ವಿ ರಾಕೇಟ್‌ನ 60ನೇ ಹಾರಾಟವಾಗಿದೆ. ಇದರ ತೂಕ 320 ಟನ್‌ನಷ್ಟಿದ್ದು, ಇದರ ಎತ್ತರ 44.4 ಮೀಟರ್‌ ಆಗಿದೆ. ಅಲ್ಲದೇ ಇದು 4 ಹಂತಗಳ 208 ಮೀಟರ್‌ ವ್ಯಾಸದಿಂದ ಕೂಡಿದ ಉಪಗ್ರಹ ಇದಾಗಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.


 
ಈ ಮೈಲಿಗಲ್ಲುಗಳು ಜಾಗತಿಕ ಬಾಹ್ಯಾಕಾಶ ಆರ್ಥಿಕತೆಯಲ್ಲಿ ಭಾರತದ ಸ್ಥಾನವನ್ನು ಭದ್ರಪಡಿಸುತ್ತಿದೆ. ಭಾರತವು ಈಗ ಗುರಿಯನ್ನು ಹೊಂದಿರುವ ಇತರ ಸಾಧನೆಗಳಲ್ಲಿ ಗಗನ್‌ಯಾನ್‌ ಮಿಷನ್‌, 2035ರ ವೇಳೆಗೆ ʼ ಭಾರತೀಯ ಅಂತರಿಕ್ಷಾ ಸ್ಟೇಷನ್‌ʼ ಮತ್ತು 2040 ರ ವೇಳೆಗೆ ಮೊದಲ ಭಾರತೀಯನನ್ನು ಚಂದ್ರನಿಗೆ ಕಳುಹಿಸುವ ಗುರಿಯನ್ನು ಹೊಂದಿದೆ.