ನವದೆಹಲಿ: ಕರೋನವೈರಸ್   ಸಾಂಕ್ರಾಮಿಕ ಹರಡುವುದನ್ನು ತಡೆಗಟ್ಟಲು ಜಾರಿಗೆ ತರಲಾದ ಲಾಕ್‍ಡೌನ್ (Lockdown) ನಿಂದಾಗಿ ಭಾರತದಲ್ಲಿ ಕೈಗಾರಿಕೆಗಳು ಮತ್ತು ವ್ಯವಹಾರಗಳನ್ನು ಸ್ಥಗಿತಗೊಳಿಸಿದ್ದರಿಂದ 5 ಭಾರತೀಯರಲ್ಲಿ ಒಬ್ಬರು ಕೆಲಸವನ್ನು ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ ಎಂದು ಹೊಸ ಸಮೀಕ್ಷೆ ಬುಧವಾರ ಎಚ್ಚರಿಸಿದೆ.


COMMERCIAL BREAK
SCROLL TO CONTINUE READING

ಇಂಟರ್ನೆಟ್ ಆಧಾರಿತ ಮಾರುಕಟ್ಟೆ ಸಂಶೋಧನೆ ಮತ್ತು ದತ್ತಾಂಶ ವಿಶ್ಲೇಷಣಾ ಸಂಸ್ಥೆಯಾದ ಯೂಗೋವ್ ನಡೆಸಿದ ಸಮೀಕ್ಷೆಯ ಪ್ರಕಾರ 20% ಭಾರತೀಯರು ತಮ್ಮ ಉದ್ಯೋಗವನ್ನು ಕಳೆದುಕೊಳ್ಳುವ ಭೀತಿಯಲ್ಲಿದ್ದರೆ, 16% ಮಂದಿ ವೇತನ ಕಡಿತದ ಭೀತಿಯಲ್ಲಿ ಮತ್ತು 8% ಜನರು ವೈರಸ್ಸಿನ ಕಾರಣಕ್ಕೆ ಈ ವರ್ಷ ಬೋನಸ್ ಪಡೆಯದಿರುವ ಬಗ್ಗೆ ಚಿಂತಿತರಾಗಿದ್ದಾರೆ ಎಂದು ತಿಳಿದುಬಂದಿದೆ.


ಲಾಕ್‌ಡೌನ್‌ನಲ್ಲಿ ಒಳ್ಳೆಯ ಸುದ್ದಿ: ತರಕಾರಿ ಅಗ್ಗ


ಆರಂಭಿಕ ಅಂದಾಜಿನ ಪ್ರಕಾರ ಭಾರತದಲ್ಲಿ ಲಕ್ಷಾಂತರ ಉದ್ಯೋಗಗಳು ಅಪಾಯದಲ್ಲಿದೆ ಮತ್ತು ನಗರ ನಿರುದ್ಯೋಗ ದರವು ಶೇಕಡಾ 30.9ಕ್ಕೆ ಏರಿಲಿದ್ದು ಒಟ್ಟಾರೆ ನಿರುದ್ಯೋಗ ಈಗಾಗಲೇ ಶೇಕಡಾ 23.4ಕ್ಕೆ ಏರಿದೆ ಎನ್ನಲಾಗಿದೆ.


ಸರಿಸುಮಾರು ಮೂರು ವಾರಗಳಿಂದ ಜನರು ಮನೆಯಲ್ಲಿಯೇ ಇರುವುದರಿಂದ ಯುಗೋವ್‌ನ ಪ್ರಸ್ತುತ ಕೋವಿಡ್ 19 (Covid-19) ಟ್ರ್ಯಾಕರ್‌ನ ದತ್ತಾಂಶವು ಕಾಲಾನಂತರದಲ್ಲಿ ಜನರಲ್ಲಿ ಭಯದ ಮಟ್ಟವು ಸ್ಥಿರವಾಗಿದೆ ಎಂದು ತೋರಿಸುತ್ತದೆ. ಕಳೆದ ವಾರ ಶೇಕಡಾ 66ಕ್ಕೆ ಹೋಲಿಸಿದರೆ ಈ ವಾರ ಶೇಕಡಾ 64ರಷ್ಟಿದೆ.


PF ಹಣ ಹಿಂಪಡೆಯುವ ನಿಯಮ ಬದಲಾವಣೆ


ಈ ಬಗ್ಗೆ ಪ್ರತಿಕ್ರಿಯಿಸಿರುವವರಲ್ಲಿ ತುಂಬಾ ಹೆದರುವುದಿಲ್ಲ ಅಥವಾ ಹೆದರುವುದೇ ಇಲ್ಲ ಎಂದು ಹೇಳುವ ಸಂಖ್ಯೆ ಶೇಕಡಾ 27 ರಷ್ಟಿದೆ. ಹಳೆಯ ತಲೆಮಾರಿನವರಲ್ಲಿ  ಭಯವು ಗಮನಾರ್ಹವಾಗಿ ಕುಸಿದಿದೆ, ಈಗ ಶೇಕಡಾ 53 ರಷ್ಟು ಜನರು ವೈರಸ್  ಬಗ್ಗೆ ಹೆದರಿಕೆ ವ್ಯಕ್ತಪಡಿಸಿದ್ದಾರೆ. ಕಳೆದ ವಾರ 61 ಪ್ರತಿಶತದಷ್ಟು ಜನರು ತುಂಬಾ ಅಥವಾ ತಕ್ಕಮಟ್ಟಿಗೆ ಭಯಭೀತರಾಗಿದ್ದರು ಎಂದು ಡೇಟಾ ತೋರಿಸಿದೆ.


ಭಯದ ಮಟ್ಟಗಳು ಸ್ಥಿರವಾಗಿದ್ದರೂ ಜನರಿಗೆ ಸಾಂಕ್ರಾಮಿಕ ರೋಗಕ್ಕೆ ಸಂಬಂಧಿಸಿದ ಕಾಳಜಿಗಳಿವೆ ಅವುಗಳಲ್ಲಿ ಅಗತ್ಯ ವಸ್ತುಗಳ ಅಲಭ್ಯತೆಯಿಂದಾಗಿ ಶೇಕಡಾ 37 ರಷ್ಟು ಭಾರತೀಯರು ಚಿಂತಿತರಾಗಿದ್ದಾರೆ.


ವಂಚಕರಿಂದ ಹೊಸ ರೀತಿಯಲ್ಲಿ ಮೋಸ: ಗ್ರಾಹಕರಿಗೆ ಎಸ್‌ಬಿಐ ಅಲರ್ಟ್


ಏಪ್ರಿಲ್ 7-10ರ ನಡುವೆ ಭಾರತದಲ್ಲಿ 1,000 ಜನರ ಮೇಲೆ ಸಮೀಕ್ಷೆಯನ್ನು ನಡೆಸಲಾಯಿತು. ಸುಮಾರು ಅರ್ಧದಷ್ಟು (47 ಶೇಕಡಾ) ಜನರು ತಮ್ಮನ್ನು ತಾವು ಸದೃಢವಾಗಿಡಲು ವ್ಯಾಯಾಮ ಮಾಡಲು ಪ್ರಾರಂಭಿಸಿದ್ದಾರೆ ಮತ್ತು ಅನೇಕ ಜನರು (46 ಪ್ರತಿಶತ) ಸ್ನೇಹಿತರು ಮತ್ತು ಕುಟುಂಬಕ್ಕೆ ವೀಡಿಯೊ ಕರೆಗಳನ್ನು ಮಾಡುತ್ತಿದ್ದಾರೆ. ಪುರುಷರಿಗೆ ಹೋಲಿಸಿದರೆ ಮಹಿಳೆಯರು ಈ ತಂತ್ರಜ್ಞಾನವನ್ನು ತೆಗೆದುಕೊಳ್ಳುವ ಸಾಧ್ಯತೆ ಹೆಚ್ಚು (50 ಪ್ರತಿಶತ ಮತ್ತು 43 ಶೇಕಡಾ) ಎಂದು ತಿಳಿದುಬಂದಿದೆ.