ಶ್ರೀಲಂಕಾ: ಇಂಧನ ಮತ್ತು ಆಹಾರ ಸಂಗ್ರಹಣೆಗಾಗಿ ಬಿಕ್ಕಟ್ಟು ಪೀಡಿತ ನೆರೆಯ ರಾಷ್ಟ್ರ ಶ್ರೀಲಂಕಾ(Sri Lanka Economic Crisis)ಗೆ ಭಾರತದಿಂದ ವಿಸ್ತರಿಸಿರುವ ಕ್ರೆಡಿಟ್ ಲೈನ್ಸ್ (LOCs)ಪ್ರಸ್ತುತ ಒಟ್ಟು USD 1.5 ಶತಕೋಟಿಯಷ್ಟಿದೆ. ಇನ್ನಷ್ಟು ಈ ಸಹಾಯಹಸ್ತ ಮುಂದುವರಿಯಲಿವೆ ಎಂದು ಶ್ರೀಲಂಕಾದಲ್ಲಿರುವ ಭಾರತದ ಹೈ ಕಮಿಷನರ್ ಗೋಪಾಲ್ ಬಾಗ್ಲೇ ತಿಳಿಸಿದ್ದಾರೆ. 


COMMERCIAL BREAK
SCROLL TO CONTINUE READING

ಆರ್ಥಿಕ ಬಿಕ್ಕಟ್ಟಿನಲ್ಲಿ ತತ್ತರಿಸುತ್ತಿರುವ ಶ್ರೀಲಂಕಾಕ್ಕೆ ಭಾರತವು ಆರ್ಥಿಕ ಪ್ಯಾಕೇಜ್ ಅನ್ನು ನೀದಿದೆ. ಈ ಸಹಾಯವು ಶ್ರೀಲಂಕಾ(Sri Lanka)ದ ಕೆಲವು ತಕ್ಷಣದ ಅಗತ್ಯಗಳನ್ನು ಪೂರೈಸಲು ಸಹಕಾರಿಯಾಗಲಿದೆ.


ಇದನ್ನು ಓದಿ: Financial Crisis: ಈ ದೇಶದಲ್ಲಿ ಲೀಟರ್ ಪೆಟ್ರೋಲ್‌ಗೆ 303 ರೂ.! 


ಈ ವರ್ಷದ ಜನವರಿಯಿಂದ ಶ್ರೀಲಂಕಾಕ್ಕೆ ಭಾರತದಿಂದ USD 2.5 ಶತಕೋಟಿಯಷ್ಟು ಮೌಲ್ಯದ ಸಹಾಯವನ್ನು ನೀಡಲಾಗಿದೆ ಎಂದು ಭಾರತೀಯ ರಾಯಭಾರಿ ಮೊದಲೇ ತಿಳಿಸಿದ್ದರು. ಇನ್ನು ಮೇ ತಿಂಗಳವರೆಗೆ ಈ ಕಾರ್ಯ ನಡೆಯಲಿದೆ. 


ಭಾರತವು USD 400-ಮಿಲಿಯನ್ ಕರೆನ್ಸಿ ಸ್ವಾಪ್ ಅನ್ನು ವಿಸ್ತರಿಸಿದೆ. ಜೊತೆಗೆ ಹಲವಾರು ನೂರು ಮಿಲಿಯನ್ ಡಾಲರ್ ಮೌಲ್ಯದ ಏಷ್ಯನ್ ಕ್ಲಿಯರೆನ್ಸ್ ಯೂನಿಯನ್ ಅಡಿಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್‌ಗೆ ಶ್ರೀಲಂಕಾದ ಸೆಂಟ್ರಲ್ ಬ್ಯಾಂಕ್ ಪಾವತಿಸಬೇಕಾದ ಪಾವತಿಗಳನ್ನು ಕೆಲ ದಿನಗಳವರೆಗೆ ಮುಂದೂಡಿದೆ.


 


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.