ಅಹಮದಾಬಾದ್: ಕರೋನಾ ವೈರಸ್ ತಡೆಗಟ್ಟುವಿಕೆಗೆ ಅನ್ವಯವಾಗುವ ನಿಯಮಗಳ ಉಲ್ಲಂಘನೆ (Covid guidelines violence) ಮಾಡುವವರ ವಿರುದ್ಧ ಕಠಿಣ ನಿಲುವನ್ನು ತೆಗೆದುಕೊಂಡಿರುವ ಗುಜರಾತ್ ಸರ್ಕಾರ ಈಗ ವಿವಾಹ ಸಮಾರಂಭದ ಮೇಲೆ ಕಣ್ಣಿಟ್ಟಿದೆ. ವಿವಾಹ ಸಮಾರಂಭವನ್ನು ಆನ್‌ಲೈನ್ ನೋಂದಣಿ (Online Registration) ಮಾಡುವುದನ್ನು ಕಡ್ಡಾಯಗೊಳಿಸಿದೆ.


COMMERCIAL BREAK
SCROLL TO CONTINUE READING

ವಿವಾಹ ಸಮಾರಂಭವನ್ನು ಆನ್‌ಲೈನ್ ನೋಂದಣಿ ಮಾಡುವುದನ್ನು ಕಡ್ಡಾಯಗೊಳಿಸಿರುವ ಗುಜರಾತ್  (Gujarat) ಸರ್ಕಾರ, ಒಂದೊಮ್ಮೆ ವಿವಾಹದ ಬಗ್ಗೆ ಆನ್ ಲೈನ್ ನಲ್ಲಿ ನೊಂದಾಯಿಸದೇ ಇದ್ದರೆ ಅಂಥವರ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಕೂಡ ಹೇಳಿದೆ. 


ಗುಜರಾತ್ ಸರ್ಕಾರ ಏನೆಲ್ಲಾ ಕ್ರಮ ಕೈಗೊಂಡಿದ್ದರೂ ನಿರಂತರವಾಗಿ COVID- 19 ನಿಯಮಗಳು ಮತ್ತು ಮಾರ್ಗಸೂಚಿಗಳ ಉಲ್ಲಂಘನೆಯ ಪ್ರಕರಣಗಳು ದಾಖಲಾಗುತ್ತಲೇ ಇವೆ.‌ ಇಂಥ ಪ್ರಕರಣಗಳನ್ನು ನಿಯಂತ್ರಣ ಮಾಡುವ ದೃಷ್ಟಿಯಲ್ಲಿ ಈಗ ಮದುವೆ ಮಾಡಲು ಆನ್‌ಲೈನ್ ನಲ್ಲಿ ನೊಂದಾಯಿಸಿ ಅನುಮತಿ ಪಡೆಯುವುದನ್ನು ಕಡ್ಡಾಯಗೊಳಿಸಿದೆ.


ಮದುವೆಯ ದಿನವೇ ವಧುವಿನ ಕರೋನಾ ರಿಪೋರ್ಟ್ ಪಾಸಿಟಿವ್ ಬಂದಾಗ...!


ವಿವಾಹ (Marriage) ಸಮಾರಂಭಗಳನ್ನು ನೊಂದಣಿ ಮಾಡಲೆಂದೇ ಹೊಸ ಸಾಫ್ಟ್‌ವೇರ್‌ ಒಂದನ್ನು ಅಭಿವೃದ್ಧಿಪಡಿಸಲಾಗಿದ್ದು  ಅಲ್ಲಿನ ಗೃಹ ಇಲಾಖೆ ಮೇಲುಸ್ತುವಾರಿ ವಹಿಸಿದೆ. ವಿವಾಹ ಕಾರ್ಯಗಳಿಗಾಗಿ ಆನ್‌ಲೈನ್ ನೋಂದಣಿಯನ್ನು ಕಡ್ಡಾಯಗೊಳಿಸುವ ವೇಳೆ ವಿವಾಹ ಕಾರ್ಯಕ್ರಮದಲ್ಲಿ 100ಕ್ಕೂ ಹೆಚ್ಚು ಜನರು ಪಾಲ್ಗೊಳ್ಳುವಂತಿಲ್ಲ ಎಂಬ ನಿಬಂಧನೆ ವಿಧಿಸಲಾಗುತ್ತದೆ.


ಹೊಸ ನಿಯಮದ ಪ್ರಕಾರ, ಅರ್ಜಿದಾರರು ಮದುವೆ ಸಮಾರಂಭಕ್ಕೆ ಅನುಮತಿಗಾಗಿ ಆನ್‌ಲೈನ್‌ನಲ್ಲಿ ನೋಂದಾಯಿಸಿಕೊಳ್ಳಬೇಕು. ಇದರ ನಂತರ ಅವರು ನೋಂದಣಿ ಸ್ಲಿಪ್‌ನಿಂದ ಪ್ರಿಂಟ್ ಔಟ್ ತೆಗೆದುಕೊಂಡು ಅದನ್ನು ತನ್ನ ಬಳಿ ಇಟ್ಟುಕೊಂಡಿರಬೇಕು. ಪೊಲೀಸರು ಅಥವಾ ಸ್ಥಳೀಯ ಆಡಳಿತದ ಅಧಿಕಾರಿಗಳು ವಿಚಾರಣೆಗೊಳಪಡಿಸಿದರೆ ಅವರಿಗೆ ತೋರಿಸಬೇಕಾಗುತ್ತದೆ. ಅರ್ಜಿದಾರನು ಜೆರಾಕ್ಸ್ ಕಾಪಿಯನ್ನಾದರೂ ಇಟ್ಟುಕೊಂಡಿರಲೇಬೇಕು.


Bride Entry Dance: ಮದುವೆ ಮಂಟಪಕ್ಕೆ ವಧು ನೀಡಿದ ಎಂಟ್ರಿ ನೋಡಿ ಭಾವುಕನಾದ ವರ video viral


ಈವರೆಗೆ ಗುಜರಾತಿನಲ್ಲಿ ಕರೋನಾ ರೋಗದಿಂದ 4,148 ಜನರು ಸಾವನ್ನಪ್ಪಿದ್ದಾರೆ. ಅಲ್ಲಿನ ಆರೋಗ್ಯ ಇಲಾಖೆಯ ಪ್ರಕಾರ ಶುಕ್ರವಾರ 1,223 ಜನರಿಗೆ ಕರೋನಾ ವೈರಸ್ ತಗುಲಿರುವುದು ಪತ್ತೆಯಾಗಿದೆ. ರಾಜ್ಯದಲ್ಲಿ ಕರೋನಾ ಸೋಂಕಿತರ ಸಂಖ್ಯೆ 2,25,304 ಕ್ಕೆ ಏರಿದೆ. ಅದೇ ಸಮಯದಲ್ಲಿ ಕರೋನಾದಿಂದ ಇದುವರೆಗೆ 4,148 ಜನರು ಸಾವನ್ನಪ್ಪಿದ್ದಾರೆ. ಕರೋನಾದ ಹೆಚ್ಚುತ್ತಿರುವ ಪ್ರಕರಣಗಳ ದೃಷ್ಟಿಯಿಂದ‌ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಒತ್ತು ನೀಡಲಾಗುತ್ತಿದೆ.