ನವದೆಹಲಿ: ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಖ್ಯಾತ ಜಾದೂಗಾರ ಓಂ ಪ್ರಕಾಶ್ ಶರ್ಮಾ ಅಲಿಯಾಸ್ ಓಪಿ ಶರ್ಮಾ ಶನಿವಾರ ನಿಧನರಾಗಿದ್ದಾರೆಂದು ವರದಿಯಾಗಿದೆ. ಉತ್ತರ ಪ್ರದೇಶದ ಕಾನ್ಪುರ ನಿವಾಸಿ  ಓಪಿ ಶರ್ಮಾರಿಗೆ 76 ವರ್ಷ ವಯಸ್ಸಾಗಿತ್ತು. ಅವರು ಪತ್ನಿ, ಪುತ್ರಿ ಮತ್ತು ಮೂವರು ಪುತ್ರರನ್ನು ಅಗಲಿದ್ದಾರೆ. ಅನಾರೋಗ್ಯ ಕಾರಣ ಅವರು ಕಲ್ಯಾಣಪುರದ ನರ್ಸಿಂಗ್ ಹೋಮ್ ನಲ್ಲಿ ಒಂದು ವಾರ ಚಿಕಿತ್ಸೆಗಾಗಿ ದಾಖಲಾಗಿದ್ದರು.


COMMERCIAL BREAK
SCROLL TO CONTINUE READING

ಕಣ್ಕಟ್ಟು ವಿದ್ಯೆಯಲ್ಲಿ ಅಂತಾರಾಷ್ಟ್ರೀಯ ಮನ್ನಣೆ ಪಡೆದಿದ್ದ ಓಪಿ ಶರ್ಮಾ ಕಾನ್ಪುರದ ಬರ್ರಾದಲ್ಲಿರುವ ಭೂತ ಬಂಗಲೆಯಲ್ಲಿ ವಾಸಿಸುತ್ತಿದ್ದರು. ಅವರ ಜಾದೂ ಕಾರ್ಯಕ್ರಮಗಳ ಟಿಕೆಟ್‍ಗಳು ಬಿಸಿ ದೋಸೆಯಂತೆ ಸೇಲ್ ಆಗುತ್ತಿದ್ದವು. ವರದಿಯ ಪ್ರಕಾರ ಓಪಿ ಶರ್ಮಾ ಅವರು ಸುಮಾರು 34 ಸಾವಿರಕ್ಕೂ ಹೆಚ್ಚು ಜಾದೂ ಪ್ರದರ್ಶನಗಳನ್ನು ನೀಡಿದ್ದಾರಂತೆ. ಓಪಿ ಶರ್ಮಾರ ಜನಪ್ರಿಯತೆಯನ್ನು ಗಮನದಲ್ಲಿಟ್ಟುಕೊಂಡು ಸಮಾಜವಾದಿ ಪಕ್ಷವು 2002ರಲ್ಲಿ ಗೋವಿಂದ್ ನಗರದಿಂದ ವಿಧಾನಸಭಾ ಚುನಾವಣೆಗೆ ಟಿಕೆಟ್ ನೀಡಿತ್ತು. ಬಳಿಕ 2019ರಲ್ಲಿ ಅವರು ಬಿಜೆಪಿ ಸೇರಿದ್ದರು.


Viral News: ಹೆರಿಗೆಯಾದ ಬಳಿಕ ಮತ್ತೆ ಗರ್ಭಿಣಿ, ವರ್ಷದಲ್ಲಿ 2 ಮಕ್ಕಳಿಗೆ ಜನ್ಮ ನೀಡಿದ ಮಹಿಳೆ!


ಓಪಿ ಶರ್ಮಾರ ಪತ್ನಿ ಮೀನಾಕ್ಷಿ, ಹಿರಿಯ ಮಗ ಪ್ರೇಮ್ ಪ್ರಕಾಶ್ ಶರ್ಮಾ ದೆಹಲಿ ದೂರದರ್ಶನದಲ್ಲಿ ಕೆಲಸ ಮಾಡುತ್ತಿದ್ದಾರೆ. 2ನೇ ಮಗ ಸತ್ಯ ಪ್ರಕಾಶ್ ಶರ್ಮಾ(OP Sharma Jr.) ಮತ್ತು 3ನೇ ಮಗ ಪಂಕಜ್ ಪ್ರಕಾಶ್ ಶರ್ಮಾ ಪ್ರಿಂಟಿಂಗ್ ಕೆಲಸ ಮಾಡುತ್ತಿದ್ದಾರೆ ಮತ್ತು ಕಿರಿಯ ಮಗಳು ರೇಣು ಶರ್ಮಾ ಅಮೆರಿಕದಲ್ಲಿ ವಾಸಿಸುತ್ತಿದ್ದಾರೆ.


1952ರ ಏಪ್ರಿಲ್ 1ರಂದು ಜನಿಸಿದ್ದ ಓಪಿ ಶರ್ಮಾ ಅವರು ಮುಂಬೈನಲ್ಲಿ ತಮ್ಮ ಮೊದಲ ಜಾದೂ ಪ್ರದರ್ಶನ ನೀಡಿದ್ದರು. ಅವರ ಕಠಿಣ ಪರಿಶ್ರಮ, ಪ್ರತಿಭೆಯನ್ನು ಕಂಡು ಇಂಡಿಯನ್ ಮ್ಯಾಜಿಕ್ ಮೀಡಿಯಾ ಸರ್ಕಲ್ 2001ರ ರಾಷ್ಟ್ರೀಯ ಮ್ಯಾಜಿಕ್ ಪ್ರಶಸ್ತಿ ಮತ್ತು ‘ಶಾಹೆನ್‌ಶಾ ಇ ಜಾದೂ’ ಎಂಬ ಶ್ರೇಷ್ಠ ಬಿರುದನ್ನು ನೀಡಿ ಗೌರವಿಸಿತ್ತು.  


ಇದನ್ನೂ ಓದಿ: Viral Video: ಅತಿವೇಗದಲ್ಲಿದ್ದ ಬೈಕ್‍ಗೆ ಮತ್ತೊಂದು ಬೈಕ್ ಡಿಕ್ಕಿ! ಆಮೇಲೆನಾಯ್ತು ನೋಡಿ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.