Viral News: ಹೆರಿಗೆಯಾದ ಬಳಿಕ ಮತ್ತೆ ಗರ್ಭಿಣಿ, ವರ್ಷದಲ್ಲಿ 2 ಮಕ್ಕಳಿಗೆ ಜನ್ಮ ನೀಡಿದ ಮಹಿಳೆ!

11 ತಿಂಗಳ ಅವಧಿಯಲ್ಲಿ ಇಬ್ಬರು ಮಕ್ಕಳಿಗೆ ಜನ್ಮ ನೀಡಿದ ಮಹಿಳೆಯ ಕಥೆ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

Written by - Puttaraj K Alur | Last Updated : Oct 16, 2022, 07:11 AM IST
  • ಹೆರಿಗೆಯಾದ ಬಳಿಕ ಮತ್ತೆ ಗರ್ಭಿಣಿಯಾದ ಐರಿಶ್ ಮಹಿಳೆ
  • 11 ತಿಂಗಳಲ್ಲಿ ಇಬ್ಬರು ಮಕ್ಕಳಿಗೆ ಜನ್ಮ ನೀಡಿ ಅಚ್ಚರಿ
  • ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿರುವ ವಿಡಿಯೋ
Viral News: ಹೆರಿಗೆಯಾದ ಬಳಿಕ ಮತ್ತೆ ಗರ್ಭಿಣಿ, ವರ್ಷದಲ್ಲಿ 2 ಮಕ್ಕಳಿಗೆ ಜನ್ಮ ನೀಡಿದ ಮಹಿಳೆ!  title=
ಹೆರಿಗೆ ಬಳಿಕ ಮತ್ತೆ ಗರ್ಭಿಣಿಯಾದ ಮಹಿಳೆ!

ನವದೆಹಲಿ: ಹೆರಿಗೆ ನೋವು ಈ ಜಗತ್ತಿನ ಅತಿದೊಡ್ಡ ನೋವು ಎಂದು ನಮಗೆಲ್ಲಾ ತಿಳಿದಿರುವ ವಿಷಯ. ಮಹಿಳೆ ಮಗುವಿಗೆ ಜನ್ಮ ನೀಡುವಾಗ ತೀವ್ರವಾದ ನೋವು ಎದುರಿಸುತ್ತಾಳೆ. ಆದರೆ ತನ್ನ ಪುಟ್ಟ ಕಂದ ಜಗತ್ತಿಗೆ ಕಾಲಿಟ್ಟಾಗ ಆಕೆ ಆ ಎಲ್ಲಾ ನೋವನ್ನು ಮರೆತು ಸಂತೋಷಗೊಳ್ಳುತ್ತಾಳೆ. ಹೆರಿಗೆಗೆ ಸಂಬಂಧಿಸಿದಂತೆ ಸೋಷಿಯಲ್ ಮೀಡಿಯಾದಲ್ಲಿ ಸುದ್ದಿಯೊಂದು ಸಖತ್ ವೈರಲ್ ಆಗುತ್ತಿದೆ. ಇದು ಕೇಳಲು ವಿಚಿತ್ರವಾದರೂ ಸಹ ನಿಜವಾಗಿ ನಡೆದಿರುವ ಸಂಗತಿಯಾಗಿದೆ.

ಹೆರಿಗೆ ಬಳಿಕ ಮತ್ತೆ ಗರ್ಭಿಣಿ!

ಹೌದು, ಇದು ಕೇಳಲು ವಿಚಿತ್ರವೆನಿಸಿದರೂ ನಿಜವಾಗಿ ನಡೆದಿದೆಯಂತೆ. ಲಾರೆನ್ ಅಹಿನ್ನವಾಯಿ ಎಂಬ ಮಹಿಳೆ ವಿಡಿಯೋ ಬಿಡುಗಡೆ ಮಾಡಿ ತನ್ನ ಸಂಪೂರ್ಣ ಕಥೆಯನ್ನು ಹೇಳಿದ್ದಾರೆ. 2020ರ ನವೆಂಬರ್ 27ರಂದು ಲಾರೆನ್ ಅಹಿನ್ನವಾಯಿ ಮಗುವಿಗೆ ಜನ್ಮ ನೀಡಿದ್ದಳು. ಆದರೆ 2021ರ ಅಕ್ಟೋಬರ್ 26ರಂದು ಈಕೆ ಮಹಿಳೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳಂತೆ. ವಾಸ್ತವವಾಗಿ ಈ ಸ್ಥಿತಿಯನ್ನು ಐರಿಶ್ ಪ್ರೆಗ್ನೆನ್ಸಿ ಎಂದು ಕರೆಯಲಾಗುತ್ತದೆ.

ಇದನ್ನೂ ಓದಿ: Snake Video: ಹಾವು ನೀರು ಕುಡಿಯುವ ವಿಡಿಯೋ ವೈರಲ್‌! ಶಾಕ್‌ ಆದ ನೆಟ್ಟಿಜನ್‌

11 ತಿಂಗಳಲ್ಲಿ 2 ಮಕ್ಕಳಿಗೆ ಜನ್ಮ ನೀಡಿದ ಮಹಿಳೆ

ಟಿಕ್‌ಟಾಕ್‌ನಲ್ಲಿ ಹಂಚಿಕೊಂಡ ಈ ವಿಡಿಯೋದಲ್ಲಿ, ಮಹಿಳೆ ಗಂಡು ಮಗುವಿಗೆ ಜನ್ಮ ನೀಡಿದ ಬಳಿಕ ಅದರ ಲಾಲನೆ-ಪಾಲನೆ ಮಾಡಲು ಸಿದ್ಧತೆ ನಡೆಸಿದ್ದರು. ಇದೇ ವೇಳೆ ಆಕೆ ತನ್ನ 2ನೇ ಗರ್ಭಧಾರಣೆಯ ಬಗ್ಗೆ ತಿಳಿದುಕೊಂಡಳಂತೆ. ಐರಿಶ್ ಅವಳಿಗಳು 12 ತಿಂಗಳು ಅಥವಾ ಅದಕ್ಕಿಂತ ಕಡಿಮೆ ಅವಧಿಯಲ್ಲಿ ತಮ್ಮ ತಾಯಿಯ ಗರ್ಭದಿಂದ ಹೊರಬರುತ್ತವಂತೆ. 11 ತಿಂಗಳಲ್ಲಿ 2 ಮಕ್ಕಳಿಗೆ ಜನ್ಮ ನೀಡಿದ ಬಗ್ಗೆ ಮಹಿಳೆ ಖುಷಿ ಹಂಚಿಕೊಂಡಿದ್ದು, ಇದು ದೇವರು ನೀಡಿದ ದೊಡ್ಡ ಕೊಡುಗೆ ಎಂದು ಹೇಳಿದ್ದಾಳೆ.

2 ಮಕ್ಕಳ ತಾಯಿಯ ಕಥೆ ಕೇಳಿ ಬೆಚ್ಚಿಬಿದ್ದ ಜನರು!

11 ತಿಂಗಳ ಅವಧಿಯಲ್ಲಿ ಇಬ್ಬರು ಮಕ್ಕಳಿಗೆ ಜನ್ಮ ನೀಡಿದ ಮಹಿಳೆಯ ಕಥೆ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಈ ಸ್ಟೋರಿ ಓದಿದ ಅನೇಕರು ಬೆಚ್ಚಿಬಿದ್ದಿದ್ದಾರೆ. ಈಕೆಯ ವಿಡಿಯೋವನ್ನು ಲಕ್ಷಾಂತರ ಜನರು ವೀಕ್ಷಿಸಿದ್ದಾರೆ. ಅನೇಕರು ಮಹಿಳೆಗೆ ಅಭಿನಂದನೆ ಸಲ್ಲಿಸಿದ್ದಾರೆ. ಈ ಪೈಕಿ ಒಬ್ಬ ಬಳಕೆದಾರ ತಮಾಷೆಯಾಗಿ ಕಾಮೆಂಟ್ ಮಾಡಿದ್ದು, ‘ವಾಹ್..! ನೀವು ಸಮಯವನ್ನು ವ್ಯರ್ಥ ಮಾಡಲಿಲ್ಲ’ ವೆಂದು ಹೇಳಿದ್ದಾನೆ.

ಇದನ್ನೂ ಓದಿ: ಬರೋಬ್ಬರಿ 76 ಸಾವಿರ ಡಾಲರ್ ಗೆ ಮಾರಾಟವಾಯ್ತು 142 ವರ್ಷ ಹಳೆಯ ಪ್ಯಾಂಟ್: ಈ ಜೀನ್ಸ್ ಹೇಗಿದೆ ಗೊತ್ತಾ?

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News