ನವದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕರ ವಿರುದ್ಧ ನಡೆಸಲಾದ ಆಪರೇಷನ್ ಆಲ್ ಔಟ್ (Operation All Out) ಮಾದರಿಯಲ್ಲಿ, ಈಗ ನಕ್ಸಲರನ್ನು ನಿರ್ಮೂಲನೆ ಮಾಡಲು ಯೋಜಿಸಲಾಗಿದೆ. ಈ ಹಿನ್ನಲೆಯಲ್ಲಿ ಛತ್ತೀಸ್‌ಗಢ, ಜಾರ್ಖಂಡ್, ಒಡಿಶಾ ಮತ್ತು ಆಂಧ್ರಪ್ರದೇಶದಂತಹ ರಾಜ್ಯಗಳಲ್ಲಿ ಸಕ್ರಿಯವಾಗಿರುವ ಅಗ್ರ 50 ನಕ್ಸಲ್ ಕಮಾಂಡರ್‌ಗಳ ಪಟ್ಟಿಯನ್ನು ಭದ್ರತಾ ಸಂಸ್ಥೆಗಳು ಸಿದ್ಧಪಡಿಸಿವೆ ಎಂದು ಮಾಹಿತಿ ಲಭ್ಯವಾಗಿದೆ. 


COMMERCIAL BREAK
SCROLL TO CONTINUE READING

ಉನ್ನತ ಮೂಲಗಳಿಂದ ಜೀ ನ್ಯೂಸ್‌ಗೆ ಲಭ್ಯವಾಗಿರುವ ಮಾಹಿತಿಯ ಪ್ರಕಾರ, ಈಗಾಗಲೇ ಸಿದ್ಧಪಡಿಸಲಾಗಿರುವ ಅಗ್ರ 50 ನಕ್ಸಲ್ ಕಮಾಂಡರ್‌ಗಳಲ್ಲಿ, 10 ಅತ್ಯಂತ ಅಪಾಯಕಾರಿ ಮಹಿಳಾ ನಕ್ಸಲ್ (Naxal) ಕಮಾಂಡರ್‌ಗಳೂ ಸೇರಿದ್ದಾರೆ ಎಂದು ತಿಳಿದುಬಂದಿದೆ.


ಇದನ್ನೂ ಓದಿ- ಛತ್ತೀಸ್​ಗಢದಲ್ಲಿ ನಕ್ಸಲರ ಬೆದರಿಕೆಯಿಂದ ಮುಚ್ಚಿದ್ದ ಶಾಲೆಗೆ 14 ವರ್ಷಗಳ ಬಳಿಕ ಮರುಜೀವ!


ಒಟ್ಟಾಗಿ ನಕ್ಸಲ್ ವಿರೋಧಿ ಕಾರ್ಯಾಚರಣೆ ನಡೆಸುತ್ತಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರ :
ಭದ್ರತಾ ಏಜೆನ್ಸಿಗೆ ಸಂಬಂಧಿಸಿದ ಅಧಿಕಾರಿಯೊಬ್ಬರ ಪ್ರಕಾರ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒಟ್ಟಾಗಿ ನಕ್ಸಲ್ ವಿರೋಧಿ ಕಾರ್ಯಾಚರಣೆಯನ್ನು ನಡೆಸುತ್ತಿವೆ. ಗುಪ್ತಚರ ಸಂಸ್ಥೆಗಳ ಮಾಹಿತಿ ಆಧಾರದ ಮೇಲೆ ಕಾರ್ಯಾಚರಣೆ ನಡೆಸಲಾಗುತ್ತಿದೆ.  ಮೋಸ್ಟ್ ವಾಂಟೆಡ್ ನಕ್ಸಲರ ಪಟ್ಟಿಯಲ್ಲಿ ಸೇರ್ಪಡೆಗೊಂಡ ಉನ್ನತ ನಕ್ಸಲ್ ಕಮಾಂಡರ್‌ಗಳಲ್ಲಿ ಹಿಡ್ಮಾ (Hidma) ಕೂಡ ಸೇರಿದ್ದಾರೆ ಎನ್ನಲಾಗಿದೆ.


ಇದನ್ನೂ ಓದಿ- Elections ಮಧ್ಯೆ ನಕ್ಸಲರಿಂದ ದೊಡ್ಡ ದಾಳಿ ಬಗ್ಗೆ ಗುಪ್ತಚರ ಸಂಸ್ಥೆಗಳ ಎಚ್ಚರಿಕೆ


ಈ ನಕ್ಸಲೈಟ್‌ಗಳನ್ನು ಮೋಸ್ಟ್ ವಾಂಟೆಡ್ ನಕ್ಸಲರ ಪಟ್ಟಿಯಲ್ಲಿ ಸೇರಿಸಲಾಗಿದೆ-
ಮೋಸ್ಟ್ ವಾಂಟೆಡ್ ನಕ್ಸಲರ ಪಟ್ಟಿಯಲ್ಲಿ (Most Wanted List)  ದಕ್ಷಿಣ ಬಸ್ತಾರ್‌ನ ವಿಭಾಗೀಯ ಕಮಾಂಡರ್ ರಘು, ಸುಕ್ಮಾದಲ್ಲಿ ಸಕ್ರಿಯರಾಗಿರುವ ಪಿಎಲ್‌ಜಿಎ ಬೆಟಾಲಿಯನ್ -1 ರ ನಾಗೇಶ್ ಮತ್ತು ಶ್ರೀಧರ್ ಸೇರಿದ್ದಾರೆ. ನಕ್ಸಲೈಟ್‌ಗಳ ಪಿಎಲ್‌ಜಿಎ ಬೆಟಾಲಿಯನ್ -1 ಬಿಜಾಪುರದಲ್ಲಿ ಭದ್ರತಾ ಪಡೆಗಳ ಮೇಲೆ ದಾಳಿ ನಡೆಸಿದೆ. ಈ ದಾಳಿಯನ್ನು ಹಿಡ್ಮಾ ಯೋಜಿಸಿದ್ದು ಮತ್ತು ದಾಳಿಯ ಸ್ಥಳದಲ್ಲಿ ಅವನು ತನ್ನ ಸಹಚರರೊಂದಿಗೆ ಹಾಜರಿದ್ದನೆಂದು ನಂಬಲಾಗಿದೆ. ಸ್ತ್ರೀ ನಕ್ಸಲರುಗಳಾದ ನಾಗಮಣಿ, ಭೀಮಾ, ಸುಜಾತಾ, ಜೈಮಿಟಿ ಮತ್ತು ರೀನಾ ಕೂಡ ಮೋಸ್ಟ್ ವಾಂಟೆಡ್ ನಕ್ಸಲೈಟ್‌ಗಳ ಪಟ್ಟಿಯಲ್ಲಿದ್ದಾರೆ ಎಂದು ತಿಳಿದುಬಂದಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.