Elections ಮಧ್ಯೆ ನಕ್ಸಲರಿಂದ ದೊಡ್ಡ ದಾಳಿ ಬಗ್ಗೆ ಗುಪ್ತಚರ ಸಂಸ್ಥೆಗಳ ಎಚ್ಚರಿಕೆ

ಭದ್ರತಾ ಪಡೆಗಳ ಹದ್ದಿನಕಣ್ಣಿನಿಂದಾಗಿ ದೀರ್ಘಕಾಲದಿಂದ ಶಾಂತವಾಗಿದ್ದ ನಕ್ಸಲೈಟ್ ಮತ್ತೆ ದೊಡ್ಡ ದಾಳಿಗಾಗಿ ಹೊಂಚು ಹಾಕುತ್ತಿದೆ ಎಂಬ ಬಗ್ಗೆ ಗುಪ್ತಚರ ಇಲಾಖೆ ಮಾಹಿತಿ ನೀಡಿದೆ. ಛತ್ತೀಸ್‌ಗಢದ ಕಾಡುಗಳಲ್ಲಿ, ಸುಮಾರು 200 ಸಶಸ್ತ್ರ ನಕ್ಸಲರರ ಎರಡು ವಿಭಿನ್ನ ಸ್ಥಳಗಳಲ್ಲಿ ಚಲಿಸುವ ಬಗ್ಗೆ ದೊಡ್ಡ ಮಾಹಿತಿ ಬಹಿರಂಗವಾಗಿದೆ.

Written by - Zee Kannada News Desk | Last Updated : Mar 5, 2021, 08:15 PM IST
  • ಉನ್ನತ ನಕ್ಸಲೈಟ್ ಕಮಾಂಡರ್ ಹಿಡ್ಮಾ ಸ್ಥಳ ಬಿಜಾಪುರದಲ್ಲಿ ಪತ್ತೆ
  • ಇತರ ಪ್ರದೇಶಗಳಲ್ಲಿಯೂ ನಕ್ಸಲೈಟ್ ಸಭೆ
  • ಸುಮಾರು 120 ನಕ್ಸಲರು ಕಾಡುಗಳಲ್ಲಿದ್ದಾರೆ
Elections ಮಧ್ಯೆ ನಕ್ಸಲರಿಂದ ದೊಡ್ಡ ದಾಳಿ ಬಗ್ಗೆ ಗುಪ್ತಚರ ಸಂಸ್ಥೆಗಳ ಎಚ್ಚರಿಕೆ title=
Representational Image

ರಾಯಪುರ (ಛತ್ತೀಸ್‌ಗಢ): ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ದೊಡ್ಡ ಹಿಂಸಾತ್ಮಕ ಘಟನೆಗಳಿಗೆ ನಕ್ಸಲೈಟ್ ಮತ್ತೆ ಸಕ್ರಿಯವಾಗಿದೆ. ಉನ್ನತ ನಕ್ಸಲೈಟ್ ಕಮಾಂಡರ್ ಹಿಡ್ಮಾ ಮತ್ತು ಅವರ ಸಶಸ್ತ್ರ ಸಹಚರರ ಚಲನೆಯು ಛತ್ತೀಸ್‌ಗಢದ ಬಿಜಾಪುರ ಪ್ರದೇಶದಲ್ಲಿ ಕಂಡುಬಂದಿದೆ. ಅದರ ನಂತರ ನಕ್ಸಲೈಟ್ ಪೀಡಿತ ಪ್ರದೇಶಗಳಲ್ಲಿ ನಿಯೋಜಿಸಲಾದ ಭದ್ರತಾ ಪಡೆಗಳಿಗೆ ಪ್ರತಿ ಕಾರ್ಯಾಚರಣೆಗಾಗಿ ಎಚ್ಚರಿಕೆ ನೀಡಲಾಗಿದೆ ಎಂದು ಗುಪ್ತಚರ ಮೂಲಗಳಿಂದ ಮಾಹಿತಿ ಲಭಿಸಿದೆ.

ಹಿಡ್ಮಾ ಅವರ ಸ್ಥಳ ಬಿಜಾಪುರದಲ್ಲಿ ಪತ್ತೆಯಾಗಿದೆ: 
ಗುಪ್ತಚರ ಮೂಲಗಳ ಪ್ರಕಾರ, ಬಿಜಾಪುರ ಜಿಲ್ಲೆಯ ಕಾಡುಗಳಲ್ಲಿ ಹಿಡ್ಮಾ ಇರುವ ಸ್ಥಳ ಪತ್ತೆಯಾಗಿದೆ. ಇದರೊಂದಿಗೆ ಸುಮಾರು 120 ನಕ್ಸಲರು ಕಾಡುಗಳಲ್ಲಿದ್ದಾರೆ. ಈ ಸಶಸ್ತ್ರ ಪುರುಷರು ಪಿಎಲ್‌ಜಿಎ ನಕ್ಸಲೈಟ್ ಸಂಘಟನೆಯ ಬೆಟಾಲಿಯನ್ ಸಂಖ್ಯೆ -1 ರೊಂದಿಗೆ ಸಂಬಂಧ ಹೊಂದಿದ್ದಾರೆ. ಹಿಡ್ಮಾ ಈ ಬೆಟಾಲಿಯನ್ ಅನ್ನು ಮುನ್ನಡೆಸುತ್ತಿದೆ. ಇಷ್ಟು ದೊಡ್ಡ ಸಂಖ್ಯೆಯ ನಕ್ಸಲರು ಇರುವಿಕೆಯನ್ನು ಪರಿಗಣಿಸಿ ಗುಪ್ತಚರ ಸಂಸ್ಥೆಗಳು ಚುನಾವಣೆ ನಡೆಯಲಿರುವ ರಾಜ್ಯಗಳಲ್ಲಿ ಕಟ್ಟೆಚ್ಚರ ವಹಿಸುವಂತೆ ಎಚ್ಚರಿಕೆ ನೀಡಿವೆ.

ಇತರ ಪ್ರದೇಶಗಳಲ್ಲಿಯೂ ನಕ್ಸಲೈಟ್ ಸಭೆ:
ಅದೇ ಸಮಯದಲ್ಲಿ, ಮಾವೋವಾದಿ ನಕ್ಸಲರರ (Naxalite) ಮತ್ತೊಂದು ಗುಂಪು ಬಿಜಾಪುರದ ಮತ್ತೊಂದು ಪ್ರದೇಶದ ಕಾಡಿನಲ್ಲಿ ಸಹ ಪತ್ತೆಯಾಗಿದೆ. ನಕ್ಸಲೈಟ್ ಕಮಾಂಡರ್ ಚಂದ್ರಣ್ಣ ನೇತೃತ್ವದ ಈ ಗುಂಪಿನಲ್ಲಿ ಸುಮಾರು 60 ರಿಂದ 80 ನಕ್ಸಲರು ಇದ್ದಾರೆ. ಎಲ್ಲರ ಬಳಿ ಆಧುನಿಕ ಶಸ್ತ್ರಾಸ್ತ್ರಗಳಿವೆ. ಅವರು ಭದ್ರತಾ ಪಡೆಗಳ ಮೇಲೆ ದೊಡ್ಡ ದಾಳಿಗಾಗಿ ಸಂಚು ರೂಪಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ - 

ಹಿಡ್ಮಾ ಪತ್ತೆಗೆ 25 ಲಕ್ಷ ರೂಪಾಯಿ ಬಹುಮಾನ ಘೋಷಣೆ :
ಉನ್ನತ ನಕ್ಸಲೈಟ್ ಕಮಾಂಡರ್ ಹಿಡ್ಮಾ ಪತ್ತೆಗಾಗಿ 25 ಲಕ್ಷ ರೂ.ಗಳ ಬಹುಮಾನವನ್ನು ಘೋಷಿಸಲಾಗಿದೆ. ಅವರು ಭದ್ರತಾ ಪಡೆಗಳ ಮೇಲೆ ಹೊಂಚುದಾಳಿಯಿಂದ ಹಲವಾರು ಪ್ರಮುಖ ದಾಳಿಗಳನ್ನು ಮಾಡಿದ್ದಾರೆ. ಛತ್ತೀಸ್‌ಗಢದ ಸುಕ್ಮಾ ಜಿಲ್ಲೆಯಲ್ಲಿ ಮಾರ್ಚ್ 2017 ರಲ್ಲಿ ಭದ್ರತಾ ಪಡೆಗಳ ಮೇಲೆ ನಡೆದ ದೊಡ್ಡ ದಾಳಿಯಲ್ಲಿ ಆತ ಭಾಗಿಯಾಗಿದ್ದಾನೆ ಎಂದು ನಂಬಲಾಗಿದೆ. ಈ ದಾಳಿಯಲ್ಲಿ 25 ಸಿಆರ್‌ಪಿಎಫ್ (CRPF) ಸಿಬ್ಬಂದಿ ಸಾವನ್ನಪ್ಪಿದ್ದಾರೆ.

ನಕ್ಸಲರ ವಿರುದ್ಧ ಮಹಾರಾಷ್ಟ್ರ ಪೊಲೀಸರ ಕ್ರಮ :
ಮತ್ತೊಂದೆಡೆ, ಮತ್ತೊಂದು ಘಟನೆಯಲ್ಲಿ, ಮಹಾರಾಷ್ಟ್ರ (Maharashtra) ಪೊಲೀಸರು, ನಕ್ಸಲರ ವಿರುದ್ಧ ದೊಡ್ಡ ಯಶಸ್ಸನ್ನು ಗಳಿಸಿದ್ದಾರೆ. ನಕ್ಸಲರು  ಶಸ್ತ್ರಾಸ್ತ್ರಗಳನ್ನು ತಯಾರಿಸಲು ಬಳಸುತ್ತಿದ್ದ ಅಕ್ರಮ ಕಾರ್ಖಾನೆಯನ್ನು ಮಹಾರಾಷ್ಟ್ರ ಪೊಲೀಸರು ನೆಲಸಮ ಮಾಡಿದರು. ನಕ್ಸಲ್ ಪೀಡಿತ ಗಡ್ಚಿರೋಲಿ ಜಿಲ್ಲೆಯಲ್ಲಿ ನಕ್ಸಲೈಟ್ ಚಟುವಟಿಕೆಯ ಬಗ್ಗೆ ಪೊಲೀಸರಿಗೆ ಮಾಹಿತಿ ಬಂದಿದೆ ಎಂದು ರಾಜ್ಯ ಗೃಹ ಸಚಿವ ಅನಿಲ್ ದೇಶ್ಮುಖ್ ಹೇಳಿದ್ದಾರೆ. ಇದರ ನಂತರ, ಮಹಾರಾಷ್ಟ್ರ ಪೊಲೀಸರು ನಕ್ಸಲರ ವಿರುದ್ಧ 48 ಗಂಟೆಗಳ ಟ್ಯಾಕ್ಟಿಕಲ್ ಕೌಂಟರ್ ಅಪರಾಧ ಅಭಿಯಾನವನ್ನು (ಟಿಸಿಒಸಿ) ಪ್ರಾರಂಭಿಸಿದರು.

ಇದನ್ನೂ ಓದಿ - Jharkhand: IED ಸ್ಫೋಟದಲ್ಲಿ 2 ಯೋಧರು ಹುತಾತ್ಮ, ಇಬ್ಬರ ಸ್ಥಿತಿ ಗಂಭೀರ

ಗಡ್ಚಿರೋಲಿ ಜಿಲ್ಲೆಯಲ್ಲಿ 48 ಗಂಟೆಗಳ ಕಾಲ ಕಾರ್ಯಾಚರಣೆ:
ಗಡ್ಚಿರೋಲಿ ಜಿಲ್ಲೆಯ ಅಬುಜ್ಮದ್ ಪ್ರದೇಶದಲ್ಲಿ ನಕ್ಸಲರು ಅರಣ್ಯದೊಳಗೆ ಅಕ್ರಮ ಶಸ್ತ್ರಾಸ್ತ್ರ ಕಾರ್ಖಾನೆಯನ್ನು ಸ್ಥಾಪಿಸಿದ್ದಾರೆ ಎಂದು ಗೃಹ ಸಚಿವರು ತಿಳಿಸಿದ್ದಾರೆ. ಗುಪ್ತಚರ ಮಾಹಿತಿ ಪಡೆದ ನಂತರ, 70 ಪೊಲೀಸ್ ಸಿಬ್ಬಂದಿ ಮತ್ತು ಅಧಿಕಾರಿಗಳ ತಂಡವು ಈ ಪ್ರದೇಶದಲ್ಲಿ ಕಾರ್ಯಾಚರಣೆಯನ್ನು ಪ್ರಾರಂಭಿಸಿತು. ಕಾರ್ಯಾಚರಣೆಯ ಸಮಯದಲ್ಲಿ ಅಕ್ರಮ ಕಾರ್ಖಾನೆಯನ್ನು ನೆಲಸಮ ಮಾಡಲಾಗಿದೆ. ಈ ಸಂದರ್ಭದಲ್ಲಿ ಓರ್ವ ಯೋಧನ ಕಾಲಿಗೆ ಬುಲೆಟ್ ನಿಂದಾಗಿ ಗಾಯವಾಗಿದೆ ಎಂದು ವರದಿಯಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News