ನವದೆಹಲಿ: ಭಯೋತ್ಪಾದಕ ಸಂಘಟನೆಯಾದ ತಾಲಿಬಾನ್ ಅಫ್ಘಾನಿಸ್ತಾನವನ್ನು ಆಕ್ರಮಿಸಿಕೊಂಡಿರುವ ಹಿನ್ನಲೆಯಲ್ಲಿ ಅಫ್ಘಾನಿಸ್ತಾನದಲ್ಲಿ ಸಿಲುಕಿರುವ ಭಾರತೀಯರು ಸೇರಿದಂತೆ ಇತರ ನಾಗರಿಕರನ್ನು ಕಾಬೂಲ್‌ನಿಂದ ಸ್ಥಳಾಂತರಿಸಲು ಆಪರೇಷನ್ ದೇವಿ ಶಕ್ತಿಯನ್ನು (Operation Devi Shakti) ಭಾರತ ಸರ್ಕಾರ ನಡೆಸುತ್ತಿದೆ. ಇದರ ಅಡಿಯಲ್ಲಿ ಇಂದು 24 ಭಾರತೀಯರು ಮತ್ತು 11 ನೇಪಾಳಿ ನಿವಾಸಿಗಳನ್ನು ಹೊತ್ತ ಭಾರತೀಯ ವಾಯುಪಡೆಯ (ಐಎಎಫ್) ವಿಮಾನ ಕಾಬೂಲ್‌ನಿಂದ ದೆಹಲಿಯತ್ತ ಪ್ರಯಾಣಿಸಿದೆ. 


COMMERCIAL BREAK
SCROLL TO CONTINUE READING

"Op Devi Shakti in action!@IAF_MCC ವಿಮಾನವು 24 ಭಾರತೀಯರು ಮತ್ತು 11 ನೇಪಾಳದ ಪ್ರಜೆಗಳೊಂದಿಗೆ ಕಾಬೂಲ್‌ನಿಂದ ದೆಹಲಿ ಕಡೆಗೆ ಪ್ರಯಾಣಿಸುತ್ತಿದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ #DeviShakti ಹ್ಯಾಶ್ ಟ್ಯಾಗ್ ಜೊತೆಗೆ ಟ್ವೀಟ್ ಮಾಡಿದ್ದಾರೆ.


Operation Devi Shakti) ಎಂದು ಕರೆಯಲಾಗುತ್ತದೆ.


ಇದನ್ನೂ ಓದಿ- Afghanistan Crisis: ಅಫ್ಘಾನಿಸ್ತಾನದಲ್ಲಿ ಇನ್ನುಂದೆ ಹಾಡುವಂತಿಲ್ಲ, ಕುಣಿಯುವಂತಿಲ್ಲ..!


ಈ ಹಿಂದೆ, MEA ಯು ಅಫಘಾನಿಸ್ತಾನದಲ್ಲಿರುವ ಎಲ್ಲಾ ಭಾರತೀಯ ಪ್ರಜೆಗಳನ್ನು ಯುದ್ಧದಿಂದ ಹಾನಿಗೊಳಗಾದ ದೇಶದಿಂದ ಹೊರಹೋಗಲು ತಕ್ಷಣವೇ ವಿಶೇಷ ಅಫ್ಘಾನಿಸ್ತಾನ ಸೆಲ್ ಅನ್ನು ಸಂಪರ್ಕಿಸಲು ನೆರವು ನೀಡುವಂತೆ ಕೋರಿತ್ತು.


ಇಂದು 180 ಜನರು ಕಾಬೂಲ್‌ನಿಂದ ಮರಳುವ ನಿರೀಕ್ಷೆಯಿದೆ:
ಅಫ್ಘಾನಿಸ್ತಾನದಿಂದ (Aafghanistan) ಯುಎಸ್ ಸೈನ್ಯವನ್ನು ಹಿಂತೆಗೆದುಕೊಳ್ಳುವ ಆಗಸ್ಟ್ 31 ರ ಗಡುವಿನ ಮುಂಚಿತವಾಗಿ ಭಾರತವು ತನ್ನ ನಾಗರಿಕರನ್ನು ಸ್ಥಳಾಂತರಿಸಲು ಮುಂದಾಗಿದೆ. ಗುರುವಾರ ಕಾಬೂಲ್‌ನಿಂದ ಸುಮಾರು 180 ಜನರನ್ನು ಮಿಲಿಟರಿ ವಿಮಾನದಲ್ಲಿ ಕರೆತರುವ ನಿರೀಕ್ಷೆಯಿದೆ. ಈ ಬಗ್ಗೆ ಮಾಹಿತಿ ನೀಡಿರುವ ಅಧಿಕಾರಿಗಳು, ಸ್ಥಳಾಂತರಿಸಲ್ಪಟ್ಟವರಲ್ಲಿ ಭಾರತೀಯರು ಮತ್ತು ಅನೇಕ ಅಫ್ಘಾನ್ ಸಿಖ್ಖರು ಮತ್ತು ಹಿಂದುಗಳು ಸೇರಿದ್ದಾರೆ ಎಂದು ಹೇಳಿದರು. ಸುಮಾರು 180 ಜನರನ್ನು ಹೊತ್ತ ವಿಮಾನವು ಗುರುವಾರ ಬೆಳಿಗ್ಗೆ ದೆಹಲಿ ತಲುಪುವ ಸಾಧ್ಯತೆಯಿದೆ ಎಂದು ಇವರಲ್ಲಿ ಒಬ್ಬರು ಹೇಳಿದರು.


ಈಗಾಗಲೇ 600 ಕ್ಕೂ ಹೆಚ್ಚು ಜನರನ್ನು 'ಆಪರೇಷನ್ ದೇವಿ ಶಕ್ತಿ' ಅಡಿಯಲ್ಲಿ ತರಲಾಗಿದೆ: 
ಆಗಸ್ಟ್ 15 ರಂದು ತಾಲಿಬಾನ್ ವಶಪಡಿಸಿಕೊಂಡ ನಂತರ ಕಾಬೂಲ್‌ನಲ್ಲಿ ಕ್ಷಿಪ್ರವಾಗಿ ಕ್ಷೀಣಿಸುತ್ತಿರುವ ಭದ್ರತಾ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಭಾರತವು ಈಗಾಗಲೇ 600 ಕ್ಕೂ ಹೆಚ್ಚು ಜನರನ್ನು ತನ್ನ ಕಾರ್ಯಾಚರಣೆ 'ಆಪರೇಷನ್ ದೇವಿ ಶಕ್ತಿ' ಅಡಿಯಲ್ಲಿ ಮರಳಿ ಕರೆತಂದಿದೆ. 


ಇದನ್ನೂ ಓದಿ- Taliban: ಜೀನ್ಸ್ ಧರಿಸಿದರೆ ಥಳಿತ, ನೇಲ್ ಪಾಲಿಶ್ ಹಾಕಿದರೆ ಸಿಗಲಿದೆ ಭಯಾನಕ ಶಿಕ್ಷೆ


ಇಲ್ಲಿಯವರೆಗೆ, ಕಾಬೂಲ್‌ನಿಂದ ಸುಮಾರು 626 ಜನರನ್ನು ಸ್ಥಳಾಂತರಿಸಲಾಗಿದೆ. ಇದು ಅಫ್ಘಾನಿಸ್ತಾನದ ಪ್ರಜೆಗಳಾದ ಸಿಖ್ಖರು ಮತ್ತು ಅಫ್ಘಾನಿಸ್ತಾನದ ಹಿಂದೂಗಳು ಸೇರಿದಂತೆ ಭಾರತೀಯ ನಾಗರಿಕರನ್ನೂ ಒಳಗೊಂಡಿದೆ. ಅಫ್ಘಾನಿಸ್ತಾನದಿಂದ ಇಲ್ಲಿಯವರೆಗೆ 228 ಭಾರತೀಯ ನಾಗರಿಕರು ಸೇರಿದಂತೆ ಒಟ್ಟು 626 ಜನರನ್ನು ಸ್ಥಳಾಂತರಿಸಲಾಗಿದೆ ಎಂದು ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಮಂಗಳವಾರ ಮಾಹಿತಿ ನೀಡಿದ್ದಾರೆ. ಅವರಲ್ಲಿ 77 ಜನರು ಅಫ್ಘಾನ್ ಸಿಖ್ಖರು ಎಂದು ಅವರು ತಿಳಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ