Afghanistan Crisis: ಅಫ್ಘಾನಿಸ್ತಾನದಲ್ಲಿ ಇನ್ನುಂದೆ ಹಾಡುವಂತಿಲ್ಲ, ಕುಣಿಯುವಂತಿಲ್ಲ..!

ಅಫ್ಘಾನಿಸ್ತಾನದಲ್ಲಿ ಜನಪರ ಆಡಳಿತ ನೀಡುತ್ತೇವೆ ಎನ್ನುತ್ತಿದ್ದ ತಾಲಿಬಾನ್ ನಾಯಕರೇ ಈಗ ಶರಿಯಾ ಕಾನೂನು ಜಾರಿಗೊಳಿಸುತ್ತೇವೆಂದು ಅಧಿಕೃತವಾಗಿ ಘೋಷಿಸಿದ್ದಾರೆ.

Written by - Puttaraj K Alur | Last Updated : Aug 25, 2021, 12:59 PM IST
  • ಜಗತ್ತಿನ ಎಲ್ಲಾ ದೇಶಗಳು ಅಫ್ಘಾನಿಸ್ತಾನದ ಹೆಣ್ಣುಮಕ್ಕಳ ಹಕ್ಕುಗಳ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ
  • ಶರಿಯಾ ಕಾನೂನು ಜಾರಿಗೊಳಿಸುತ್ತೇವೆ ಎಂದು ತಾಲಿಬಾನ್ ವಕ್ತಾರ್ ಜಬೀವುಲ್ಲಾ ಮುಜಾಯಿದ್ ಹೇಳಿದ್ದಾರೆ
  • ಶಿಕ್ಷೆ ಜಾರಿಗೊಳಿಸುವ ಮುನ್ನ ಸಂಪೂರ್ಣ ತನಿಖೆ ನಡೆಸಲಾಗುತ್ತದೆ ಎಂದು ತಾಲಿಬಾನ್ ನಾಯಕರು ಹೇಳಿದ್ದಾರೆ
Afghanistan Crisis: ಅಫ್ಘಾನಿಸ್ತಾನದಲ್ಲಿ ಇನ್ನುಂದೆ ಹಾಡುವಂತಿಲ್ಲ, ಕುಣಿಯುವಂತಿಲ್ಲ..! title=
ಅಫ್ಘಾನಿಸ್ತಾನದಲ್ಲಿ ಜಾರಿಯಾಗಲಿದೆ ಕಠಿಣ ಶರಿಯಾ ಕಾನೂನು (Photo Courtesy: @Zee News)

ನವದೆಹಲಿ: ತಾಲಿಬಾನ್ ಉಗ್ರರ ಕಪಿಮುಷ್ಠಿಯಲ್ಲಿ ಸಿಲುಕಿರುವ ಅಫ್ಘಾನಿಸ್ತಾನ(Afghanistan)ದಲ್ಲಿ ಕಟ್ಟುನಿಟ್ಟಾಗಿ ಶರಿಯಾ ಕಾನೂನು ಜಾರಿಗೊಳಿಸಲು ಹೊಸ ಸರ್ಕಾರ ಸಜ್ಜಾಗಿದೆ. ತಾವು ಸಂಪೂರ್ಣ ಬದಲಾಗಿದ್ದೇವೆ, ಅಫ್ಘಾನಿಸ್ತಾನದಲ್ಲಿ ಹೊಸ ರೀತಿಯ ಉದಾರವಾದಿ ಆಳ್ವಿಕೆ ತರುತ್ತೇವೆ ಎಂದು ಹೇಳುತ್ತಿದ್ದ ತಾಲಿಬಾನ್ ನಾಯಕರು ಈಗ ಅದೇ ರಾಗ ಅದೇ ಹಾಡು ಎನ್ನುತ್ತಿದ್ದಾರೆ.

ಅಫ್ಘಾನಿಸ್ತಾನ(Afghanistan)ದಲ್ಲಿ ಜನಪರ ಆಡಳಿತ ನೀಡುತ್ತೇವೆ, ಮಕ್ಕಳು ಮಹಿಳೆಯರ ಹಕ್ಕುಗಳಿಗೆ ಗೌರವ ನೀಡುತ್ತೇವೆ ಎನ್ನುತ್ತಿದ್ದ ತಾಲಿಬಾನ್ ನಾಯಕರೇ ಈಗ ಶರಿಯಾ ಕಾನೂನು ಜಾರಿಗೊಳಿಸುತ್ತೇವೆಂದು ಮೊಟ್ಟಮೊದಲ ಬಾರಿಗೆ ಅಧಿಕೃತವಾಗಿ ಘೋಷಿಸಿದ್ದಾರೆ. ವಾಸ್ತವವಾಗಿ ತಾಲಿಬಾನ್ ನಾಯಕರು ಯಾವುದೇ ರೀತಿ ಬದಲಾಗಿಲ್ಲ. 1996 ರಿಂದ 2001ರವರೆಗೆ ಯಾವ ರೀತಿ ಅಫ್ಘಾನಿಸ್ತಾನದಲ್ಲಿ ಕಠಿಣ ನಿಯಮಗಳನ್ನು ಜಾರಿಗೊಳಿಸಲಾಗಿತ್ತೋ ಅದೇ ನಿಯಮಗಳನ್ನು ಮತ್ತೆ ಜಾರಿಗೊಳಿಸಲು ಮುಂದಾಗಿದ್ದಾರೆ. 

ಅಫ್ಘಾನಿಸ್ತಾನದಲ್ಲಿ ನಾವು ಮತ್ತೆ ಶರಿಯಾ ಕಾನೂನು(Sharia Law) ಜಾರಿಗೊಳಿಸುತ್ತೇವೆ ಎಂದು ತಾಲಿಬಾನ್ ವಕ್ತಾರ್ ಜಬೀವುಲ್ಲಾ ಮುಜಾಯಿದ್ ಹೇಳಿದ್ದಾರೆ. ಆದರೆ ಶಿಕ್ಷೆ ಕೊಡುವ ಮುನ್ನ ಈ ಬಗ್ಗೆ ಸಂಪೂರ್ಣ ತನಿಖೆ ನಡೆಸಲಾಗುವುದು ಅಂತಾ ಹೇಳಿದ್ದಾರೆ. ‘ನಾವು ಅಫ್ಘಾನಿಸ್ತಾನದಲ್ಲಿ ಕಟ್ಟುನಿಟ್ಟಾಗಿ ಶರಿಯಾ ಶಿಕ್ಷೆ ಜಾರಿಗೊಳಿಸುತ್ತೇವೆ. ಯಾರೇ ಆಗಲಿ ಶರಿಯಾಗೆ ವೃತ್ತಿ ವಿರುದ್ಧವಾಗಿದ್ದರೆ ಬೇರೆ ವೃತ್ತಿಗೆ ಶಿಫ್ಟ್ ಆಗಬೇಕು’ ಅಂತಾ ಮುಜಾಯಿದ್(Zabiullah Mujahid) ಎಚ್ಚರಿಕೆ ನೀಡಿದ್ದಾರೆಂದು ವರದಿಯಾಗಿದೆ.

ಇದನ್ನೂ ಓದಿ: Taliban Warns US: ಅಫ್ಘಾನಿಸ್ತಾನ್ ಜನರನ್ನು ರಕ್ಷಿಸಬೇಡಿ, ದೇಶ ತೊರೆಯಿರಿ, ವಿಶ್ವದ ದೊಡ್ಡಣ್ಣನಿಗೆ ತಾಲಿಬಾನ್ ಅಲ್ಟಿಮೆಟಮ್

ಮಾಹಿತಿಯ ಪ್ರಕಾರ ಅಫ್ಘಾನಿಸ್ತಾನದಲ್ಲಿ ಜಾರಿಯಾಗಲಿರುವ ಶರಿಯಾ ಕಾನೂನಿನ ಪ್ರಕಾರ ಅದಕ್ಕೆ ವಿರುದ್ಧವಾಗಿ ಯಾವುದೇ ವೃತ್ತಿಯನ್ನು ಮಾಡುವಂತಿಲ್ಲ. ಒಂದು ವೇಳೆ ಅದರ ವಿರುದ್ಧ ಮುಂದುವರಿದರೆ ಅಂತವರಿಗೆ ಕಠಿಣ ಶಿಕ್ಷೆ ನೀಡಲಾಗುತ್ತದೆ ಅಂತಾ ತಿಳಿದುಬಂದಿದೆ. ಹೀಗಾಗಿ ಶರಿಯಾ ಕಾನೂನಿಗೆ ವಿರುದ್ಧವಾಗಿರುವ ವೃತ್ತಿಯಲ್ಲಿರುವವರು ಬೇರೆ ಕೆಲಸ ನೋಡಿಕೊಳ್ಳಿ ಎಂದು ತಾಲಿಬಾನ್(Taliban) ಖಡಕ್ ಸಂದೇಶ ನೀಡಿದೆ.  

ಜಗತ್ತಿನ ಎಲ್ಲಾ ದೇಶಗಳು ಅಫ್ಘಾನಿಸ್ತಾನದ ಹೆಣ್ಣುಮಕ್ಕಳ ಹಕ್ಕುಗಳ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ಆದರೆ ಜಗತ್ತನ್ನು ಸಮಾಧಾನಿಸಲು ತಾಲಿಬಾನಿಗಳು ಅಫ್ಘಾನಿಸ್ತಾನದ ಮಹಿಳೆಯರಿಗೆ ಶರಿಯಾ ಕಾನೂನಿನ ಪ್ರಕಾರ ಹಕ್ಕುಗಳನ್ನು, ಸ್ವಾತಂತ್ರ್ಯವನ್ನು ನೀಡಲಾಗುವುದು ಅಂತಾ ಹೇಳುತ್ತಲೇ ಬಂದಿದ್ದಾರೆ. ಇದೀಗ ಮತ್ತೆ ತಾಲಿಬಾನಿಗಳು ಶರಿಯಾ ಕಾನೂನಿ(Sharia Law)ನ ಜಪ ಮಾಡಿದ್ದು, ಮತ್ತಷ್ಟು ಆತಂಕ ಹೆಚ್ಚಾಗಿದೆ. ಒಂದು ವೇಳೆ ಈ ಕಾನೂನು ಜಾರಿಯಾದರೆ ಚಿತ್ರರಂಗದ ಕಲಾವಿದರು ಸಿನಿಮಾಗಳಲ್ಲಿ ನಟಿಸುವಂತಿಲ್ಲ, ಕುಣಿಯುವಂತಿಲ್ಲ, ಸಂಗೀತಗಾರರು ಹಾಡುವಂತಿಲ್ಲ. ಹಾಸ್ಯ ನಟನೆಗೆ ಬ್ರೇಕ್ ಬೀಳಲಿದೆ. ಅನೇಕ ವೃತ್ತಿಯ ಕಲಾವಿದರಿಗೆ ಇದರಿಂದ ಸಮಸ್ಯೆಯುಂಟಾಗಲಿದೆ.

ಇದನ್ನೂ ಓದಿ: COVID 22!: ಮೊದಲಿಗಿಂತ ಹೆಚ್ಚು ಮಾರಕವಾಗಲಿದೆ ಕೊರೊನಾ? ವಿಜ್ಞಾನಿಗಳಿಗೆ ಕಾಡುತ್ತಿದೆ Covid-22 ಭಯ

ಶರಿಯಾ ಕಾನೂನಿನ ಪ್ರಕಾರ ಅಫ್ಘಾನಿಸ್ತಾನ(Afghanistan)ದಲ್ಲಿ ತಪ್ಪು ಮಾಡಿರುವುದು ಸಾಬೀತಾದರೆ ತಪ್ಪಿತಸ್ಥರಿಗೆ ಸಾರ್ವಜನಿಕವಾಗಿ ಕಲ್ಲು ಹೊಡೆದು ಸಾಯಿಸುವುದು, ಸಾರ್ವಜನಿಕವಾಗಿ ನೇಣು ಹಾಕುವುದು ಅಥವಾ ಸಾರ್ವಜನಿಕವಾಗಿ ಗುಂಡು ಹಾರಿಸಿ ಕೊಲ್ಲಲಾಗುತ್ತದೆ. ಈ ಶಿಕ್ಷೆಗಳನ್ನು ಜಾರಿಗೊಳಿಸುವ ಮುನ್ನ ಪ್ರಕರಣಗಳ ಬಗ್ಗೆ ಸಂಪೂರ್ಣ ತನಿಖೆ ನಡೆಸಲಾಗುತ್ತದೆ ಎಂದು ತಾಲಿಬಾನ್ ನಾಯಕರು ಹೇಳಿದ್ದಾರೆ.  

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News