ನವದೆಹಲಿ: ಕೇರಳದ ಶಬರಿಮಲೈನ  ಅಯ್ಯಪ್ಪ ದೇವಸ್ಥಾನಕ್ಕೆ ಎಲ್ಲಾ ವಯಸ್ಸಿನ ಮಹಿಳೆಯರನ್ನು ಪ್ರವೇಶಿಸಲು ಸುಪ್ರೀಂಕೋರ್ಟ್ ಶುಕ್ರವಾರ ದಾರಿ ಮಾಡಿಕೊಟ್ಟಿದೆ. ಆದರೆ ಅಚ್ಚರಿ ಎಂದರೆ ಐವರು ನ್ಯಾಯಾಧೀಶರನ್ನು ಒಳಗೊಂಡ ಸಾಂವಿಧಾನಿಕ ಪೀಠದಲ್ಲಿ ಏಕೈಕ ಮಹಿಳಾ ನ್ಯಾಯಾಧೀಶರಾಗಿದ್ದ ಇಂದು ಮಲ್ಹೋತ್ರಾ ಇದನ್ನು ವಿರೋಧಿಸಿದರು.


COMMERCIAL BREAK
SCROLL TO CONTINUE READING

ನ್ಯಾಯಮೂರ್ತಿಗಳಾದ ಆರ್.ಎಫ್ ನಾರಿಮನ್ ಮತ್ತು ಡಿ.ವೈ.ಚಂದ್ರಚೂಡ ಅವರು ಭಾರತದ ಮುಖ್ಯ ನ್ಯಾಯಮೂರ್ತಿ ದಿಪಕ್ ಮಿಶ್ರಾ ಮತ್ತು ಜಸ್ಟಿಸ್ ಎಂಎಂ ಖಾನ್ವಿಲ್ಕರ್ ಅವರೊಂದಿಗೆ ಚರ್ಚಿಸಿ ಮಹಿಳೆಯರಿಗೆ ಪ್ರವೇಶವನ್ನು ನಿಷೇಧಿಸಿರುವುದು ಲಿಂಗ ತಾರತಮ್ಯದ ಮೂಲಕ  ಹಿಂದೂ ಮಹಿಳೆಯರ ಹಕ್ಕುಗಳನ್ನು ಉಲ್ಲಂಘಿಸುತ್ತದೆ ಎಂದು ಹೇಳಿದರು.


ಆದರೆ ನ್ಯಾಯಮೂರ್ತಿ ಇಂದು ಮಲ್ಹೋತ್ರಾ ಮಾತ್ರ ಇದಕ್ಕೆ  ವಿರೋಧವಾದ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.ದೇಶದಲ್ಲಿನ  ಜಾತ್ಯತೀತ ಪರಿಸ್ಥಿತಿಯನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ  ಆಳವಾದ ಧಾರ್ಮಿಕ ಅರ್ಥವನ್ನು ಹೊಂದಿರುವ ಸಮಸ್ಯೆಗಳಿಗೆ ಸಿಕ್ಕಿಹಾಕಿಕೊಳ್ಳಬಾರದು ಎಂದು ಜಸ್ಟಿಸ್ ಮಲ್ಹೋತ್ರಾ ಹೇಳಿದರು. 'ಸತಿ' ಮುಂತಾದ ಸಾಮಾಜಿಕ ದುಷ್ಟ ಪದ್ದತಿಗಳನ್ನು  ಹೊರತುಪಡಿಸಿ  ಉಳಿದ ಯಾವ ಧಾರ್ಮಿಕ ಆಚರಣೆಗಳಲ್ಲಿ ಮಧ್ಯಸ್ಥಿಕೆ ವಹಿಸುವುದು ಕೋರ್ಟ್ ಕೆಲಸವಲ್ಲ ಎಂದು ಅವರು ಅಭಿಪ್ರಾಯಪಟ್ಟರು  


 ಸಮಾನತೆಯ ಹಕ್ಕಿನೊಂದಿಗೆ ಅಯ್ಯಪ್ಪ ಭಕ್ತರ ಆರಾಧನೆಯ ಹಕ್ಕು ಕೂಡ ಇದೆ ಎಂದು ಅವರು ಹೇಳಿದರು. ತರ್ಕಬದ್ಧತೆಯ ವಿಚಾರಗಳನ್ನು ಧರ್ಮದ ವಿಷಯಗಳಲ್ಲಿ ತರಲಾಗುವುದಿಲ್ಲ ಮತ್ತು ಭಾರತವು ವೈವಿಧ್ಯಮಯ ಧಾರ್ಮಿಕ ಆಚರಣೆಗಳನ್ನು ಹೊಂದಿದೆ ಮತ್ತು ಸಂವಿಧಾನಾತ್ಮಕ ನೈತಿಕತೆಯು ಅವರು ನಂಬುವ ಒಂದು ಧರ್ಮವನ್ನು ಯಾರನ್ನಾದರೂ ಉತ್ತೇಜಿಸಲು ಅವಕಾಶ ನೀಡುತ್ತದೆ ಎಂದು ಹೇಳಿದರು. ಸಮಾನತೆ ಹಕ್ಕು ವಿಧಿ 25 ರ ಅಡಿಯಲ್ಲಿ ಪೂಜಿಸುವ  ಮೂಲಭೂತ ಹಕ್ಕನ್ನು ಮೀರಬಾರದು ಎಂದು ಅವರು ಹೇಳಿದರು.


ಈ ಪ್ರಕರಣದಲ್ಲಿನ ಸಮಸ್ಯೆಯು ಕೇವಲ ಶಬರಿಮಲೆಗೆ ಮಾತ್ರ ಸೀಮಿತವಾಗಿಲ್ಲ ಬದಲಾಗಿ ಅದು ಧಾರ್ಮಿಕ ಸ್ಥಳಗಳ ಮೇಲೆಯೂ ಸಹಿತ  ಪರಿಣಾಮ ಉಂಟುಮಾಡುತ್ತದೆ ಎಂದು ನ್ಯಾಯಾಧೀಶೆ ಮಲ್ಹೋತ್ರಾ ಹೇಳಿದ್ದಾರೆ.