ನಮ್ಮದು ಸ್ವರ್ಗದಲ್ಲಿ ನಿಶ್ಚಯಿಸಿದ ಸಹಭಾಗಿತ್ವ- ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು
ಮುಂಬೈ: ಇಸ್ರೇಲಿ ಪ್ರಧಾನ ಮಂತ್ರಿ ಬೆಂಜಮಿನ್ ನೇತನ್ಯಾಹು ಭಾರತದೊಂದಿಗೆ ತನ್ನ ದೇಶದ ಪಾಲುದಾರಿಕೆಯನ್ನು "ಸ್ವರ್ಗದಲ್ಲಿ ರೂಪಿತಗೊಂಡಿದ್ದು" ಎಂದು ಬಣ್ಣಿಸಿದ್ದಾರೆ, ಇದು ಮಾನವೀಯತೆ, ಪ್ರಜಾಪ್ರಭುತ್ವ ಮತ್ತು ಸ್ವಾತಂತ್ರ್ಯದ ಪ್ರೀತಿಯ ಹಂಚಿಕೆಯ ಮೌಲ್ಯಗಳ ಮೇಲೆ ನಿರ್ಧಾರಿತವಾದದ್ದು ಎಂದು ಅಭಿಪ್ರಾಯಪಟ್ಟರು.
ಮುಂಬೈನಲ್ಲಿ ಭಾರತ-ಇಸ್ರೇಲ್ ವಾಣಿಜ್ಯ ಸಮ್ಮೇಳನದಲ್ಲಿ ಮಾತನಾಡಿದ ನೆತನ್ಯಾಹು ಪ್ರಧಾನಿ ನರೇಂದ್ರ ಮೋದಿಯೊಂದಿಗೆ ವೈಯಕ್ತಿಕವಾಗಿ ಉತ್ತಮ ಸಂಬಂಧವನ್ನು ಹೊಂದಿದ್ದಾರೆ ಎಂದು ತಿಳಿಸಿದರು. ತಮ್ಮ ನಾಲ್ಕು ದಿನದ ಭಾರತದ ಭೇಟಿಯ ಕೊನೆಯ ಭಾಗದಲ್ಲಿರುವ ಅವರು ಈ ಭೇಟಿ ಅದ್ಬುತವಾದದ್ದು ಎಂದು ಬಣ್ಣಿಸಿದ್ದಾರೆ.
ನೆತಾನ್ಯಹು ಇನ್ನು ಮುಂದುವರೆದು ಮಾತನಾಡುತ್ತಾ ಭಾರತವು ತನ್ನ ಸಂಸ್ಕೃತಿ ಮತ್ತು ಜನರಿಂದಾಗಿ ಅಗಾದವಾದ ಗೌರವವನ್ನು ಹೊಂದಿದೆ. ಎರಡು ದೇಶಗಳು ಭೂಮಿಯ ಮೇಲಿನ ಎರಡು ಪುರಾತನ ಸಂಸ್ಕೃತಿಗಳು, ಪ್ರಜಾಪ್ರಭುತ್ವ ರಾಷ್ಟ್ರಗಳು, ಅಲ್ಲದೆ ಸ್ವಾತಂತ್ರ್ಯಕ್ಕಾಗಿ ಪ್ರೀತಿಯನ್ನು ಹಾಗೂ ಮಾನವೀಯತೆಯನ್ನು ಎರಡು ದೇಶಗಳು ಹಂಚಿಕೊಳ್ಳುತ್ತವೆ. ಆದ್ದರಿಂದ ನಾವು ನಿಜವಾಗಿಯೂ ನಿಮ್ಮ ಪಾಲುದಾರರಾಗಿದ್ದು, ಆದ್ದರಿಂದ ನಮ್ಮದು ಸ್ವರ್ಗದಲ್ಲಿ ಮಾಡಿದ ಸಹಭಾಗಿತ್ವವಾಗಿದೆ" ಎಂದು ನೇತನ್ಯಾಹು ಬಣ್ಣಿಸಿದರು.