ನವದೆಹಲಿ: ಕಾಂಗ್ರೆಸ್ ಹಿರಿಯ ನಾಯಕ ಗುಲಾಮ್ ನಬಿ ಆಜಾದ್ ಮೂಲ ಭಿನ್ನಮತೀಯರಲ್ಲಿ ಒಬ್ಬರು, ಅವರ ಪತ್ರವು ಈಗ ಕಾಂಗ್ರೆಸ್ ಪಕ್ಷದಲ್ಲಿ ಬಿರುಗಾಳಿಯನ್ನು ಸೃಷ್ಟಿಸಿದೆ.


COMMERCIAL BREAK
SCROLL TO CONTINUE READING

'ನಮ್ಮ ಪಕ್ಷದ ರಚನೆಯು ಕುಸಿದಿದೆ. ನಾವು ನಮ್ಮ ರಚನೆಯನ್ನು ಪುನರ್ನಿರ್ಮಿಸಬೇಕಾಗಿದೆ ಮತ್ತು ಆ ರಚನೆಯಲ್ಲಿ ಯಾವುದೇ ನಾಯಕನನ್ನು ಆಯ್ಕೆ ಮಾಡಿದರೆ ಮಾತ್ರ ಅದು ಕಾರ್ಯಗತವಾಗಲಿದೆ.ಆದರೆ ನಾಯಕನನ್ನು ಬದಲಾಯಿಸುವ ಮೂಲಕ ನಾವು ಬಿಹಾರ, ಯುಪಿ, ಮಧ್ಯಪ್ರದೇಶ ಇತ್ಯಾದಿಗಳನ್ನು ಗೆಲ್ಲುತ್ತೇವೆ ಎಂದು ಹೇಳುವುದು ತಪ್ಪು, ನಾವು ವ್ಯವಸ್ಥೆಯನ್ನು ಬದಲಾಯಿಸಿದ ನಂತರ ಅದು ಸಂಭವಿಸುತ್ತದೆ" ಎಂದು ಆಜಾದ್ ಸುದ್ದಿ ಸಂಸ್ಥೆ ಎಎನ್‌ಐಗೆ ನೀಡಿದ ಸಂದರ್ಶನದಲ್ಲಿ ಹೇಳಿದರು.


ರಾಹುಲ್ ಆರೋಪಕ್ಕೆ ಆಜಾದ್, ಸಿಬಲ್ ಸಿಟ್ಟು: CWC ಸಭೆಯಲ್ಲಿ ರಾಜೀನಾಮೆ ಬೆದರಿಕೆ


ಬಿಹಾರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಅತ್ಯಂತ ಕಳಪೆ ಪ್ರದರ್ಶನ ನೀಡಿತು, ಕಪಿಲ್ ಸಿಬಲ್ ರಂತಹ ಹಿರಿಯ ನಾಯಕರು ಸಹಿತ ಪಕ್ಷದ ನಾಯಕತ್ವವನ್ನು ಟೀಕಿಸಿದರು.ಪಕ್ಷದ ಉಪಸ್ಥಿತಿಯು ಪ್ರಬಲವಾಗಿರುವ ಗುಜರಾತ್ ಮತ್ತು ಮಧ್ಯಪ್ರದೇಶದಂತಹ ರಾಜ್ಯಗಳಲ್ಲಿ ಆದ ಹಿನ್ನಡೆಯನ್ನು ಸೂಚಿಸಿದ ಸಿಬಲ್ ಅವರು ಇದು ನಾವು ಕ್ಷೀಣಿಸುತ್ತಿದ್ದೇವೆ ಎನ್ನುವುದಕ್ಕೆ ನಿದರ್ಶನ ಎಂದರು.


ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಯಂತಹ ತತಕ್ಷಣದ ಹೋರಾಟ ನೋಡಿಲ್ಲ-ಗುಲಾಮ್ ನಬಿ ಆಜಾದ್


ಈಗ ದೇಶದ ರಾಜಕೀಯ ವಾಸ್ತವನ್ನು ಅರ್ಥೈಸಿಕೊಳ್ಳುವ ಅನುಭವಿ ಜನರೊಂದಿಗೆ ಸಂವಹನ ನಡೆಸುವುದು ಅಗತ್ಯ ಎಂದ ಅವರು ಆದರೆ ಆ ನಿಟ್ಟಿನಲ್ಲಿ ಯಾವುದೇ ಸಂವಹನ ಮತ್ತು ಪಕ್ಷದ ನಾಯಕತ್ವವೂ ಕೂಡ ಆ ನಿಟ್ಟಿನಲ್ಲಿ ಪ್ರಯತ್ನಿಸಿಲ್ಲ ಎಂದು ತೋರುತ್ತದೆ ಎಂದು ಟೀಕಿಸಿದರು.