ಗಾಜಿಯಾಬಾದ್​: ಉತ್ತರ ಪ್ರದೇಶದ ಗಾಜಿಯಾಬಾದ್‌ನ ಕಿನೌನಿ ಗ್ರಾಮದಲ್ಲಿ ಸೋಮವಾರ ಸಂಭವಿಸಿದ ಅಗ್ನಿ ಅವಘಡದಲ್ಲಿ ಸುಮಾರು 30ಕ್ಕೂ ಹೆಚ್ಚು ಹಸುಗಳು ಸುಟ್ಟು ಕರಕಲಾಗಿವೆ ಎಂದು ವರದಿಯಾಗಿದೆ.


COMMERCIAL BREAK
SCROLL TO CONTINUE READING

ಮಧ್ಯಾಹ್ನ ಕಿನೌನಿ ಗ್ರಾಮದ ಗೋಶಾಲೆಗಳ ಬಳಿಯಿರುವ ಕೊಳೆಗೇರಿಯಲ್ಲಿ ಭಾರೀ ಬೆಂಕಿ ಕಾಣಿಸಿಕೊಂಡು ಈ ದುರಂತ ನಡೆದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಕೊಳಗೇರಿಯಲ್ಲಿ ಮೊದಲು ಕಾಣಿಸಿಕೊಂಡ ಬೆಂಕಿ ಸ್ವಲ್ಪ ಸಮಯದ ನಂತ ಸುಮಾರು 70ಕ್ಕೂ ಹೆಚ್ಚು ಹಸುಗಳು ಇದ್ದ ಸಮೀಪದ ಗೋಶಾಲೆಗಳಿಗೆ ವ್ಯಾಪಿಸಿದೆ.


ಇದನ್ನೂ ಓದಿ: Mustard Oil : ಅಡುಗೆ ಎಣ್ಣೆ ಬೆಲೆಯಲ್ಲಿ ಕುಸಿತ, ಹೊಸ ದರ ಎಷ್ಟು? ಇಲ್ಲಿದೆ ತಿಳಿಯಿರಿ


ವರದಿಗಳ ಪ್ರಕಾರ ಬೆಂಕಿ ಅವಘಡದಲ್ಲಿ ಸುಮಾರು 30 ರಿಂದ 40 ಹಸುಗಳು ಸುಟ್ಟು ಕರಕಲಾಗಿವೆ ಎಂದು ತಿಳಿದುಬಂದಿವೆ. ಈ ಬಗ್ಗೆ ಮಾತನಾಡಿರುವ ಗಾಜಿಯಾಬಾದ್ ಜಿಲ್ಲಾಧಿಕಾರಿ ರಾಕೇಶ್ ಕುಮಾರ್ ಸಿಂಗ್, ಪ್ರಾಥಮಿಕ ಮಾಹಿತಿ ಪ್ರಕಾರ 30 ರಿಂದ 40 ಹಸುಗಳು ಸಜೀವ ದಹನವಾಗಿರುವ ಕುರಿತು ಮಾಹಿತಿ ಲಭ್ಯವಾಗಿದೆ ಎಂದು ತಿಳಿಸಿದ್ದಾರೆ.


ಘಟನೆಯಲ್ಲಿ ಎಷ್ಟು ಹಸುಗಳು ಸಾವಿಗೀಡಾಗಿವೆ ಎಂಬುದು ಇನ್ನಷ್ಟೇ ತಿಳಿಯಬೇಕಿದೆ. ಘಟನೆ ವೇಳೆ ಸ್ಥಳದಲ್ಲಿ ಹಾಜರಿದ್ದ ಹಲವರು 50ಕ್ಕೂ ಅಧಿಕ ಹಸುಗಳು ಸುಟ್ಟುಕರಲಾಗಿವೆ ಎಂದು ತಿಳಿಸಿದ್ದಾರೆ. ಈ ಸಂಬಂಧ ತನಿಖೆ ಕೈಗೊಂಡಿದ್ದು, ಬೆಂಕಿ ಹೊತ್ತಿಕೊಳ್ಳಲು ನಿಖರ ಕಾರಣವೇನು ಅನ್ನೋದನ್ನು ಪರಿಶೀಲಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.


ಇದನ್ನೂ ಓದಿ: Rape Case: ಕಾಯಿಲೆ ಗುಣಪಡಿಸುತ್ತೇನೆ ಎಂದು ಮಹಿಳೆ ಮೇಲೆ ಅತ್ಯಾಚಾರಗೈದ ಮಾಂತ್ರಿಕ!


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.