ಎಟಿಎಂನಿಂದ 18 ಲಕ್ಷ ರೂ. ಕದ್ದ ಬ್ಯಾಂಕ್ ಮ್ಯಾನೇಜರ್ ಬಂಧನ
ವಿಚಾರಣೆ ಸಂದರ್ಭದಲ್ಲಿ ಬಂಟಿಖೇಡ ಗ್ರಾಮದ ಓವರ್‌ಸೀಸ್ ಬ್ಯಾಂಕ್ ಶಾಖೆಯಲ್ಲಿ 4 ಕೋಟಿ ರೂ.ಗಳ ಹಗರಣ ನಡೆದಿರುವುದನ್ನು ಪೊಲೀಸರು ಪತ್ತೆ ಹಚ್ಚಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಮುಜಾಫರನಗರ: ಉತ್ತರಪ್ರದೇಶದ ಶಾಮ್ಲಿಯಲ್ಲಿರುವ ಎಟಿಎಂ ನಿಂದ 18 ಲಕ್ಷ ರೂ.ಗಳನ್ನು ಲಪಟಾಯಿಸಿದ ಆರೋಪದಡಿ ಓವರ್ಸೀಸ್ ಬ್ಯಾಂಕ್ ಮ್ಯಾನೇಜರ್ ನನ್ನು ಪೊಲೀಸರು ಬಂಧಿಸಿದ್ದಾರೆ.
ಎಟಿಎಂ ನಿಂದ ಹಣ ದೋಚಿ ಪರಾರಿಯಾಗಿದ್ದ ಬ್ಯಾಂಕ್ ಮ್ಯಾನೇಜರ್ ರಾಬಿನ್ ಬನ್ಸಾಲ್ ಎಂಬಾತನನ್ನು ಶನಿವಾರ ಪತ್ತೆ ಹಚ್ಚಿದ ಪೊಲೀಸರು ಆತನನು ಬಂಧಿಸಿ 14 ಲಕ್ಷ ರೂ.ಗಳನ್ನೂ ವಶಪಡಿಸಿಕೊಂಡಿರುವುದಾಗಿ ಪೋಲಿಸ್ ಅಧೀಕ್ಷಕ ದಿನೇಶ್ ಕುಮಾರ್ ಹೇಳಿದ್ದಾರೆ.
ಓವರ್ ಸೀಸ್ ಬ್ಯಾಂಕ್ ನ ಬಂಟಿಖೇಡ ಶಾಖೆಯ ಮ್ಯಾನೇಜರ್ ಬನ್ಸಾಲ್ ಕಳೆದ ಮಾರ್ಚ್ 4 ರಂದು ಶಾಮ್ಲಿ ಜಿಲ್ಲೆಯಲ್ಲಿರುವ ಎಟಿಎಂ ನಿಂದ 18 ಲಕ್ಷ ರೂ. ಹಣವನ್ನು ದೋಚಿ ಪರಾರಿಯಾಗಿದ್ದರು. ಅಲ್ಲದೆ, ತನ್ನ ಸಹಚರ ಚೇತನ್ ಎಂಬಾತನಿಗೆ ಪಾಸ್ ವರ್ಡ್ ನೀಡಿ ಎಟಿಎಂ ಯಂತ್ರವನ್ನು ತರೆಯುವ ತಾಂತ್ರಿಕ ಉಪಾಯವನ್ನು ಮ್ಯಾನೇಜರ್ ಬನ್ಸಾಲ್ ತಿಳಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಪ್ರಕರಣದ ವಿಚಾರಣೆ ಸಂದರ್ಭದಲ್ಲಿ ಬಂಟಿಖೇಡ ಗ್ರಾಮದ ಓವರ್‌ಸೀಸ್ ಬ್ಯಾಂಕ್ ಶಾಖೆಯಲ್ಲಿ 4 ಕೋಟಿ ರೂ.ಗಳ ಹಗರಣ ನಡೆದಿರುವುದನ್ನು ಪೊಲೀಸರು ಪತ್ತೆ ಹಚ್ಚಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.