Oxygen Express Trains : ಬೆಂಗಳೂರು ತಲುಪಿದ ಮೆಡಿಕಲ್ Oxygen ಹೊತ್ತ 16ನೇ ರೈಲ್ವೆ
ರೈಲಿನ ಮುಖಾಂತರ ಈವರೆಗೂ ರಾಜ್ಯಕ್ಕೆ 1894.71 ಮೆಟ್ರಿಕ್ ಟನ್ ಆಕ್ಸಿಜನ್
ಬೆಂಗಳೂರು : ಮೆಡಿಕಲ್ ಆಕ್ಸಿಜನ್ ಹೊತ್ತ 16ನೇ ಆಕ್ಸಿಜನ್ ಎಕ್ಸ್ ಪ್ರೆಸ್ ರೈಲು ಬೆಂಗಳೂರಿಗೆ ಆಗಮಿಸಿದೆ.
ರೈಲಿನ ಮುಖಾಂತರ ಈವರೆಗೂ ರಾಜ್ಯಕ್ಕೆ 1894.71 ಮೆಟ್ರಿಕ್ ಟನ್ ಆಕ್ಸಿಜನ್(Oxygen) ಬಂದಿದೆ. ಬಾಕಿಯಿರುವ ಆಕ್ಸಿಜನ್ ನ್ನು ಕುರಿತು ಮಾಹಿತಿ ನೀಡುವಂತೆ ರಾಜ್ಯ ಸರ್ಕಾರ ಮೇ.1 ರಂದು ರೈಲ್ವೆ ಮಂಡಳಿಗೆ ಮನವಿ ಮಾಡಿಕೊಂಡಿತ್ತು. ಸಾಕಷ್ಟು ಬಾರಿ ಮನವಿ ಮಾಡಿಕೊಂಡಿದ್ದರೂ ಕೂಡ ರೈಲ್ವೇ ಮಂಡಳಿ ಈ ಕುರಿತು ಯಾವುದೇ ಮಾಹಿತಿಗಳನ್ನೂ ನೀಡಿಲ್ಲ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ : Heavy Rainfall : ಮೇ 31ಕ್ಕೆ ಮುಂಗಾರು ಪ್ರವೇಶ : ರಾಜ್ಯದಲ್ಲಿ ಭಾರಿ ಮಳೆ ಸಾಧ್ಯತೆ!
ಈ ಕುರಿತು ಪ್ರತಿಕ್ರಿಯೆ ನೀಡಿರುವ ಆಕ್ಸಿಜನ್ ನೋಡಲ್ ಅಧಿಕಾರಿ ಮನೀಶ್ ಮೌದ್ಗಿಲ್, ಅಗತ್ಯ ಇರುವ ಪ್ರದೇಶಗಳಿಗೆ ಈ ಆಮ್ಲಜನಕ ಪೂರೈಕೆ(Oxygen Supply) ಮಾಡಲಾಗುತ್ತಿದೆ. ನಿತ್ಯ 850 ಮೆಟ್ರಿಕ್ ಟನ್ ಆಕ್ಸಿಜನ್ ಬೆಂಗಳೂರಿನಲ್ಲಿ ಬಳಕೆಯಾಗುತ್ತಿದೆ. ಹೀಗಾಗಿ ಬೆಂಗಳೂರಿಗೆ 150 ಮೆಟ್ರಿಕ್ ಟನ್ ಬಫರ್ ಸ್ಟಾಕ್ ಆಗಿ ಇರಿಸಿದ್ದೇವೆ. ಈ ಬಫರ್ ಸ್ಟಾಕ್ ಕೊರತೆ ಎದುರಾದ ಕೂಡಲೇ ಬಳಕೆ ಮಾಡಲಾಗುತ್ತದೆ. ಜಿಲ್ಲೆಗಳಲ್ಲೂ ಬಫರ್ ಸ್ಟಾಕ್ ವ್ಯವಸ್ಥೆ ಕಲ್ಪಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ : HD Kumaraswamy : 'ಹಿಂದೆ ಮಾಡಿದ್ದ ಪಾಪದ ಫಲವನ್ನ ಇಂದು ಬಿಜೆಪಿ ಅನುಭವಿಸುತ್ತಿದೆ'
ಜಿಲ್ಲೆಗಳು ಹಾಗೂ ಆಸ್ಪತ್ರೆಗಳಿಗೆ ಎಷ್ಟರ ಪ್ರಮಾಣದಲ್ಲಿ ಆಕ್ಸಿಜನ್ ರವಾನಿಸಲಾಗುತ್ತಿದೆ ಎಂಬುದರ ಕುರಿತು ರಾಜ್ಯ ಸರ್ಕಾರ(State Government)ದ ಯಾವುದೇ ಅಧಿಕಾರಿಗಳ ಬಳಿಯೂ ಮಾಹಿತಿಗಳಿಲ್ಲ.
ಇದನ್ನೂ ಓದಿ : " ಮಹಿಳೆಯರ ಆತ್ಮಗೌರವ ರಕ್ಷಣೆಗಾಗಿ ರಮೇಶ್ ಜಾರಕಿಹೊಳಿ ಅವರನ್ನು ಬಂಧಿಸಲಿ "
ಭಾರತೀಯ ನೌಕಾಪಡೆ(India Navy)ಯಿಂದ ಬರುತ್ತಿರುವ ಆಕ್ಸಿಜನ್ ಉಚಿತವಾಗಿ ಬರುತ್ತಿವೆ. ಬಳಿಕ ಇದನ್ನು ರಾಜ್ಯ ಎಲ್ಲಾ ಸರ್ಕಾರಿ ಆಸ್ಪತ್ರೆಗಳಿಗೆ ಉಚಿತವಾಗಿ ನೀಡಲಾಗುತ್ತದೆ ಎಂದು ಹೇಳಿದ್ದಾರೆ.
\ಇದನ್ನೂ ಓದಿ : Ration Card : ಪಡಿತರ ಚೀಟಿದಾರರಿಗೊಂದು ಗುಡ್ ನ್ಯೂಸ್..!
ಈ ಕುರಿತು ಮಾತನಾಡಿದ ಮೆಡಿಕಲ್ ಆಕ್ಸಿಜನ್(Medical Oxygen) ನೋಡಲ್ ಅಧಿಕಾರಿ, ಖಾಸಗಿ ವಿತರಕರಿಂದಲೇ ಎಲ್ಲಾ ಆಕ್ಸಿಜನ್ ರಾಜ್ಯಕ್ಕೆ ಆಗಮಿಸಿದೆ. ಎಲ್ಲಾ ಆಕ್ಸಿಜನ್ ಒಂದೆಡೆ ಬರುತ್ತಿದ್ದು, ನಂತರ ಈ ಆಕ್ಸಿಜನ್ ನ್ನು ಅಗತ್ಯವಿರುವ ಪ್ರದೇಶಗಳಿಗೆ ರವಾನಿಸಲಾಗುತ್ತಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.