ತಿಹಾರ್ ಜೈಲಿನಲ್ಲೇ 74 ನೇ ಹುಟ್ಟುಹಬ್ಬ ಆಚರಿಸಲಿರುವ ಪಿ.ಚಿದಂಬರಂ
ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಅವರು ತಮ್ಮ ತಿಹಾರ್ ಜೈಲುವಾಸವನ್ನು ಕೊನೆಗೊಳಿಸಲು ಕಾನೂನು ಹೋರಾಟ ಮಾಡಿದರೂ ಜಾಮೀನು ಪಡೆಯಲು ವಿಫಲರಾಗಿದ್ದಾರೆ. ಈ ಹಿನ್ನಲೆಯಲ್ಲಿ ಅವರು ಈಗ ಸೋಮವಾರದಂದು ತಿಹಾರ ಜೈಲಿನಲ್ಲೇ 74 ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.
ನವದೆಹಲಿ: ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಅವರು ತಮ್ಮ ತಿಹಾರ್ ಜೈಲುವಾಸವನ್ನು ಕೊನೆಗೊಳಿಸಲು ಕಾನೂನು ಹೋರಾಟ ಮಾಡಿದರೂ ಜಾಮೀನು ಪಡೆಯಲು ವಿಫಲರಾಗಿದ್ದಾರೆ.ಈ ಹಿನ್ನಲೆಯಲ್ಲಿ ಅವರು ಈಗ ಸೋಮವಾರದಂದು ತಿಹಾರ ಜೈಲಿನಲ್ಲೇ 74 ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.
ಸಿಬಿಐ ನಡೆಸುತ್ತಿರುವ ಐಎನ್‌ಎಕ್ಸ್ ಮೀಡಿಯಾದ ಭ್ರಷ್ಟಾಚಾರ ಪ್ರಕರಣದಲ್ಲಿ ಸೆಪ್ಟೆಂಬರ್ 19 ರವರೆಗೆ ನ್ಯಾಯಾಂಗ ಬಂಧನದಲ್ಲಿದ್ದಾರೆ. ಅವರ ಜಾಮೀನು ಅರ್ಜಿ ದೆಹಲಿ ಹೈಕೋರ್ಟ್‌ನಲ್ಲಿ ಬಾಕಿ ಇದ್ದು, ಅದನ್ನು ಸೆಪ್ಟೆಂಬರ್ 23 ರಂದು ವಿಚಾರಣೆಗೆ ತೆಗೆದುಕೊಳ್ಳಲಾಗುವುದು.ಸೆಪ್ಟೆಂಬರ್ 5 ರಂದು ಐಎನ್‌ಎಕ್ಸ್ ಮೀಡಿಯಾ ಪ್ರಕರಣದಲ್ಲಿ ನ್ಯಾಯಾಲಯವು ಚಿದಂಬರಂ ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಿತು. ಹಲವು ನಾಟಕೀಯ ಬೆಳವಣಿಗೆಗಳ ನಂತರ ಆಗಸ್ಟ್ 21 ರಂದು ಅವರನ್ನು ಬಂಧಿಸಲಾಯಿತು.
ಸೆಪ್ಟೆಂಬರ್ 13 ರಂದು, ದೆಹಲಿ ನ್ಯಾಯಾಲಯವು ಐಎನ್ಎಕ್ಸ್ ಮನಿ ಲಾಂಡರ್ ಪ್ರಕರಣದಲ್ಲಿ ಅವರ ಶರಣಾಗತಿ ಅರ್ಜಿಯನ್ನು ಜಾರಿ ನಿರ್ದೇಶನಾಲಯ (ಇಡಿ) ತಿರಸ್ಕರಿಸಿದೆ, ತನಿಖಾಧಿಕಾರಿಗಳು ಬಂಧಿಸಲು ಬಯಸದಿದ್ದರೆ, ಶರಣಾಗತಿ ಅರ್ಜಿಗೆ ಆಸ್ಪದ ನೀಡಲಾಗುವುದಿಲ್ಲ ಎನ್ನಲಾಗಿದೆ.