Pakistan terror threat : ದೇಶದ ಮೇಲೆ ಭಯೋತ್ಪಾದಕ ದಾಳಿಗೆ ಸಂಬಂಧಿಸಿದಂತೆ ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿದೆ. ಸಿಕ್ಕಿದೆ. ಗುಪ್ತಚರ ಮಾಹಿತಿಯ ಪ್ರಕಾರ, ಈ ಬಾರಿ ದೇಶದಲ್ಲಿ ಸ್ವಾತಂತ್ರ್ಯ ದಿನಾಚರಣೆಗೆ ಮುನ್ನ, ಪಾಕಿಸ್ತಾನಿ ಭಯೋತ್ಪಾದಕರು ದೇಶದ ವಿವಿಧೆಡೆ ದಾಳಿ ನಡೆಸುವ ಹುನ್ನಾರ ನಡೆಸಿದ್ದಾರೆ ಎನ್ನಲಾಗಿದೆ. ಏಕಕಾಲಕ್ಕೆ ಸೂಕ್ಷ್ಮ ಸ್ಥಳಗಳ ಮೇಲೆ ದಾಳಿ ನಡೆಸಲು ಉಗ್ರರು ತಂತ್ರ ರೂಪಿಸಿದ್ದಾರೆ ಎಂದು ಹೇಳಲಾಗಿದೆ.  


COMMERCIAL BREAK
SCROLL TO CONTINUE READING

ಡ್ರೋನ್ ಸ್ಟ್ರೈಕ್‌ಗಳ ಮೂಲಕ ದಾಳಿ ನಡೆಸುವ ಸಿದ್ದತೆ ನಡೆಸಲಾಗಿದೆ ಎಂದು ಹೇಳಲಾಗಿದೆ. ಗುಪ್ತಚರ ಮಾಹಿತಿಯ ಹಿನ್ನೆಲೆಯಲ್ಲಿ ಭದ್ರತಾ ಏಜೆನ್ಸಿಗಳು ಕಟ್ಟೆಚ್ಚರ ವಹಿಸಿದೆ. ಈ ಬಾರಿ ಸ್ವಾತಂತ್ರ್ಯ ದಿನಾಚರಣೆಯಂದು ವಿವಿಧ ರೀತಿಯ ಸಂಭವನೀಯ ಅಪಾಯಗಳ ಬಗ್ಗೆ ಎಚ್ಚರಿಕೆ ವಹಿಸುವಂತೆ ಭದ್ರತಾ ಏಜೆನ್ಸಿಗಳಿಗೆ ಈಗಾಗಲೇ ಸೂಚನೆ ನೀಡಲಾಗಿದೆ. 


ಇದನ್ನೂ ಓದಿ :  Herald House Seal : ನ್ಯಾಷನಲ್ ಹೆರಾಲ್ಡ್ ಆಫೀಸ್ ಗೆ ಬಿಗ ಜಡಿದ ಇಡಿ ಅಧಿಕಾರಿಗಳು!


ಡ್ರೋನ್ ದಾಳಿಯ ಎಚ್ಚರಿಕೆ :  
ಬಂದಿರುವ ಗುಪ್ತಚರ ಎಚ್ಚರಿಕೆಯಲ್ಲಿ ಡ್ರೋನ್‌ಗಳ ಮೇಲೆ ದಾಳಿ ಮಾಡುವ ಮೂಲಕ ವಿಧ್ವಂಸಕ ಸೃಷ್ಟಿ ಮಾಡುವ ಸಾಧ್ಯತೆ ಬಗ್ಗೆ ಹೇಳಲಾಗಿದೆ.  ಇದಕ್ಕಾಗಿ ಪಿಒಕೆಯಲ್ಲಿ ಡ್ರೋನ್‌ಗಳನ್ನು ಗುರಿಯಾಗಿಸಲು ಭಯೋತ್ಪಾದಕರು ಅಭ್ಯಾಸ ನಡೆಸುತ್ತಿದ್ದಾರೆ ಎಂದು ಗುಪ್ತಚರ ಎಚ್ಚರಿಕೆಯಲ್ಲಿ ಉಲ್ಲೇಖಿಸಲಾಗಿದೆ. ಅಲ್ಲದೆ, ಭಯೋತ್ಪಾದಕರು ಮೆಟಲ್ ಡಿಟೆಕ್ಟರ್‌ಗಳನ್ನು ತಪ್ಪಿಸಿಕೊಳ್ಳಲು ಅತ್ಯಾಧುನಿಕ ಐಇಡಿಗಳನ್ನು ಬಳಸುವ ಮೂಲಕ  ಪೈಶಾಚಿಕ ಕೃತ್ಯ ನಡೆಸುವ ಹುನ್ನಾರ ನಡೆಸುತ್ತಿದ್ದಾರೆ ಎನ್ನಲಾಗಿದೆ. 


ಬಾಂಬ್ ನಿಷ್ಕ್ರಿಯಗೊಳಿಸುವಾಗ ಎಚ್ಚರ ವಹಿಸುವಂತೆ ಸೂಚನೆ :  
ಯಾವುದೇ ಸಾರ್ವಜನಿಕ ಸ್ಥಳದಲ್ಲಿ ಅನುಮಾನಾಸ್ಪದ ವಸ್ತುಗಳು ಕಂಡುಬಂದರೆ, ಅದನ್ನು ಎಚ್ಚರಿಕೆಯಿಂದ ಪರಿಶೀಲಿಸುವಂತೆ ಭದ್ರತಾ ಏಜೆನ್ಸಿಗಳಿಗೆ ಸೂಚನೆಗಳನ್ನು ನೀಡಲಾಗಿದೆ. ಬಾಂಬ್ ಇದ್ದರೆ, ಅದನ್ನು ನಿಷ್ಕ್ರಿಯಗೊಳಿಸುವಲ್ಲಿಯೂ ಅತ್ಯಂತ ಎಚ್ಚರ ವಹಿಸುವಂತೆ ಹೇಳಲಾಗಿದೆ. ಮೆಟಲ್ ಡಿಟೆಕ್ಟರ್‌ನಲ್ಲಿ ಪೋಸ್ಟ್ ಮಾಡಿದ ಎಲ್ಲಾ ಸೈನಿಕರು  ವಿಶೇಷ ಕಾಳಜಿ ವಹಿಸುವಂತೆ ಹೇಳಲಾಗಿದೆ. 


ಇದನ್ನೂ ಓದಿ : Parliament Session : ಸಂಸತ್ತಿನಲ್ಲಿ ಭಜ್ಜಿ ಮೊದಲ ಭಾಷಣ : ಶ್ಲಾಘಿಸಿದ ಸಭಾಪತಿಗಳು 


ಉಗ್ರರಿಂದ ಒಳ ನುಸುಳುವ ಯತ್ನ : 
ಭಯೋತ್ಪಾದಕರ ಗುಂಪು ಪಿಒಕೆಯಲ್ಲಿರುವ ಕೋಟಿಲ್ ಎಂಬ ಲಾಂಚಿಂಗ್ ಪ್ಯಾಡ್‌ನಿಂದ ದೇಶದೊಳಗೆ ನುಸುಳಲು ಪ್ರಯತ್ನಿಸುತ್ತಿದ್ದರೆ ಇನ್ನೊಂದು ಪಿಒಕೆಯಲ್ಲಿನ ಡೇಟೋಟ್ ಹೆಸರಿನ ಲಾಂಚಿಂಗ್ ಪ್ಯಾಡ್‌ನಿಂದ ದೇಶದೊಳಗೆ ನುಸುಳಲು ಪ್ರಯತ್ನಿಸುತ್ತಿದೆ ಎಂದು ಸ್ಪಷ್ಟವಾಗಿ  ಹೇಳಲಾಗಿದೆ. ಅಲ್ಲದೆ, ಭಯೋತ್ಪಾದಕರು ಬಳಸಬಹುದಾದ ಮೂರನೇ ಮಾರ್ಗವು ಪಶ್ಚಿಮ ಬಂಗಾಳದ ಗಡಿಯಾಗಿರಬಹುದು ಎನ್ನಲಾಗಿದೆ. ರಾಜಸ್ಥಾನ ಮತ್ತು ಪಂಜಾಬ್ ಗಡಿಯಿಂದ ಭಯೋತ್ಪಾದಕರು ಭಾರತದ ಗಡಿಯನ್ನು ಪ್ರವೇಶಿಸುವ ಸಾಧ್ಯತೆ ಕೂಡಾ ಇದೆ ಎನ್ನಲಾಗಿದೆ. 


ಸೂಕ್ಷ್ಮ ಪ್ರದೇಶದಲ್ಲಿ ಯಾವುದೇ ವಸ್ತು ಹಾರುವಂತಿಲ್ಲ : 
ಗಾಳಿಯಲ್ಲಿ ಹಾರುವ ವಸ್ತುಗಳ ಮೇಲೆ ಭದ್ರತಾ ಸಿಬ್ಬಂದಿ ತೀವ್ರ ನಿಗಾ ಇಡಬೇಕು ಎಂದು  ಎಚ್ಚರಿಕೆಯಲ್ಲಿ ಹೇಳಲಾಗಿದೆ. ಡ್ರೋನ್ ದಾಳಿಯ ಸಾಧ್ಯತೆಯನ್ನು ಗಮನದಲ್ಲಿಟ್ಟುಕೊಂಡು, ಸೂಕ್ಷ್ಮ ಸ್ಥಳಗಳಲ್ಲಿ ಎಲ್ಲಾ ವಸ್ತುಗಳ ಹಾರಾಟವನ್ನು ನಿಷೇಧಿಸಲಾಗಿದೆ. ಗುಪ್ತಚರ ಎಚ್ಚರಿಕೆಗಳ ಹಿನ್ನೆಲೆಯಲ್ಲಿ ಪ್ಯಾರಾ-ಗ್ಲೈಡರ್‌ಗಳು, ಪ್ಯಾರಾ-ಮೋಟರ್‌ಗಳು, ಹ್ಯಾಂಗ್ ಗ್ಲೈಡರ್‌ಗಳು, ಯುಎವಿಗಳು, ಯುಎಎಸ್, ಮೈಕ್ರೋಲೈಟ್ ಏರ್‌ಕ್ರಾಫ್ಟ್, ರಿಮೋಟ್ ಆಪರೇಟೆಡ್ ಏರ್‌ಕ್ರಾಫ್ಟ್, ಹಾಟ್ ಏರ್ ಬಲೂನ್‌ಗಳು, ಸಣ್ಣ ಗಾತ್ರದ ಬ್ಯಾಟರಿ ಚಾಲಿತ ವಿಮಾನ, ಕ್ವಾಡ್‌ಕಾಪ್ಟರ್‌ಗಳು ಮತ್ತು ಪ್ಯಾರಾ ಜಂಪಿಂಗ್ ಫ್ಲೈಟ್ ಗಳ ಹಾರಾಟವನ್ನು ನಿರ್ಬಂಧಿಸುವಂತೆ ಹೇಳಲಾಗಿದೆ.


ಇದನ್ನೂ ಓದಿ : ITBP Recruitment 2022 : ಐಟಿಬಿಪಿಯಲ್ಲಿ 108 ಕಾನ್ಸ್‌ಟೇಬಲ್ ಹುದ್ದೆಗಳಿಗೆ ಅರ್ಜಿ : ವಿವರಗಳಿಗೆ ಇಲ್ಲಿ ನೋಡಿ


ನೆಟ್ವರ್ಕಿಂಗ್ ಮೇಲೆ ಒತ್ತು :
ಭಯೋತ್ಪಾದಕರ ರಾಡಾರ್‌ನಲ್ಲಿ ಪ್ರಮುಖ  ಸೆಕ್ಯೂರಿಟಿ ಇನ್ಸ್ಟಲೆಶನ್  ಮತ್ತು ಆರ್ಮಿ ಫಾರ್ವರ್ಡ್ ಪೋಸ್ಟ್‌ಗಳು ಇವೆ ಎಂದು ಗುಪ್ತಚರ ಎಚ್ಚರಿಕೆಯಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ. ಇದರ ಹೊರತಾಗಿ, ಭಯೋತ್ಪಾದಕರು ಸೈನಿಕರನ್ನು ಗುರಿಯಾಗಿಸಬಹುದು. ಈ ಗುಪ್ತಚರ ಮಾಹಿತಿಯ ಆಧಾರದ ಮೇಲೆ, ಭದ್ರತಾ ಏಜೆನ್ಸಿಗಳು ವಿವಿಧ ರಾಜ್ಯಗಳ ಪೊಲೀಸ್, ಜಿಆರ್‌ಪಿ ಮತ್ತು ಗುಪ್ತಚರ ಘಟಕಗಳಿಗೆ ವಿವರವಾದ ಮಾಹಿತಿಯನ್ನು ಕಳುಹಿಸಿವೆ. 


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.