ನವದೆಹಲಿ: 45 ವರ್ಷ ವಯಸ್ಸಿನ ಬಿಹಾರಿ ಲಾಲ್ ದಿನಕ್ಕೆ 600-800 ರೂ ಗಳಿಸುವ ಕಾರ್ಮಿಕರಾಗಿದ್ದಾರೆ, ಆದರೆ ಉತ್ತರ ಪ್ರದೇಶದ ಕನೌಜ್ ಜಿಲ್ಲೆಯ ಬ್ಯಾಂಕ್ ಆಫ್ ಇಂಡಿಯಾದಲ್ಲಿ ತನ್ನ ಜನ್ ಧನ್ ಖಾತೆಯಿಂದ ರೂ 100 ತೆಗೆದುಕೊಳ್ಳಲು ಹೋದಾಗ ಅವರ ಖಾತೆಯಲ್ಲಿ 2,700 ಕೋಟಿ ರೂ.ಜಮಾ ಆಗಿರುವುದನ್ನು ಕಂಡು ಅವರು ಆಶ್ಚರ್ಯಚಕಿತರಾಗಿದ್ದಾರೆ.
ಇದನ್ನೂ ಓದಿ: ಝವಾಹಿರಿ ಹತ್ಯೆಗೆ ಅಮೆರಿಕಾ ಹಾದಿ ಸುಗಮ ಮಾಡಿಕೊಟ್ಟಿದ್ದೇ ಉಗ್ರನ ಈ ಹವ್ಯಾಸ ..!
ಖಾತೆಯನ್ನು ಮೂರು ಬಾರಿ ಪರಿಶೀಲಿಸಲು ಬ್ಯಾಂಕ್ ಅಧಿಕಾರಿಯನ್ನು ಕೇಳಿದ್ದೇನೆ ಎಂದು ಹೇಳಿದ್ದಾರೆ.ಆದಾಗ್ಯೂ ಅವರ ಅಧಿಕೃತ ಬ್ಯಾಂಕ್ ದಾಖಲೆಗಳಲ್ಲಿ ಭಾರಿ ಮೊತ್ತ ಜಮಾ ಆಗಿರುವುದು ಕಂಡು ಬಂದಿದೆ ಎನ್ನಲಾಗಿದೆ.
'ನಾನು ನಂತರ ನನ್ನ ಖಾತೆಯನ್ನು ಮತ್ತೊಮ್ಮೆ ಪರಿಶೀಲಿಸಲು ಕೇಳಿದೆ, ನಂತರ ಅವರು ಅದನ್ನು ಮೂರು ಬಾರಿ ಪರಿಶೀಲಿಸಿದರು. ನಾನು ಅದನ್ನು ನಂಬಲು ಸಾಧ್ಯವಾಗದಿದ್ದರೂ, ಅವರು ಬ್ಯಾಂಕ್ ಸ್ಟೇಟ್ಮೆಂಟ್ ತೆಗೆದು ನನಗೆ ನೀಡಿದರು," ಎಂದು ಅವರು ಹೇಳಿದರು.
ಇದನ್ನೂ ಓದಿ: ಸೌದಿ ಅರೇಬಿಯಾದಲ್ಲಿ ಪತ್ತೆಯಾಯ್ತು 8000 ವರ್ಷಗಳ ಪುರಾತನ ದೇವಾಲಯ!
ಆದರೆ, ಅವರು ಮನೆಗೆ ತಲುಪುತ್ತಿದ್ದಂತೆ, ಅವರ ಖಾತೆಯಲ್ಲಿ ಕೇವಲ 126 ರೂ.ಗಳಿದ್ದು, ಹಿಂದಿನ ಮೊತ್ತವು ಸಿಸ್ಟಮ್ ದೋಷದಿಂದ ಆಗಿದೆ ಎಂದು ಅವರಿಗೆ ತಿಳಿಸಲಾಗಿದೆ.
ಈಗ ಈ ವಿಚಾರವಾಗಿ ಪ್ರತಿಕ್ರಿಯಿಸಿದ ಜಿಲ್ಲಾ ವ್ಯವಸ್ಥಾಪಕ ಅಭಿಷೇಕ್ ಸಿನ್ಹಾ ಇದು ಬ್ಯಾಂಕಿಂಗ್ ದೋಷದಂತೆ ತೋರುತ್ತಿದೆ ಎಂದು ಸುದ್ದಿಗಾರರಿಗೆ ತಿಳಿಸಿದರು.ಮುಂಜಾಗ್ರತಾ ಕ್ರಮವಾಗಿ ಕೆಲಕಾಲ ಲಾಲ್ ಅವರ ಖಾತೆಯನ್ನು ಸ್ಥಗಿತಗೊಳಿಸಲಾಗಿತ್ತು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.