ನವದೆಹಲಿ: ಪಾಕಿಸ್ತಾನ ವಿದೇಶಾಂಗ ಸಚಿವ ಶಾಹ್ ಮಹಮ್ಮದ್ ಖುರೇಷಿ ಮತ್ತೊಮ್ಮೆ ಜೈಶ್-ಎ- ಮೊಹಮದ್ ಅನ್ನು ಸಮರ್ಥಿಸಿಕೊಂಡಿದ್ದು, ಪುಲ್ವಾಮ ದಾಳಿಗೆ ಭಯೋತ್ಪಾದಕ ಸಂಘಟನೆ ಹೊಣೆಯಲ್ಲ ಎಂದು ಹ್ಲಿದ್ದಾರೆ. ಫೆಬ್ರವರಿ 14ರಂದು 40 ಯೋಧರ ಸಾವಿಗೆ ಕಾರಣವಾದ ಆತ್ಮಾಹುತಿ ದಾಳಿಯ ಜವಾಬ್ದಾರಿಯನ್ನು ಸ್ವತಃ JeM ಒಪ್ಪಿಕೊಂಡಿತ್ತು.


COMMERCIAL BREAK
SCROLL TO CONTINUE READING

ಬಿಬಿಸಿಯ ಸಂದರ್ಶನವೊಂದರಲ್ಲಿ ಮಾತನಾಡಿದ ಪಾಕಿಸ್ತಾನ ವಿದೇಶಾಂಗ ಸಚಿವ ಶಾಹ್ ಮಹಮ್ಮದ್ ಖುರೇಷಿ, ಪಾಕಿಸ್ತಾನ ಏನು ಹೇಳುತ್ತಿದೆ ಎಂಬುದನ್ನು ಭಾರತ ಕೇಳಿದ್ದಿದ್ದರೆ ಉಭಯ ದೇಶಗಳ ನಡುವೆ ಈ ಉದ್ವಿಗ್ನತೆ ತಲೆದೊರುತ್ತಿರಲಿಲ್ಲ. ಜೈಶ್​ ಎ ಮೊಹಮ್ಮದ್​ ಸಂಘಟನೆ ಹಿಂಸಾಚಾರದಲ್ಲಿ ತೊಡಗಿರುವ ಬಗ್ಗೆ ಭಾರತ ಸೂಕ್ತ ಸಾಕ್ಷ್ಯಾಧಾರ ಒದಗಿಸಿದರೆ ಆತನನ್ನು ಬಂಧಿಸಲು ಪಾಕಿಸ್ತಾನ ಸಿದ್ಧವಿದೆ ಎಂದು ಹೇಳಿದರು.


ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ, ಪುಲ್ವಾಮಾ ದಾಳಿಯ ಜವಾಬ್ದಾರಿಯನ್ನು JeM ಹೊತ್ತಿಲ್ಲ ಎಂದು ಪಾಕಿಸ್ತಾನ ವಿದೇಶಾಂಗ ಸಚಿವರು ಸ್ಪಷ್ಟವಾಗಿ ಹೇಳಿದ್ದಾರೆ.


ಇಡೀ ದೇಶವು ಐಎಎಫ್ನ ವಿಂಗ್ ಕಮಾಂಡರ್ ಅಭಿನಂದನ್ ವರ್ತಮಾನನ ಆಗಮನಕ್ಕೆ ಕಾಯುತ್ತಿರುವಾಗ ಪಾಕಿಸ್ತಾನದ ಸಚಿವ ಸಂದರ್ಶನವೊಂದನ್ನು ನಡೆಸಲಾಯಿತು. ಪಾಕಿಸ್ತಾನದ ಅಧಿಕಾರಿಗಳು ಫೆಬ್ರವರಿ 27 ರಂದು ಎರಡು ದೇಶಗಳ ವಾಯುಪಡೆಗಳ ನಡುವಿನ ವಾಯುದಾಳಿಯ ವೇಳೆ ಅಭಿನಂದನ್ ಅವರನ್ನು ವಶಪಡಿಸಿಕೊಂಡಿದ್ದಾರೆ.


ಶುಕ್ರವಾರ, ಇಸ್ರೇಲ್ ಸಹಕಾರ ಸಂಘಟನೆಯ (ಒಐಸಿ) ಸಭೆಗೆ ಖುರೇಷಿ ಹಾಜರಾಗಲಿಲ್ಲ. ಪಾಕಿಸ್ತಾನದಿಂದ ಬಲವಾದ ಪ್ರತಿಭಟನೆಯಿದ್ದರೂ, ಗೌರವಾನ್ವಿತ ಅತಿಥಿಯಾಗಿ ಒಐಸಿ ಸಭೆಗೆಸುಷ್ಮಾ ಸ್ವರಾಜ್ ಅವರನ್ನು ಆಹ್ವಾನಿಸಲಾಯಿತು. ಇಸ್ಲಾಮಿಕ್ ಸಹಕಾರ ಸಂಸ್ಥೆ (ಒಐಸಿ) ಆಯೋಜಿಸಿದ್ದ  ವಿದೇಶಾಂಗ ಮಂತ್ರಿಗಳ ಎರಡು ದಿನಗಳ ಸಮಾವೇಶದಲ್ಲಿ  ಭಾಗವಹಿಸಿದ್ದ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ತಮ್ಮ ಭಾಷಣದಲ್ಲಿ ಹೆಚ್ಚುತ್ತಿರುವ ಭಯೋತ್ಪಾದನೆ ವಿರುದ್ಧ ಗುಡುಗಿದರು.