PubG Love Story: ಆನ್’ಲೈನ್ ಗೇಮಿಂಗ್ ಆಪ್ ಪಬ್’ಜಿ ಮೂಲಕ ಪಾಕಿಸ್ತಾನ ಮಹಿಳೆಗೆ ಲವ್ ಆಗಿದ್ದು, ಆತನನ್ನು ನೋಡಲೆಂದು ಭಾರತಕ್ಕೆ ಅಕ್ರಮವಾಗಿ ಬಂದಿದ್ದಾಳೆ. ಈ ಘಟನೆಯನ್ನು ಭೇದಿಸುವಷ್ಟರಲ್ಲಿ ಪೋಲಿಸರು ಸುಸ್ತಾಗಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: Drug Case: ಸಮುದ್ರ ಮಾರ್ಗವಾಗಿ ಡ್ರಗ್ಸ್ ರವಾನಿಸಿದವರ ಮೇಲೆ ಎನ್ಐಎ ಬಿಗ್ ಆಕ್ಷನ್


ಗ್ರೇಟರ್ ನೋಯ್ಡಾದ ನಿವಾಸಿಯಾದ ಸಚಿನ್ ಹಾಗೂ ಪಾಕಿಸ್ತಾನ ಮೂಲದ ಸೀಮಾ ಎಂಬ ಮಹಿಳೆ ಪಬ್ ಜಿ ಆಟವಾಡುತ್ತಾ ಪರಿಚಯವಾಗಿದ್ದಾರೆ. ಈ ಪರಿಚಯ ಪ್ರೇಮಕ್ಕೆ ತಿರುಗಿದ್ದು, ಇದೀಗ ಆ ಮಹಿಳೆ, ನೇಪಾಳ ಮಾರ್ಗವಾಗಿ ತನ್ನ 4 ಮಕ್ಕಳೊಂದಿಗೆ ಗ್ರೇಟರ್ ನೋಯ್ಡಾಗೆ ಬಂದಿದ್ದಾಳೆ.


27 ವರ್ಷದ ಪಾಕಿಸ್ತಾನಿ ಮಹಿಳೆ ಮೇ ತಿಂಗಳಲ್ಲಿ ಕರಾಚಿಯಿಂದ ತನ್ನ ನಾಲ್ವರು ಮಕ್ಕಳೊಂದಿಗೆ ಹೊರಟಿದ್ದು, ದುಬೈಗೆ ಮತ್ತು ಕಠ್ಮಂಡುವಿಗೆ ಸಂಪರ್ಕ ಕಲ್ಪಿಸುವ ವಿಮಾನಕ್ಕೆ ಹೊರಟಿದ್ದಾರೆ. ಬಳಿಕ ನೇಪಾಳದ ರಾಜಧಾನಿಯಿಂದ ಪೋಖಾರಾಗೆ ಬಸ್ ಹತ್ತಿ, ತಪಾಸಣೆಯ ಹೊರತಾಗಿಯೂ ಅಕ್ರಮವಾಗಿ ಭಾರತೀಯ ಗಡಿಯನ್ನು ದಾಟಿದ್ದಾರೆ. ನಾಲ್ಕು ಮಕ್ಕಳೊಂದಿಗೆ ಪ್ರಯಾಣಿಸುತ್ತಿದ್ದ ಕಾರಣ ಮಹಿಳೆಯ ಮೇಲೆ ಹೆಚ್ಚು ಅನುಮಾನ ಬಂದಿರಲಿಲ್ಲ.


ಕೊನೆಗೂ ಗ್ರೇಟರ್ ನೋಯ್ಡಾದ ರಬುಪುರಕ್ಕೆ ಬಂದು 22 ವರ್ಷದ ಕಿರಾಣಿ ಅಂಗಡಿಯ ಕೆಲಸಗಾರ ಸಚಿನ್ ಅವರನ್ನು ಭೇಡಿಯಾಗಿದ್ದಾರೆ. 2020ರಲ್ಲಿ ಪ್ರೇಮಪಾಶಕ್ಕೆ ಸಿಲುಕಿದ್ದು, ಮದುವೆಯಾಗಲು ಸಿದ್ಧರಾಗಿದ್ದರು. ಆದರೆ ವಕೀಲರೊಬ್ಬರು ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದು, ಭಾನುವಾರ ಹರಿಯಾಣದ ಬಲ್ಲಭಗಢಕ್ಕೆ ತೆರಳುತ್ತಿದ್ದ ವೇಳೆ ಜೋಡಿ ಸಿಕ್ಕಿಬಿದ್ದಿದ್ದಾರೆ.


ಭಾನುವಾರ ಪೊಲೀಸರಿಂದ ಬಂಧನಕ್ಕೊಳಗಾಗಿದ್ದ ಸೀಮಾ ಹೈದರ್, ಮೇ ಮೂರನೇ ವಾರದಲ್ಲಿ ಭಾರತಕ್ಕೆ ಆಗಮಿಸಿದ್ದಾಗಿ, ಬಳಿಕ ಸಚಿನ್ ನಿವಾಸದಲ್ಲಿ ತಂಗಿ, ಈಗ ಮದುವೆಯಾಗಲು ಮುಂದಾಗಿರುವುದಾಗಿ ಹೇಳಿದ್ದಾರೆ.


ವಕೀಲರು ಮತ್ತು ಪೋಲೀಸರ ಪ್ರಕಾರ ಹೈದರ್ ಅವರು ಪಾಕಿಸ್ತಾನದಲ್ಲಿ ಕೌಟುಂಬಿಕ ದೌರ್ಜನ್ಯಕ್ಕೆ ಬಲಿಯಾಗಿದ್ದಾಳೆ. ಆಕೆ ನೀಡಿದ ಹೇಳಿಕೆ ಹೀಗಿದೆ - "ನಾನು ಸೌದಿ ಅರೇಬಿಯಾದಲ್ಲಿ ಕೆಲಸ ಮಾಡುವ ಪಾಕಿಸ್ತಾನಿ ವ್ಯಕ್ತಿಯನ್ನು ಮದುವೆಯಾಗಿದ್ದೇನೆ. ಅವನು ಪ್ರತಿ ಸಣ್ಣ ವಿಷಯಕ್ಕೂ ನನಗೆ ಹೊಡೆಯುತ್ತಾನೆ. ನಾಲ್ಕು ವರ್ಷಗಳಿಂದ ಅವನನ್ನು ಭೇಟಿಯಾಗಿಲ್ಲ. ನನ್ನ ಸಹೋದರ ಪಾಕಿಸ್ತಾನಿ ಸೇನೆಯಲ್ಲಿ ಕೆಲಸ ಮಾಡುತ್ತಿದ್ದಾನೆ”


ಈ ಬಳಿಕ ವಕೀಲರೊಬ್ಬರು ಮಾತನಾಡಿ, “ಹೈದರ್ ಕಳೆದ ಶುಕ್ರವಾರ ವಕೀಲರನ್ನು ಭೇಟಿ ಮಾಡಿದ್ದಳು. ಈ ಸಂದರ್ಭದಲ್ಲಿ  ಭಾರತೀಯ ವೀಸಾದ ಬಗ್ಗೆ ಕೇಳಿದ ತಕ್ಷಣ ಆಕೆ ಅಲ್ಲಿಂದ ಹೋದಳು. ಈ ಬಗ್ಗೆ ಅನುಮಾನಗೊಂಡು ನನ್ನ ಸಹಚರರೊಬ್ಬರು ಅವಳನ್ನು ಹಿಂಬಾಲಿಸಿದರು. ಆ ಸಂದರ್ಭದಲ್ಲಿ ರಬುಪುರದ ಮನೆಯಲ್ಲಿ ವಾಸಿಸುತ್ತಿದ್ದಾರೆಂದು ತಿಳಿಯಿತು. ಆ ಬಳಿಕ ನಾನು ಪೊಲೀಸರಿಗೆ ಮಾಹಿತಿ ನೀಡಿದ್ದೇನೆ" ಎಂದು ವಕೀಲರು ಹೇಳಿದರು.


ಇದನ್ನೂ ಓದಿ: ಮೋದಿ ಸರ್ಕಾರದಲ್ಲಿ 262 ಹೊಸ ವೈದ್ಯಕೀಯ ಕಾಲೇಜು, 15 ಏಮ್ಸ್‌ಗಳ ನಿರ್ಮಾಣ: ಧರ್ಮೇಂದ್ರ ಪ್ರಧಾನ್


ಹೆಚ್ಚುವರಿ ಸಿಪಿ (ಕಾನೂನು ಮತ್ತು ಸುವ್ಯವಸ್ಥೆ) ಸುರೇಶ ರಾವ್ ಅರವಿಂದ್ ಕುಲಕರ್ಣಿ ಅವರು ಹೈದರ್ ಮತ್ತು ಸಚಿನ್ ಅವರನ್ನು ಬಸ್‌ ನಿಂದ ಕೆಳಗಿಳಿಸಿ, ಹರಿಯಾಣದ ವಲ್ಲಭಗಢ್‌ ಗೆ ಮತ್ತು ವಿಚಾರಣೆಗಾಗಿ ನೋಯ್ಡಾಕ್ಕೆ ಕರೆತಂದಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.