Pakistani Terrorist Arrested In Delhi: ಪಾಕಿಸ್ತಾನದ ಭಯೋತ್ಪಾದಕನನ್ನು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸೆರೆಹಿಡಿಯಲಾಗಿದೆ. ಭಯೋತ್ಪಾದಕನಿಂದ ಎಕೆ -47 ಗನ್ ಮತ್ತು ಮದ್ದುಗುಂಡುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಪೂರ್ವ ದೆಹಲಿಯ ಲಕ್ಷ್ಮಿ ನಗರ ಪ್ರದೇಶದಿಂದ ದೆಹಲಿ ಪೊಲೀಸ್ ವಿಶೇಷ ಸೆಲ್ ಪಾಕಿಸ್ತಾನಿ ಭಯೋತ್ಪಾದಕರನ್ನು ಸೆರೆಹಿಡಿದಿದ್ದಾರೆ. ಇದರಿಂದಾಗಿ ನವರಾತ್ರಿಯಲ್ಲಿ ನಡೆಯಬೇಕಿದ್ದ ಭೀಕರ ಭಯೋತ್ಪಾದ ದಾಳಿಯೊಂದು ತಪ್ಪಿದಂತಾಗಿದೆ  ಎಂದು ವರದಿಯಾಗಿದೆ.


COMMERCIAL BREAK
SCROLL TO CONTINUE READING

ಬಂಧಿತ ಪಾಕಿಸ್ತಾನದ ಭಯೋತ್ಪಾದಕನ (Pakistani Terrorist) ಹೆಸರು ಮೊಹಮ್ಮದ್ ಅಶ್ರಫ್ ಅಲಿಯಾಸ್ ಅಲಿ  (Terrorist Mohammad Ashraf aka Ali) ಎಂದು ಗುರುತಿಸಲಾಗಿದೆ. ಭಯೋತ್ಪಾದಕ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ನಿವಾಸಿ. ಮೊಹಮ್ಮದ್ ಅಶ್ರಫ್ ದೆಹಲಿಯ ಶಾಸ್ತ್ರಿ ನಗರದಲ್ಲಿ ಅಲಿ ಅಹ್ಮದ್ ನೂರಿ ಹೆಸರಿನಲ್ಲಿ ವಾಸಿಸುತ್ತಿದ್ದನು. ಈತನನ್ನು ಭಯೋತ್ಪಾದಕನನ್ನು ಲಕ್ಷ್ಮಿ ನಗರದ  (Laxmi Nagar) ರಮೇಶ್ ಪಾರ್ಕ್ ಪ್ರದೇಶದಿಂದ ಬಂಧಿಸಲಾಗಿದೆ ಎಂದು ಹೇಳಲಾಗುತ್ತಿದೆ. ಭಯೋತ್ಪಾದಕರು ನಕಲಿ ದಾಖಲೆಗಳ ಸಹಾಯದಿಂದ ಭಾರತದ ಗುರುತಿನ ಚೀಟಿಯನ್ನೂ ಪಡೆದುಕೊಂಡಿದ್ದನು ಎನ್ನಲಾಗಿದೆ.


ಇದನ್ನೂ ಓದಿ- Power Crisis: ದೇಶದ 115 ವಿದ್ಯುತ್ ಸ್ಥಾವರಗಳಲ್ಲಿ ಕಲ್ಲಿದ್ದಲು ಕೊರತೆ


ಬಂಧಿತ ಭಯೋತ್ಪಾದಕನಿಂದ (Terrorist) ಒಂದು ಎಕೆ -47 (AK-47)ದಾಳಿ ರೈಫಲ್ ಜೊತೆಗೆ ಒಂದು ಹೆಚ್ಚುವರಿ ಮ್ಯಾಗಜೀನ್, ಒಂದು ಹ್ಯಾಂಡ್ ಗ್ರೆನೇಡ್, 50 ಸುತ್ತುಗಳಿರುವ ಎರಡು ಅತ್ಯಾಧುನಿಕ ಪಿಸ್ತೂಲುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. 


ಇದನ್ನೂ ಓದಿ- Shopian Encounter: ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್‌ನಲ್ಲಿ 3 ಟಿಆರ್‌ಎಫ್ ಭಯೋತ್ಪಾದಕರ ಹತ್ಯೆ


ದೆಹಲಿ ಪೊಲೀಸ್ ವಿಶೇಷ ಸೆಲ್, ಯುಎ (ಪಿ) ಕಾಯ್ದೆ, ಸ್ಫೋಟಕ ಕಾಯ್ದೆ ಮತ್ತು ಶಸ್ತ್ರಾಸ್ತ್ರ ಕಾಯಿದೆಯಡಿ ಭಯೋತ್ಪಾದಕ ಮೊಹಮ್ಮದ್ ಅಶ್ರಫ್ ಅಲಿಯಾಸ್ ಅಲಿಯನ್ನು ಬಂಧಿಸಿದೆ ಎಂದು ತಿಳಿದುಬಂದಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ