Kerala Election Results 2021 : ಬಿಜೆಪಿ ಅಭ್ಯರ್ಥಿ ಮೆಟ್ರೋಮ್ಯಾನ್ ಇ. ಶ್ರೀಧರನ್ ಮುನ್ನಡೆ!
ಕೇರಳದ 140 ಸ್ಥಾನಗಳ ಮತಎಣಿಕೆ ಪ್ರಕ್ರಿಯೆ ಇಂದು ಬೆಳಿಗ್ಗೆ 8 ಗಂಟೆಯಿಂದ ಆರಂಭವಾಗಿದ್ದು
ಕೇರಳ : ಕೇರಳದ 140 ಸ್ಥಾನಗಳ ಮತಎಣಿಕೆ ಪ್ರಕ್ರಿಯೆ ಇಂದು ಬೆಳಿಗ್ಗೆ 8 ಗಂಟೆಯಿಂದ ಆರಂಭವಾಗಿದ್ದು, ಮೆಟ್ರೋಮ್ಯಾನ್ ಖ್ಯಾತಿಯ ಬಿಜೆಪಿ ಅಭ್ಯರ್ಥಿ ಇ. ಶ್ರೀಧರನ್ ಅವರು ಪಲಕ್ಕಾಡ್ ವಿಧಾನಸಭಾ ಕ್ಷೇತ್ರದಲ್ಲಿ ಭಾರಿ ಮುನ್ನಡೆ ಸಾಧಿಸಿದ್ದಾರೆ.
ಮತ ಎಣಿಕೆಯ ಆರಂಭಿಕ ಟ್ರೆಂಡ್ ಪ್ರಕಾರ ಶ್ರೀಧರನ್(Metroman E Sreedharan) ಮುನ್ನಡೆ ಕಾಯ್ದುಕೊಂಡಿದ್ದು, ಎರಡು ಬಾರಿ ಕಾಂಗ್ರೆಸ್ ಶಾಸಕ ಮತ್ತು ಯೂತ್ ಕಾಂಗ್ರೆಸ್ ಅಧ್ಯಕ್ಷರೂ ಆಗಿರುವ ಶಫಿ ಪರಂಬಿಲ್ ಮತ್ತು ಸಿಪಿಐ-ಎಂನ ಸಿಪಿ ಪ್ರಮೋದ್ ವಿರುದ್ಧ ಮೆಟ್ರೋಮ್ಯಾನ್ ಸ್ಪರ್ಧಿಸಿದ್ದಾರೆ.
ಇದನ್ನೂ ಓದಿ : Assembly Election Results 2021 : ಪಶ್ಚಿಮ ಬಂಗಾಳದಲ್ಲಿ ಮ್ಯಾಜಿಕ್ ನಂಬರ್ ರಿಚ್ ಆದ ಟಿಎಂಸಿ..!
ಈಗಿರುವ ಟ್ರೆಂಡ್ ಹೀಗೆಯೇ ಮುಂದುವರೆದಿದ್ದೇ ಆದರೆ, ಪಲಕ್ಕಾಡ್ (Palakkad Assembly Constituency)ನಲ್ಲಿ ಶ್ರೀಧರನ್ ಅವರು ಜಯ ಸಾಧಿಸುವುದು ಖಚಿತ ಎಂದು ಹೇಳಲಾಗುತ್ತಿದೆ. ಈ ನಡುವೆ ಶ್ರೀಧರನ್ ಅವರು ಸಿಎಂ ಅಭ್ಯರ್ಥಿ ಎಂದು ಬಿಜೆಪಿ ಘೋಷಣೆ ಮಾಡಿದೆ.
ಇದನ್ನೂ ಓದಿ : Coronavirus: ಭೂಸೇನೆ, ವಾಯುಸೇನೆ ಬಳಿಕ ಅಖಾಡಕ್ಕಿಳಿದ ನೌಕಾದಳ : ಆಪರೇಶನ್ Samudra Setu II ಆರಂಭ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.