ನವದೆಹಲಿ: ಕರೋನವೈರಸ್ (Corona virus) ಸಾಂಕ್ರಾಮಿಕ ರೋಗದ ವಿರುದ್ಧ ನಡೆಯುತ್ತಿರುವ ಯುದ್ಧದಲ್ಲಿ ಇದೀಗ ನೌಕಾಪಡೆ (Indian Navy) ಕೂಡ ಕಣಕ್ಕಿಳಿದಿದೆ. ಮೆಡಿಕಲ್ ಸಪ್ಲೈಯನ್ನು ವೇಗಗೊಳಿಸಲು ನೌಕಾಪಡೆ ಆಪರೇಷನ್ ಸಮುದ್ರ ಸೇತು -2 (Samudra Setu II) ಅನ್ನು ಪ್ರಾರಂಭಿಸಿದೆ.
7 ಯುದ್ಧನೌಕೆಗಳನ್ನು ನಿಯೋಜಿಸಿರುವ ಭಾರತೀಯ ನೌಕಾಪಡೆ :
ಈ ಕಾರ್ಯಾಚರಣೆಯಲ್ಲಿ ನೌಕಾಪಡೆ (Indian Navy) ತನ್ನ 7 ಯುದ್ಧನೌಕೆಗಳನ್ನು ನಿಯೋಜಿಸಿದೆ. ಈ ಯುದ್ಧ ನೌಕೆಗಳು ವಿದೇಶದಿಂದ ಆಕ್ಸಿಜನ್ ಕಾನ್ಸಂಟ್ರೇಟರ್ ಮತ್ತು ಇತರ ವೈದ್ಯಕೀಯ ಸಾಮಗ್ರಿಗಳನ್ನು ತೆಗೆದುಕೊಂಡು ಬರಲು ಸಹಾಯ ಮಾಡುತ್ತಿವೆ. ಈ ಯುದ್ಧನೌಕೆಗಳಲ್ಲಿ INS ಕೋಲ್ಕತಾ , ಕೊಚ್ಚಿ, ತಲ್ವಾರ್, ತಬಾರ್, ತ್ರಿಕಾಂಡ್, ಜಲಾಶ್ವ ಮತ್ತು ಐರಾವತ್ ಸೇರಿವೆ. ಐಎನ್‌ಎಸ್ ಕೋಲ್ಕತಾ ಮತ್ತು ತಲ್ವಾರ್ ಅನ್ನು ಪರ್ಷಿಯನ್ ಕೊಲ್ಲಿಗೆ ಕಳುಹಿಸಲಾಗಿದೆ.
ಇದನ್ನೂ ಓದಿ : CBSE 10th Board Result 2021 : ಈ ದಿನ ಹೊರಬೀಳಲಿದೆ 10 ನೇ ತರಗತಿ ರಿಸಲ್ಟ್ : ಮಾರ್ಕಿಂಗ್ ಪಾಲಿಸಿ ಪ್ರಕಟಿಸಿದ ಸಿಬಿಎಸ್‌ಇ
ಈ ಪೈಕಿ ಐಎನ್‌ಎಸ್ ತಲ್ವಾರ್ 40 MT ಲಿಕ್ವಿಡ್ ಮೆಡಿಕಲ್ ಆಕ್ಸಿಜನ್ (LMO) ಮತ್ತು ಇತರ ವೈದ್ಯಕೀಯ ಸಾಮಗ್ರಿಗಳೊಂದಿಗೆ ಭಾರತಕ್ಕೆ ಮರಳುತ್ತಿದೆ. ಇದೇ ವೇಳೆ, ಐಎನ್ಎಸ್ ಕೋಲ್ಕತಾ ಕತಾರ್ ತಲುಪಿದೆ. ಅಲ್ಲಿಂದ ವೈದ್ಯಕೀಯ ಸಾಮಗ್ರಿಗಳನ್ನು ಪಡೆದುಕೊಂಡು ನಂತರ ಲಿಕ್ವಿಡ್ ಮೆಡಿಕಲ್ ಆಕ್ಸಿಜನ್ (Liquid Oxygen) ಟ್ಯಾಂಕ್ ಪಡೆಯಲು ಕುವೈತ್‌ಗೆ ತೆರಳಲಿದೆ.
ಸಿಂಗಾಪುರಕ್ಕೆ ತೆರಳಿದ ಐಎನ್‌ಎಸ್ ಐರಾವತ್ :
ಅದೇ ರೀತಿ ಐಎನ್‌ಎಸ್ ಐರಾವತ್ ಅವರನ್ನು ಸಿಂಗಾಪುರಕ್ಕೆ ಕಳುಹಿಸಲಾಗಿದೆ. ಅಲ್ಲಿಂದ ಲಿಕ್ವಿಡ್ ಮೆಡಿಕಲ್ ಆಕ್ಸಿಜನ್ ಟ್ಯಾಂಕ್ ತರಲಾಗುವುದು. ಇದೆ ವೇಳೆ, ಐಎನ್ಎಸ್ ಜಲ್ಶ್ವಾವನ್ನು ಸಮುದ್ರದಲ್ಲಿ ಸ್ಟ್ರಾಂಡ್ ಬೈ ಪೋಸಿಶನ್ ನಲ್ಲಿ (stand by position) ಇರುವಂತೆ ಸೂಚಿಸಲಾಗಿದೆ. ತುರ್ತು ಪರಿಸ್ಥಿತಿಯಲ್ಲಿ ಇದರ ನೆರವನ್ನು ಪಡೆಯಲಾಗುವುದು.
ಇದನ್ನೂ ಓದಿ : ಕೊರೊನಾದಿಂದ ಕಳೆದ 24 ಗಂಟೆಗಳಲ್ಲಿ ದೆಹಲಿಯಲ್ಲಿ 412 ಜನರು ಸಾವು
ಅರೇಬಿಯನ್ ಸಮುದ್ರದಲ್ಲಿ ಉಳಿದ ಹಡಗುಗಳಿಗೆ ಸಹಾಯ ಮಾಡಲು ಐಎನ್ಎಸ್ ಕೊಚ್ಚಿ, ತ್ರಿಕಾಂಡ್ ಮತ್ತು ತಬಾರ್ ಅನ್ನು ನಿಯೋಜಿಸಲಾಗಿದೆ. ಭಾರತೀಯ ನೌಕಾಪಡೆಯ ಐಎನ್‌ಎಸ್ ಶಾರ್ದುಲ್ ಕೂಡ ಕಾರ್ಯಾಚರಣೆಗೆ ಸೇರಲು ಸನ್ನದ್ಧವಾಗಿದ್ದು, ಮುಂದಿನ 48 ಗಂಟೆಗಳಲ್ಲಿ ಅವರು ಮಿಷನ್ ನಲ್ಲಿ ಪಾಲ್ಗೊಳ್ಳಲಿದೆ.
ಯುದ್ಧನೌಕೆಗಳಲ್ಲಿ ಆಧುನಿಕ ಶಸ್ತ್ರಾಸ್ತ್ರಗಳಿವೆ
ಮೂಲಗಳ ಪ್ರಕಾರ, ಕರೋನವೈರಸ್ (Coronavirus) ಸಾಂಕ್ರಾಮಿಕ ವಿರುದ್ಧದ ಯುದ್ಧದಲ್ಲಿ ಇನ್ನೂ ಹೆಚ್ಚಿನ ಯುದ್ಧನೌಕೆಗಳನ್ನು ಕಣಕ್ಕಿಳಿಸುವ ಸಾಮರ್ಥ್ಯ ಭಾರತೀಯ ನೌಕಾಪಡೆಗೆ ಇದೆ. ಆಧುನಿಕ ಶಸ್ತ್ರಾಸ್ತ್ರಗಳನ್ನು ಹೊಂದಿದ ಈ ಯುದ್ಧನೌಕೆಗಳಲ್ಲಿ (war tank) ಸಾಕಷ್ಟು ಸ್ಥಳಾವಕಾಶವಿದ್ದು, ಅವುಗಳು ವೈದ್ಯಕೀಯ ಸರಬರಾಜು ಮತ್ತು ಇತರ ಸರಬರಾಜುಗಳನ್ನು ಸುಲಭವಾಗಿ ಸಾಗಿಸಬಲ್ಲವು. ನೌಕಾಪಡೆಯು ಕಳೆದ ವರ್ಷ ಇದೇ ರೀತಿಯ ಸಮುದ್ರ ಸೇತು (Samudra Setu) ಕಾರ್ಯಾಚರಣೆಯನ್ನು ನಡೆಸಿತ್ತು. ಈ ಕಾರ್ಯಾಚರಣೆಯ ಮೂಲಕ, ವಿದೇಶದಲ್ಲಿ ಸಿಲುಕಿದ್ದ ಸುಮಾರು 4 ಸಾವಿರ ಭಾರತೀಯರನ್ನು ಭಾರತಕ್ಕೆ ಕರೆ ತಂದಿತ್ತು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.