ನವದೆಹಲಿ: ಮಾಹಿತಿ ತಂತ್ರಜ್ಞಾನದ ಸಂಸದೀಯ ಸ್ಥಾಯಿ ಸಮಿತಿಯು (ಐಟಿ) ಬುಧವಾರದಂದು ಸಾಮಾಜಿಕ ಮಾಧ್ಯಮದ ವೇದಿಕೆಗಳಾದ ಫೇಸ್ಬುಕ್, ವಾಟ್ಸಾಪ್ ಮತ್ತು ಇನ್ಸ್ಟಾಗ್ರಾಮ್ ಪ್ರತಿನಿಧಿಗಳ ಜೊತೆ ಫೇಕ್ ನ್ಯೂಸ್ ತಡೆಗಟ್ಟುವ ವಿಚಾರವಾಗಿ ಸಭೆ ನಡೆಸಿದೆ.ಈ ಸಭೆಯಲ್ಲಿ ಫೇಕ್ ನ್ಯೂಸ್ ತಡೆಗೆ ತೆಗೆದುಕೊಂಡಿರುವ ಕ್ರಮಗಳು ಯಾವವು ಎನ್ನುವ ಅಂಶಗಳನ್ನು ಅದು ಕಂಪನಿ ಪ್ರತಿನಿಧಿಗಳಲ್ಲಿ ಕೇಳಿದೆ. ಇದೇ ಚುನಾವಣಾ ಆಯೋಗದ ಜೊತೆ ಈ ವಿಚಾರವಾಗಿ ತೊಡಗಿಸಿಕೊಳ್ಳಬೇಕು ಎಂದು ಸಮಿತಿ ಹೇಳಿದೆ.


COMMERCIAL BREAK
SCROLL TO CONTINUE READING

ಮೂಲಗಳ ಪ್ರಕಾರ ಸಂಸದೀಯ ಸಮಿತಿಯು ಫೇಸ್ಬುಕ್, ವಾಟ್ಸಾಪ್ ಮತ್ತು ಇನ್ಸ್ಟಾಗ್ರಾಮ್ ಗಳು ಬಳಕೆದಾರರ ಡಾಟಾ ಸಂರಕ್ಷಣೆ ನಿಟ್ಟಿನಲ್ಲಿ ತೆಗೆದುಕೊಂಡ ಕ್ರಮಗಳ ಬಗ್ಗೆ ವಿವರವಾದ ವರದಿಯನ್ನು ಕೇಳಿದೆ.ಅನುರಾಗ್-ಠಾಕೂರ್-ನೇತೃತ್ವದ ಸಂಸದೀಯ ಸಮಿತಿಯು ಜಾಗತಿಕ ಸಾಮಾಜಿಕ ಮಾಧ್ಯಮಗಳ ವೇದಿಕೆ ಪ್ರತಿನಿಧಿಗಳ ಸಭೆ ನಡೆಸಿ ಚುನಾವಣಾ ಸಮಯದಲ್ಲಿ ಫೇಕ್ ನ್ಯೂಸ್ ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಯಾವ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಪ್ರಶ್ನಿಸಿದೆ.
 
2019 ರ ಸಾರ್ವತ್ರಿಕ ಚುನಾವಣೆಗೆ ಮುನ್ನ ಚುನಾವಣಾ ಆಯೋಗದ (ಇಸಿಐ) ಜೊತೆ ಹೆಚ್ಚು ತೊಡಗಿಸಿಕೊಳ್ಳಲು ಸಮಿತಿಯು ಕಂಪನಿಯ ಪ್ರತಿನಿಧಿಗಳನ್ನು ಕೇಳಿದೆ.ಇನ್ನು ರಾಜಕೀಯಕ್ಕೆ ಸಂಬಂಧಿಸಿದ ಜಾಹಿರಾತುಗಳಲ್ಲಿ ಪಾರದರ್ಶಕತೆ ತರಲು ಹೊಸ ಉಪಕರಣಗಳನ್ನು ಪರಿಚಯಿಸಲು ಕಂಪನಿಗಳಿಗೆ ಆದೇಶಿಸಲಾಯಿತು.