ಮುಂಬೈ: ವರುಣನ ಆರ್ಭಟಕ್ಕೆ ಸೇತುವೆ ಕುಸಿತ, ರೈಲು ಸಂಚಾರಕ್ಕೆ ಅಡ್ಡಿ
ಪಾದಚಾರಿ ಸೇತುವೆಯ ಪತನದ ಕಾರಣದಿಂದಾಗಿ, ಅಂಧೇರಿ ಮತ್ತು ವಿಲೇ ಪಾರ್ಲೆ ನಡುವಿನ ಎಲ್ಲಾ ಸ್ಥಳೀಯ ರೈಲು ಸೇವೆಗಳು ಸ್ಥಗಿತಗೊಂಡಿದೆ.
ಮುಂಬೈ: ವಾಣಿಜ್ಯ ನಗರಿ ಮುಂಬೈನಲ್ಲಿ ಭಾರಿ ಮಳೆಯಿಂದಾಗಿ ಅಂಧೇರಿರೈಲ್ವೇ ನಿಲ್ದಾಣದ ಸೇತುವೆ ಕುಸಿದಿದ್ದು, ರೈಲ್ವೇ ಸಂಚಾರಕ್ಕೆ ಅಡಚಣೆ ಉಂಟಾಗಿದೆ. ಮಾಹಿತಿಯ ಪ್ರಕಾರ, ಅಂಧೇರಿ ಪೂರ್ವಕ್ಕೆ ಪಶ್ಚಿಮಕ್ಕೆ ಸಂಪರ್ಕಿಸುವ ಗೋಖಲೆ ಸೇತುವೆಯ ಒಂದು ಭಾಗ ಅಧೇರಿ ನಿಲ್ದಾಣದ ಬಳಿ ಕುಸಿದಿದೆ.
ಪಾದಚಾರಿ ಸೇತುವೆಯ ಪತನದಿಂದ ಸಂಚಾರಕ್ಕೆ ಹೊಡೆತ ಬಿದ್ದಿದ್ದು, ಅಂಧೇರಿ ಮತ್ತು ವಿಲೇ ಪಾರ್ಲೆ ನಡುವಿನ ಎಲ್ಲಾ ಸ್ಥಳೀಯ ರೈಲು ಸೇವೆಗಳು ಸ್ಥಗಿತಗೊಂಡಿದೆ. ಬೆಳಿಗ್ಗೆ ಸುಮಾರು 7.30 ರಲ್ಲಿ ಈ ಅಪಘಾತ ಸಂಭವಿಸಿದೆ ಎಂದು ಹೇಳಲಾಗಿದೆ. ಸೇತುವೆ ಇದ್ದಕ್ಕಿದ್ದಂತೆ ಕುಸಿದಿದ್ದು, ಈ ಅಪಘಾತದಲ್ಲಿ ಇಬ್ಬರು ಗಾಯಗೊಂಡಿದ್ದಾರೆ.
ಸೇತುವೆಯನ್ನು ತೆರವುಗೊಳಿಸುವ ಪ್ರಯತ್ನ ನಡೆಯುತ್ತಿದ್ದು, ಅವಶೇಷಗಳ ಅಡಿಯಲ್ಲಿ ಯಾರಾದರು ಸಿಲುಕಿರುವ ಕುರಿತು ಶೋಧಿಸಲಾಗುತ್ತಿದೆ. ಈ ಪ್ರದೇಶದಲ್ಲಿ ಸಂಪೂರ್ಣ ಸಂಚಾರ ದಟ್ಟಣೆ ಉಂಟಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸ್ಥಳಕ್ಕೆ NDRF ತಂಡ ತಲುಪಿದ್ದು, ತೆರವು ಕಾರ್ಯ ಭರದಿಂದ ಸಾಗಿದೆ. ಆದಾಗ್ಯೂ, ಈ ಅಪಘಾತದಲ್ಲಿ ಯಾವುದೇ ಜೀವ ಹಾನಿ ಸಂಭವಿಸಿಲ್ಲ.
ಈ ಅಪಘಾತ ಸಂಭವಿಸಿದ ಸ್ಥಳದಲ್ಲಿ, ಎರಡು ಶಾಲೆಗಳು ಮತ್ತು ಒಂದು ರೈಲು ನಿಲ್ದಾಣವಿದೆ, ಅದಕ್ಕಾಗಿಯೇ ಈ ಸೇತುವೆಯನ್ನು ಸಾಕಷ್ಟು ಬಳಸಲಾಗಿದೆ. ಅಪಘಾತ ಸಂಭವಿಸಿದಾಗ, ಸೇತುವೆಯಲ್ಲಿ ಜನಸಂದಣಿ ಕಡಿಮೆ ಇತ್ತು ಎಂದು ಹೇಳಲಾಗಿದೆ.