DGCA Latest Update - Check-In Bag ಇಲ್ಲದೆ ವಿಮಾನ ಯಾತ್ರೆ ಕೈಗೊಳ್ಳುವವರಿಗೆ ಅಗ್ಗದ ದರದಲ್ಲಿ ಟಿಕೆಟ್
DGCA Latest Update - ಶೀಘ್ರದಲ್ಲೇ ಚೆಕ್-ಇನ್ ಬ್ಯಾಗ್ ಇಲ್ಲದೆ ಪ್ರಯಾಣಿಸುವ ಪ್ರಯಾಣಿಕರಿಗೆ ಅಗ್ಗದ ದರದಲ್ಲಿ ವಿಮಾನ ಟಿಕೆಟ್ ಸಿಗಲಿದೆ.
ನವದೆಹಲಿ: DGCA Latest Update - ಶೀಘ್ರದಲ್ಲೇ ಚೆಕ್-ಇನ್ ಬ್ಯಾಗ್ ಇಲ್ಲದೆ ಪ್ರಯಾಣಿಸುವ ಪ್ರಯಾಣಿಕರಿಗೆ ಅಗ್ಗದ ದರದಲ್ಲಿ ವಿಮಾನ ಟಿಕೆಟ್ ಸಿಗಲಿದೆ. ಡೈರೆಕ್ಟರೇಟ್ ಜನರಲ್ ಆಫ್ ಸಿವಿಲ್ ಏವಿಯೇಷನ್ (DGCA) ವಿಮಾನದಲ್ಲಿ ಪ್ರಯಾಣಿಸುವ ಜನರಿಗೆ ಈ ಪರಿಹಾರ ನೀಡಿದೆ. ಚೀಲಗಳಲ್ಲಿ ಚೆಕ್ ಇಲ್ಲದೆ ವಿಮಾನದಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ರಿಯಾಯಿತಿ ದರದಲ್ಲಿ ಟಿಕೆಟ್ ನೀಡಲು ವಿಮಾನಯಾನ ಕಂಪನಿಗಳಿಗೆ ಅನುಮತಿ ನೀಡುವ ಪತ್ರವನ್ನು DGCA ಬಿಡುಗಡೆ ಮಾಡಿದೆ. ಕಳೆದ ಕೆಲ ದಿನಗಳಿಂದ ದೇಶೀಯ ವಿಮಾನಯಾನ ನಡೆಸುವುದು ತುಂಬಾ ದುಬಾರಿಯಾಗಿದೆ. ಕರೋನಾ ಸಾಂಕ್ರಾಮಿಕದಿಂದ ಉಂಟಾದ ಹಾನಿಯನ್ನು ಸರಿದೂಗಿಸಲು ಬಾಡಿಗೆಯನ್ನು ಹೆಚ್ಚಿಸಲಾಗಿದೆ. ಆದರೆ ಇದೀಗ ಡಿಜಿಸಿಎ ನಿರ್ದೇಶನಗಳ ಬಳಿಕ, ಚೆಕ್-ಇನ್ ಬ್ಯಾಗ್ ಇಲ್ಲದೆ ದೇಶದೊಳಗೆ ಪ್ರಯಾಣಿಸುವುದು ಅಗ್ಗವಾಗಲಿದೆ.
ದೇಶೀಯ ವಿಮಾನಯಾನದ ವೇಳೆ ಯಾವುದೇ ಚೆಕ್ ಇನ್ ಬ್ಯಾಗ್ ಇಲ್ಲದೆ ಯಾತ್ರೆ ನಡೆಸುವುದು ಅಗ್ಗವಾಗುವ ಸಾಧ್ಯತೆ ಇದೆ. ಈ ಶುಲ್ಕ ಗರಿಷ್ಠ ಎಂದರೆ ರೂ.200 ರವರೆಗೆ ಕಡಿಮೆಯಾಗುವ ಸಾಧ್ಯತೆ ಇದೆ. ಇದು ಚೆಕ್ ಇನ್ ಬ್ಯಾಗ್ ಗಳ ಕನಿಷ್ಠ ಮಟ್ಟಕ್ಕಿಂತ ಕಡಿಮೆಯಾಗಿದೆ. ಪ್ರಸ್ತುತ 15 ಕೆ.ಜಿ ಚೆಕ್ ಇನ್ ಬ್ಯಾಗ್ ಗಳಿಗೆ ಕಂಪನಿಗಳು ರೂ.200 ಶುಲ್ಕ ವಿಧಿಸುತ್ತವೆ. ಆದರೆ, ನಾಗರಿಕ ವಿಮಾನಯಾನ ಇಲಾಖೆ (DGCA) ಈ ನಿರ್ಬಂಧವನ್ನು ತೆಗೆದುಹಾಕಿದೆ. ಈ ಕಾರಣದಿಂದ ಇದೀಗ ಕಂಪನಿಗಳು ಅಗ್ಗದ ದರದಲ್ಲಿ ಟಿಕೆಟ್ ನೀಡಬಹುದಾಗಿದೆ. ಆದರೆ, ಮಹಾಮಾರಿಯ ಸಮಯಕ್ಕಿಂತ ಮೊದಲು ಇದ್ದ ವಿಮಾನ ಪ್ರಯಾಣ ಶುಲ್ಕದ ಮಟ್ಟಕ್ಕೆ ಬಂದ ಬಳಿಕ ಮಾತ್ರ ಈ ಚಾರ್ಜ್ ಕಡಿಮೆಯಾಗುವ ಸಾಧ್ಯತೆ ಇದೆ.
ಇದನ್ನೂ ಓದಿ-ವಿಮಾನದಲ್ಲಿ ಫೋಟೋ-ವಿಡಿಯೋ ತೆಗೆದುಕೊಳ್ಳುವ ಬಗ್ಗೆ ಸ್ಪಷ್ಟನೆ ನೀಡಿರುವ DGCA ಹೇಳಿದ್ದೇನು?
ಇದರರ್ಥ ಕಂಪನಿಗಳು ತಮ್ಮ ವಿಮಾನಯಾನದ ಟಿಕೆಟ್ ದರವನ್ನು ರೂ.200ರವರೆಗೆ ಇಳಿಕೆ ಮಾಡಬಹುದು. ಕಳೆದ ವರ್ಷದ ಮಾರ್ಚ್ ನಿಂದ ಎರಡು ತಿಂಗಳುಗಳ ಕಾಲ ಕೊರೊನಾ ಮಹಾಮಾರಿಯ ಕರಣ ದೇಶೀಯ ವಿಮಾನಯಾನ ಸೇವೆಯನ್ನು ಸ್ಥಗಿತಗೊಳಿಸಲಾಗಿತ್ತು. ನಂತರ ಮೇ 25, 2020 ರಲ್ಲಿ ದೇಶೀಯ ವಿಮಾನಯಾನ ಸೇವೆ ಪುನರಾರಂಭಗೊಂಡಿತ್ತು. ಆಗ ನಾಗರಿಕ ವಿಮಾನಯಾನ ಸಚಿವಾಲಯ ಕಂಪನಿಗಳಿಗೆ ಬಾಡಿಗೆ ಪಡೆಯಲು ವಿವಿಧ ಬ್ಯಾಂಡ್ ಗಳನ್ನು ರಚಿಸಿತ್ತು. ಈ ಬ್ಯಾಂಡ್ ಬಳಿಕ ದೇಶೀಯ ವಿಮಾನಯಾನಕ್ಕಾಗಿ ಲೈಟ್ ಫೇರ್ ಅನ್ವಯಿಸಲಾಯಿತು.
ಇದನ್ನೂ ಓದಿ- ವಿಮಾನ ತೈಲ ದರದಲ್ಲಿ ಏರಿಕೆ, ವಿಮಾನಯಾನವೂ ದುಬಾರಿಯಾಗಬಹುದು!
ಈ ಕುರಿತು ಗುರುವಾರ DGCA ಮುಖ್ಯಸ್ಥರಾಗಿರುವ ಅರುಣ್ ಕುಮಾರ್ ಈ ಆದೇಶವನ್ನು ಬಿಡುಗಡೆಗೊಳಿಸಿದ್ದಾರೆ. ಈ ಆದೇಶದಲ್ಲಿ ಲೈಘ್ತ್ ಫೇರ್ ಹಾಗೂ ಏರ್ಪೋರ್ಟ್ ಗಳ ಮೇಲೆ ಚೆಕ್ ಇನ್ ಬ್ಯಾಗ್ ಗಳ ಜೊತೆಗೆ ಯಾತ್ರೆ ಕೈಗೊಳ್ಳುವ ಯಾತ್ರಿಗಳಿಂದ ಉಚಿತ ಶುಲ್ಕ ಪಡೆಯುವುದನ್ನು ಸುನಿಶ್ಚಿತಗೊಳಿಸಬೇಕು ಎಂದು ಎಲ್ಲಾ ವಿಮಾನಯಾನ ಕಂಪನಿಗಳಿಗೆ ಸೂಚಿಸಲಾಗಿದೆ.
ಇದನ್ನೂ ಓದಿ- PMFBY: ಭತ್ತ, ಗೋಧಿ ಬೆಳೆಗಳ ವೈಮಾನಿಕ ಮೇಲ್ವಿಚಾರಣೆ ಬಗ್ಗೆ ಇಲ್ಲಿದೆ ಫುಲ್ ಡೀಟೇಲ್ಸ್
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.