ನವದೆಹಲಿ : ಪ್ರಯಾಣಿಕರು ವಿಮಾನಯಾನದ ವೇಳೆ ವಿಮಾನದ ಒಳಗೆ ಫೋಟೋಗಳು ಮತ್ತು ವಿಡಿಯೋಗಳನ್ನು ತೆಗೆದುಕೊಳ್ಳುವ ವಿಷಯದಲ್ಲಿ ನಾಗರಿಕ ವಿಮಾನಯಾನ ನಿಯಂತ್ರಕ ಡಿಜಿಸಿಎ (DGCA) ಶನಿವಾರ ಬಂದ ಸುದ್ದಿಗಳ ಬಗ್ಗೆ ಸ್ಪಷ್ಟೀಕರಣವನ್ನು ನೀಡಿದೆ. ಇದರಲ್ಲಿ ಪ್ರಯಾಣಿಕರು ವಿಮಾನದಲ್ಲಿ ಫೋಟೋ ಮತ್ತು ವೀಡಿಯೊಗಳನ್ನು ಮಾಡಬಹುದು ಎಂದು ಡಿಜಿಸಿಎ ಸ್ಪಷ್ಟಪಡಿಸಿದೆ.
ಪಿಟಿಐ ಸುದ್ದಿಯ ಪ್ರಕಾರ ಪ್ರಯಾಣಿಕರು ಗೊಂದಲಕ್ಕೆ ಕಾರಣವಾಗುವ ವಿಮಾನ ಕಾರ್ಯಾಚರಣೆಯನ್ನು ಅಡ್ಡಿಪಡಿಸುವ, ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸುವ ಅಥವಾ ಯಾವುದೇ ರೆಕಾರ್ಡಿಂಗ್ ಸಾಧನವನ್ನು ಬಳಸಲಾಗುವುದಿಲ್ಲ ಎಂದು ಡಿಜಿಸಿಎ ಸ್ಪಷ್ಟಪಡಿಸಿದೆ. ಒಂದೊಮ್ಮೆ ಈ ನಿಯಮಗಳನ್ನು ಉಲ್ಲಂಘಿಸಿದರೆ ಅಂತಹವರ ವಿರುದ್ದ ಕಾನೂನಿನ ಅನ್ವಯ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಅದು ತಿಳಿಸಿದೆ.
ಅಪ್ಪಿ-ತಪ್ಪಿಯೂ ಮಾಡದಿರಿ ಈ ತಪ್ಪು! DGCA ಹೊಸ ನಿಯಮ ಏನೆಂದು ತಿಳಿಯಿರಿ
ಹಿಂದಿನ ಶನಿವಾರ ಡಿಜಿಸಿಎ ವಿಮಾನದ ಒಳಗೆ ಯಾರಾದರೂ ಫೋಟೋ ತೆಗೆಯುತ್ತಿರುವುದು ಕಂಡುಬಂದರೆ, ವೇಳಾಪಟ್ಟಿ ಹಾರಾಟವನ್ನು ಎರಡು ವಾರಗಳವರೆಗೆ ಸ್ಥಗಿತಗೊಳಿಸಲಾಗುವುದು ಎಂದು ಹೇಳಿತ್ತು. ಎರಡು ದಿನಗಳ ಹಿಂದೆ ಡಿಜಿಸಿಎ ಇಂಡಿಗೊದ ಚಂಡೀಗಢ- ಮುಂಬೈ ವಿಮಾನದಲ್ಲಿ ಸುರಕ್ಷತಾ ಮಾನದಂಡವನ್ನು ಉಲ್ಲಂಘಿಸಿದ್ದಕ್ಕಾಗಿ ಮತ್ತು ಸಾಮಾಜಿಕ ದೂರವಿಡುವ ನಿಯಮಗಳನ್ನು ಪಾಲಿಸದ ಕಾರಣ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ವಿಮಾನಯಾನ ಸಂಸ್ಥೆಯನ್ನು ಕೇಳಿದೆ.
ಡಿಸೆಂಬರ್ 9, 2004 ರಂದು ಹೊರಡಿಸಿದ ಸುತ್ತೋಲೆಯ ಪ್ರಕಾರ, ವಿಮಾನದಲ್ಲಿ ಪ್ರಯಾಣಿಸುವ ಪ್ರಯಾಣಿಕರು ಹಾರಾಟ ಮತ್ತು ಅದರ ಇಳಿಯುವಿಕೆಯ ಸಮಯದಲ್ಲಿ ವಿಮಾನದ ಒಳಗೆ ಛಾಯಾಚಿತ್ರಗಳು ಮತ್ತು ವೀಡಿಯೊಗಳನ್ನು ತೆಗೆದುಕೊಳ್ಳಬಹುದು ಎಂದು ಡಿಜಿಸಿಎ ಭಾನುವಾರ ತನ್ನ ಆದೇಶದಲ್ಲಿ ಸ್ಪಷ್ಟಪಡಿಸಿದೆ. ಆದರೆ ಮಾರ್ಗಸೂಚಿಗಳನ್ನು ಉಲ್ಲಂಘಿಸಿ ಕಂಡುಬರುವವರ ವಿರುದ್ಧ ಕ್ರಮ ಕೈಗೊಳ್ಳಬಹುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ವಿಮಾನಗಳಲ್ಲಿ ಬದಲಾಗಲಿದೆ ಈ ನಿಯಮ
ಶನಿವಾರದ ಆದೇಶದಲ್ಲಿ ಏರ್ ರೆಗ್ಯುಲೇಷನ್ 1937ರ ನಿಯಮ 13ರ ಅಡಿಯಲ್ಲಿ ಯಾವುದೇ ವ್ಯಕ್ತಿಗೆ ವಿಮಾನದೊಳಗೆ ಛಾಯಾಚಿತ್ರಗಳನ್ನು ತೆಗೆದುಕೊಳ್ಳಲು ಅನುಮತಿ ಇಲ್ಲ ಎಂದು ಹೇಳಲಾಗಿದೆ. ಡಿಜಿಸಿಎ ಅಥವಾ ನಾಗರಿಕ ವಿಮಾನಯಾನ ಸಚಿವಾಲಯದ ಅನುಮೋದನೆಯ ನಂತರವೇ ಛಾಯಾಚಿತ್ರಗಳನ್ನು ತೆಗೆದುಕೊಳ್ಳಬಹುದು. ಡಿಜಿಸಿಎ ನಿಯಮಗಳ ಪ್ರಕಾರ ಆಂತರಿಕ ತನಿಖೆಯ ನಂತರ ವಿಮಾನಯಾನ ನಿಯಮಗಳನ್ನೂ ಉಲ್ಲಂಘಿಸಿದ ಪ್ರಯಾಣಿಕರನ್ನು ಸ್ವಲ್ಪ ಸಮಯದವರೆಗೆ 'ಫ್ಲೈಟ್ ಬ್ಯಾರೆಡ್ ಲಿಸ್ಟ್'ಗೆ ಸೇರಿಸಬಹುದು.