ನವದೆಹಲಿ: ಗ್ರಾಹಕರು ಅಗತ್ಯವಸ್ತುಗಳ ಖರೀದಿಸಿದ ಬಳಿಕ ಬಿಲ್ ಪಡೆಯುವುದನ್ನು ಪ್ರೋತ್ಸಾಹಿಸಲು ಸರ್ಕಾರ ಲಾಟರಿ ಯೋಜನೆಯೊಂದನ್ನು ಜಾರಿಗೆ ತರಲು ಸಿದ್ಧತೆ ನಡೆಸಿದೆ. ಈ GST ಲಾಟರಿ ಯೋಜನೆ ಅಡಿ 10ಲಕ್ಷ ರೂ.ಗಳಿಂದ 1 ಕೋಟಿ ರೂ.ಗಳವರೆಗೆ ಬಹುಮಾನ ನೀಡುವ ಕುರಿತು ಉಲ್ಲೇಖಿಸಲಾಗುವುದು ಎನ್ನಲಾಗಿದೆ. ಗ್ರಾಹಕರು ತಮ್ಮ ವಸ್ತುಗಳ ಖರೀದಿಯ ಕುರಿತು ಪಡೆಯುವ ಬಿಲ್ ಅನ್ನು ಉಪಯೋಗಿಸಿ ಈ ಲಾಟರಿ ಗೆಲ್ಲಬಹುದಾಗಿದೆ. ಪ್ರತಿಯೊಂದು ಜಿಎಸ್‌ಟಿ ಬಿಲ್ ಗ್ರಾಹಕರಿಗೆ ಲಾಟರಿ ಗೆಲ್ಲುವ ಅವಕಾಶ ನೀಡಲಿದೆ ಎಂದು ಕೇಂದ್ರೀಯ ಪರೋಕ್ಷ ತೆರಿಗೆ ಮತ್ತು ಕಸ್ಟಮ್ಸ್ ಮಂಡಳಿ (ಸಿಬಿಐಸಿ) ಸದಸ್ಯ ಜಾನ್ ಜೋಸೆಫ್ ಹೇಳಿದ್ದಾರೆ. ಇದು ತೆರಿಗೆ ಪಾವತಿಸಲು ಗ್ರಾಹಕರನ್ನು ಉತ್ತೇಜಿಸಲಿದೆ ಎಂದು ಅವರು ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ಅಸೋಚ್ಯಾಮ್ ಉದ್ಯಮ ಮಂಡಳಿ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಜೋಸೆಫ್, ಶೀಘ್ರವೇ ನಾವು ಒಂದು ಲಾಟರಿ ಯೋಜನೆಯೊಂದನ್ನು ಜಾರಿಗೆ ತರಲಿದ್ದು, GST ಅಡಿ ಪ್ರತಿಯೊಂದು ಬಿಲ್ ಅಡಿ ನೀವು ಲಾಟರಿ ಗೆಲ್ಲಬಹುದಾಗಿದೆ ಎಂದು ಹೇಳಿದ್ದಾರೆ. ಡ್ರಾ ನಡೆಸುವ ಮೂಲಕ ವಿಜೇತರನ್ನು ಆಯ್ಕೆ ಮಾಡಲಾಗುವುದು. ಲಾಟರಿ ಮೊತ್ತ ಎಷ್ಟೊಂದು ದೊಡ್ಡದಾಗಿದೆಯೆಂದರೆ, ಶೇ.28ರಷ್ಟು ತೆರಿಗೆ ಉಳಿತಾಯ ಬಿಟ್ಟು ಗ್ರಾಹಕರು 10ಲಕ್ಷ ರೂ.ಗಳಿಂದ 1 ಕೋಟಿ ರೂ.ಗಳವರೆಗೆ ಇದರಲ್ಲಿ ಬಹುಮಾನ ಗೆಲ್ಲಬಹುದಾಗಿದೆ. ಇದು ಗ್ರಾಹಕರ ಪ್ರವೃತ್ತಿಯಲ್ಲಿ ಬದಲಾವಣೆ ತರುವ ಉದ್ದೇಶ ಹೊಂದಿದೆ ಎಂದು ಜೋಸೆಫ್ ಹೇಳಿದ್ದಾರೆ.


ಯೋಜನೆಯ ಅಡಿ ಸಾಮಾನು ಖರೀದಿಸಿದ ಬಳಿಕ ಬರುವ ಬಿಲ್ ಅನ್ನು ಪೋರ್ಟಲ್ ಗೆ ಅಪ್ಲೋಡ್ ಮಾಡಲಾಗುವುದು. ಲಾಟರಿ ಡ್ರಾ ಕಂಪ್ಯೂಟರ್ ತಂತ್ರಜ್ಞಾನ ಆಧರಿಸಿ ಮಾಡಲಾಗುತ್ತಿದೆ. ವಿಜೇತರಿಗೆ ಈ ಕುರಿತು ಮೊದಲೇ ಸೂಚಿಸಲಾಗುವುದು.  GST ಪ್ರನಾಳಿಕೆಯ ಅಡಿ ಶೇ.5, ಶೇ.12, ಶೇ.18 ಹಾಗೂ ಶೇ.28 ಹೀಗೆ ನಾಲ್ಕು ವಿವಿಧ ಟ್ಯಾಕ್ಸ್ ಸ್ಲಾಬ್ ಗಳನ್ನು ನಿರ್ಮಿಸಲಾಗಿದೆ. ಇದಲ್ಲದೆ, ಐಷಾರಾಮಿ ಮತ್ತು ತೆರಿಗೆ ರಹಿತ ಉತ್ಪನ್ನಗಳ ಮೇಲಿನ ಅತ್ಯಧಿಕ ತೆರಿಗೆ ದರಕ್ಕೆ ಹೆಚ್ಚುವರಿಯಾಗಿ ತೆರಿಗೆಯನ್ನೂ ಸಹ ವಿಧಿಸಲಾಗುತ್ತದೆ.


ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ನೇತೃತ್ವದ ಜಿಎಸ್ಟಿ ಕೌನ್ಸಿಲ್ ಉದ್ದೇಶಿತ ಲಾಟರಿ ಯೋಜನೆಯನ್ನು ಪರಿಶೀಲಿಸಲಿದೆ. ಈ ಯೋಜನೆಯಡಿ ಕನಿಷ್ಠ ಬಿಲ್ ಮಿತಿ ಎಷ್ಟು ಎಂದು ಕೌನ್ಸಿಲ್ ನಿರ್ಧರಿಸುತ್ತದೆ. ಯೋಜನೆಯ ಪ್ರಕಾರ, ಗ್ರಾಹಕ ಕಲ್ಯಾಣ ನಿಧಿಯಿಂದ ಲಾಟರಿ ವಿಜೇತರಿಗೆ ಬಹುಮಾನ ನೀಡಲಾಗುವುದು.


ಈ ನಿಧಿಯಲ್ಲಿ ಲಾಭ ವಿರೋಧಿ ಕಾರ್ಯಾಚರಣೆಯ ಮೂಲಕ ಪಡೆದ ಮೊತ್ತವನ್ನು ವರ್ಗಾಗಿಸಲಾಗುತ್ತದೆ. ಜಿಎಸ್ಟಿ ಆದಾಯದಲಾಗಿರುವ ಇಳಿಕೆಯ ಕಾರಣಗಳನ್ನು ಕಂಡುಹಿಡಿದು ಅವುಗಳನ್ನು ಪರಿಹರಿಸಲು ಸರ್ಕಾರ, ವಹಿವಾಟಿನಿಂದ ಗ್ರಾಹಕ ವಹಿವಾಟುಗಳ ವಿವಿಧ ಆಯ್ಕೆಗಳನ್ನು ಪರಿಗಣಿಸುತ್ತಿದೆ. ಇವುಗಳಲ್ಲಿ ಲಾಟರಿ ಹಾಗೂ ಕ್ಯೂಆರ್ ಆರ್ ಕೋಡ್ ಆಧಾರಿತ ವಹಿವಾಟುಗಳು ಒಳಗೊಂಡಿವೆ.