Bengal Election: `ಬಿಜೆಪಿ ಹಿಂಬಾಲಿಸಿದ್ರೆ ಧರ್ಮ ಬಿಡಬೇಕಾದಿತು ಎಚ್ಚರ`
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತದಾರರಿಗೆ ಎಚ್ಚರಿಕೆ ನೀಡಿದ್ದಾರೆ.
ಪಶ್ಚಿಮ ಬಂಗಾಳ: ಬಿಜೆಪಿಯನ್ನು ಹಿಂಬಾಲಿಸಿದರೆ ನೀವು ನಿಮ್ಮ ಧರ್ಮದಿಂದ ವಿಮುಖರಾಗಬೇಕಾಗುತ್ತದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತದಾರರಿಗೆ ಎಚ್ಚರಿಕೆ ನೀಡಿದ್ದಾರೆ.
ಇಲ್ಲಿನ ಜರ್‌ಗ್ರಾಮ್‌ನಲ್ಲಿ ಚುನಾವಣಾ ಪ್ರಚಾರ ಸಭೆ ಉದ್ದೇಶಿಸಿ ಮಾತನಾಡಿದ ಮಮತಾ ಬ್ಯಾನರ್ಜಿ(Mamata Banerjee), ಬಿಜೆಪಿ ನಿಮ್ಮಿಂದ ನಿಮ್ಮ ಧರ್ಮವನ್ನು ಕಸಿಯಲಿದೆ ಎಂದು ಮತದಾರರನ್ನು ಎಚ್ಚರಿಸಿದರು.
"ಆಧಾರ್ ಲಿಂಕ್ ಮಾಡದಿರುವುದಕ್ಕೆ 3 ಕೋಟಿ ರೇಷನ್ ಕಾರ್ಡ್ ರದ್ದುಪಡಿಸುವುದು ಗಂಭೀರ ವಿಷಯ"
ಬಿಜೆಪಿ(BJP) ನಿಮ್ಮನ್ನು ಜೈ ಶ್ರೀರಾಮ್ ಘೋಷಣೆ ಕೂಗುವಂತೆ ಒತ್ತಾಯ ಮಾಡುತ್ತದೆ. ಆದರೆ ಅದು ಜೈ ಸೀಯಾ ರಾಮ್ ಘೋಷಣೆ ಕೂಗಲು ಬಿಡುವುದಿಲ್ಲ. ನಾವು ಯಾವಾಗಲೂ ಜೈ ಸೀಯಾ ರಾಮ್ ಎಂದೇ ಹೇಳುತ್ತೇವೆ ಎಂದು ಮಮತಾ ಬ್ಯಾನರ್ಜಿ ಹೇಳಿದರು.
ಪ್ರಭು ಶ್ರೀರಾಮ ಮಾ ದುರ್ಗೆಯನ್ನು ಅತ್ಯಂತ ಗೌರವದಿಂದ ಪೂಜಿಸುತ್ತಿದ್ದ. ಮಾ ದುರ್ಗೆ ಶ್ರೀರಾಮ(Sriram)ನಗಿಂತ ಉನ್ನತ ಸ್ಥಾನದಲ್ಲಿರುವವಳು ಎ ಂದು ಮಮತಾ ಬ್ಯಾನಾರ್ಜಿ ನುಡಿದರು.
Corona Return: ಎಲ್ಲೆಲ್ಲಿ ರಾತ್ರಿ ಕರ್ಫ್ಯೂ ಜಾರಿ? ಈ ಸ್ಥಳಗಳಿಗೆ ಹೋಗುವ ಮೊದಲು ತಿಳಿದುಕೊಳ್ಳಿ
ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯನ್ನು ಸೋಲಿಸಲು ಅದರದ್ದೇ ಹಿಂದುತ್ವದ ಕಾರ್ಡ್‌ನ್ನು ಬಳಸಲು ಆರಂಭಿಸಿರುವ ಮಮತಾ ಬ್ಯಾನರ್ಜಿ, ತಾವೂ ಕೂಡ ಧಾರ್ಮಿಕ ಮನೋಭಾವವುಳ್ಳವರು ಎಂದು ಬಿಂಬಿಸಲು ಪ್ರಯತ್ನಿಸುತ್ತಿದ್ದಾರೆ.
ಮಮತಾ ಸಾರ್ವಜನಿಕ ಸಭೆಗಳಲ್ಲಿ ಚಂಡಿಪಥೈ ಮುಂತಾದ ಹಿಂದೂ ಶ್ಲೋಕಗಳನ್ನು ಉಚ್ಚರಿಸುತ್ತಿದ್ದು, ಹಿಂದುತ್ವ (Hindutva)ಬಿಜೆಪಿಯ ಸ್ವತ್ತಲ್ಲ ಎಂದು ಜನತೆಗೆ ಮನವರಿಕೆ ಮಾಡಿಕೊಡುವ ಪ್ರಯತ್ನದಲ್ಲಿದ್ದಾರೆ.
Supreme Court ಗೂ ದೇಶಾದ್ಯಂತ 4 ಬೆಂಚ್ ಗಳಿರಬೇಕು, ಸಂಸದೀಯ ಸಮಿತಿ ಶಿಫಾರಸ್ಸು
ಆದರೆ ಮಮತಾ ಅವರ ಹಿಂದುತ್ವದ ಕಾರ್ಡ್(Card)ಗೆ ತಿರುಗೇಟು ನೀಡಿರುವ ಬಿಜೆಪಿ, ತನ್ನಿಂದಾಗಿ ಮಮತಾ ಹಿಂದೂ ಮಂತ್ರಗಳಖನ್ನು ಜಪಿಸುವಂತಾಗಿದ್ದು ನಿಜಕ್ಕೂ ಸಂತಸದ ಸಂಗತಿ ಎಂದು ಕುಹುಕವಾಡಿದೆ.
Kerala Assembly Election: ಜೀವನೋಪಾಯಕ್ಕಾಗಿ ಹಾಲು ಮಾರುವ 27 ವರ್ಷದ ಅರಿಥಾ ಬಾಬುಗೆ ಕಾಂಗ್ರೆಸ್ ಟಿಕೆಟ್
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.