Supreme Court ಗೂ ದೇಶಾದ್ಯಂತ 4 ಬೆಂಚ್ ಗಳಿರಬೇಕು, ಸಂಸದೀಯ ಸಮಿತಿ ಶಿಫಾರಸ್ಸು

Supreme Court - ಕೇವಲ ದೆಹಲಿಯಲ್ಲಿ ಮಾತ್ರ ಸುಪ್ರೀಂ ಕೋರ್ಟ್ ಇರುವುದರಿಂದ ದೂರದ ಪ್ರದೇಶಗಳಲ್ಲಿ ವಾಸಿಸುವ ಬಡ ಜನರು ಸುಪ್ರೀಂ ಕೋರ್ಟ್(SC) ವರೆಗೆ ಬರಲಾಗುವುದಿಲ್ಲ ಎಂದು ಸಂಸದೀಯ ಸಮೀತಿ ಅಭಿಪ್ರಾಯಪಟ್ಟಿದೆ.

Written by - Nitin Tabib | Last Updated : Mar 17, 2021, 11:52 AM IST
  • ಸುಪ್ರೀಂ ಕೋರ್ಟ್ ಗೂ ಕೂಡ ದೇಶಾದ್ಯಂತ 4 ಬೆಂಚ್ ಗಳಿರಬೇಕು
  • ಸಂಸದೀಯ ಸ್ಥಾಯಿ ಸಮೀತಿ ವತಿಯಿಂದ ಶಿಫಾರಸ್ಸು.
  • ತನ್ನ 107 ವರದಿಯನ್ನು ಸಂಸತ್ತಿಗೆ ಹಸ್ತಾಂತರಿಸಿದ ಸಮೀತಿ.
Supreme Court ಗೂ ದೇಶಾದ್ಯಂತ 4 ಬೆಂಚ್ ಗಳಿರಬೇಕು, ಸಂಸದೀಯ ಸಮಿತಿ ಶಿಫಾರಸ್ಸು title=
Supreme Court Of India(File Photo)

Supreme Court - ಪಾರ್ಲಿಮೆಂಟರಿ ಸ್ಟ್ಯಾಂಡಿಂಗ್ ಕಮೀಟಿ (Parliamentary Standing Committee) ಅಂದರೆ ಸಂಸದೀಯ ಸಮೀತಿ ತನ್ನ 107ನೇ ವರದಿಯನ್ನು ಪಾರ್ಲಿಮೆಂಟ್ ಗೆ ಹಸ್ತಾಂತರಿಸಿದೆ. ಈ ವರದಿಯಲ್ಲಿ ಕೆಲ ಮಹತ್ವದ ಶಿಫಾರಸ್ಸುಗಳನ್ನು ಮಾಡಲಾಗಿದೆ. ಸಮೀತಿಯ ವತಿಯಿಂದ ಸಿದ್ದಪಡಿಸಲಾಗಿರುವ ಈ ವರದಿಯಲ್ಲಿ ದೇಶಾದ್ಯಂತ ಇರುವ ನ್ಯಾಯಪಾಲಿಕೆಯಲ್ಲಿ ಕೆಲ ಸುಧಾರಣೆಗಳನ್ನು ಮಾಡುವ ಕುರಿತು ಹಾಗೂ ಅದನ್ನು ಮತ್ತಷ್ಟು ಉನ್ನತ ದರ್ಜೆಗೆ ಏರಿಸಲು ಕೆಲ ಮಹತ್ವದ ಸಲಹೆಗಳನ್ನು ನೀಡಲಾಗಿದೆ.

ಇದಲ್ಲದೆ, ಸುಪ್ರೀಂ ಕೋರ್ಟ್ ಕೇವಲ ದೆಹಲಿಯಲ್ಲಿ ಮಾತ್ರ ಕೇಂದ್ರಿತವಾಗಿರಬಾರದು ಎಂದು ಹೇಳಲಾಗಿದೆ. ದೆಹಲಿ ಹೊರತುಪಡಿಸಿ ಕೊಲ್ಕತ್ತಾ, ಮುಂಬೈ ಹಾಗೂ ಚೆನ್ನೈ ನಗರಗಳಲ್ಲಿಯೂ ಕೂಡ ಸುಪ್ರೀಂ ಕೋರ್ಟ್ ಬೆಂಚ್ (SC Bench) ಗಳನ್ನು ಸ್ಥಾಪಿಸಬೇಕು ಎಂದು ಸಲಹೆ ನೀಡಲಾಗಿದೆ. ಸುಪ್ರೀಂ ಕೋರ್ಟ್ ಕೇವಲ ದೆಹಲಿಯಲ್ಲಿ ಕೇಂದ್ರಿತವಾದ ಕಾರಣ ದೂರದ ಪ್ರದೇಶಗಳಲ್ಲಿ ವಾಸಿಸುವ ಬಡಜನರು ಸುಪ್ರೀಂ ಕೋರ್ಟ್ ತಲುಪಲು ವಿಫಲರಾಗುತ್ತಾರೆ ಎಂದು ಸಮಿತಿ ಹೇಳಿದೆ.

ಇದನ್ನೂ ಓದಿ-ನೋಟಾಗೆ ಅಧಿಕ ಮತ ಬಂದರೆ ಮರು ಚುನಾವಣೆ ನಡೆಸಿ-ಸುಪ್ರೀಂನಲ್ಲಿ ಪಿಐಎಲ್ ಸಲ್ಲಿಕೆ

ಇದಲ್ಲದೆ ದೇಶದ ನ್ಯಾಯಪಾಲಿಕೆಯಲ್ಲಿ ಸಾಮಾಜಿಕ ಹಾಗೂ ಆರ್ಥಿಕ ವಿವಿಧತೆಗಳು ಕಂಡುಬರಬೇಕು. ಇದರರ್ಥ ನ್ಯಾಯಾಲಯದಲ್ಲಿ ಎಲ್ಲ ಧರ್ಮ, ಜಾತಿ ಹಾಗೂ ಪ್ರತಿಯೊಂದು ಆರ್ಥಿಕ ವರ್ಗಕ್ಕೆ ಸೇರಿದ ನ್ಯಾಯಾಧೀಶರಿರಬೇಕು. ವಿವಿಧ ಹಿನ್ನೆಲೆ ಹೊಂದಿರುವ ನ್ಯಾಯಾಧೀಶರು ಜನಸಾಮಾನ್ಯರ ಭಾವನೆಗಳನ್ನು ಹಾಗೂ ಅವರ ಸಂಕಷ್ಟಗಳನ್ನು ಉತ್ತಮ ರೀತಿಯಲ್ಲಿ ಅರ್ಥ ಮಾಡಿಕೊಳ್ಳಬಹುದು ಎಂದು ಸಮಿತಿ ಹೇಳಿದೆ.

ಇದನ್ನೂ ಓದಿ-Cheque Bounce: ಚೆಕ್ ಬೌನ್ಸ್ ಪ್ರಕರಣಗಳ ಬಗ್ಗೆ ಸುಪ್ರೀಂ ಕೋರ್ಟ್‌ ಮಹತ್ವದ ತೀರ್ಪು

ದೇಶಾದ್ಯಂತ ಇರುವ ನ್ಯಾಯಾಧೀಶರ ಕೊರತೆಯ ಕುರಿತು ಕೂಡ ವರದಿಯಲ್ಲಿ ಕಳವಳ ವ್ಯಕ್ತಪಡಿಸಲಾಗಿದೆ. ಹೈಕೋರ್ಟ್ ನಲ್ಲಿ ಶೇ.37 ರಿಂದ ಶೇ.39 ರಷ್ಟು ನ್ಯಾಯಾಧೀಶರ ಕೊರತೆ ಇದೆ. 2016 ರಲ್ಲಿ ದೇಶಾದ್ಯಂತ ಒಟ್ಟು 126 ನ್ಯಾಯಾಧೀಶರನ್ನು ನೇಮಿಸಲಾಗಿದ್ದು, ಈ ಸಂಖ್ಯೆ 2020 ರವರೆಗೆ ಕೇವಲ 66ಕ್ಕೆ ಬಂದು ತಲುಪಿದೆ. ಹೀಗಾಗಿ ಹೈಕೋರ್ಟ್ (High Court) ನ್ಯಾಯಾಧೀಶರ ವಯಸ್ಸನ್ನು 62 ರಿಂದ 65 ಕ್ಕೆ ಹೆಚ್ಚಿಸಬೇಕು ಎಂದು ಸಮೀತಿ ಶಿಫಾರಸ್ಸು ಮಾಡಿದೆ. ಸುಪ್ರೀಂಕೋರ್ಟ್ (Supreme Corut) ನ್ಯಾಯಾಧೀಶರ ನಿವೃತ್ತಿ ವಯಸ್ಸು 65 ಆಗಿರುವುದು ಇಲ್ಲಿ ಉಲ್ಲೇಖನೀಯ. ಹೀಗಾಗಿ ಎರಡೂ ಕಡೆಗಳಲ್ಲಿ ಈ ವಯಸ್ಸಿನ ಮಿತಿ ಸಮನಾಗಿರಬೇಕು ಎಂದು ಸಮಿತಿ ಅಭಿಪ್ರಾಯಪಟ್ಟಿದೆ.

ಇದನ್ನೂ ಓದಿ-ರಾಷ್ಟ್ರೀಯ ರಕ್ಷಣಾ ಅಕಾಡೆಮಿಯಲ್ಲಿ ಮಹಿಳೆಯರೇಕಿಲ್ಲ..?

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News