ಮೂರು ದಿನಗಳ ಬಳಿಕ ಪೆಟ್ರೋಲ್ ದರದಲ್ಲಿ ಏರಿಕೆ!
ಸತತ ಮೂರು ದಿನಗಳ ಬಳಿಕ ಪೆಟ್ರೋಲ್ ಬೆಲೆಯಲ್ಲಿ ಏರಿಕೆ ಕಂಡುಬಂದಿದ್ದು. ಜುಲೈ 19 ರಂದು ಪೆಟ್ರೋಲ್ಗೆ ಪ್ರತಿ ಲೀಟರ್ಗೆ 8 ಪೈಸೆ ದುಬಾರಿಯಾಗಿತ್ತು.
ನವದೆಹಲಿ: ಸತತ ಮೂರು ದಿನಗಳ ಬಳಿಕ ಪೆಟ್ರೋಲ್ ಬೆಲೆಯಲ್ಲಿ ಏರಿಕೆ ಕಂಡುಬಂದಿದ್ದು. ಇಂದು ಪರಿಷ್ಕರಿಸಲಾದ ತೈಲ ದರದಲ್ಲಿ ಪೆಟ್ರೋಲ್ ಪ್ರತಿ ಲೀಟರ್ಗೆ 6 ಪೈಸೆ ದುಬಾರಿಯಾಗಿದೆ. ಜುಲೈ 13 ರಿಂದ ಡೀಸೆಲ್ ಬೆಲೆ ಸ್ಥಿರವಾಗಿದೆ.
ಕ್ರಿಯಾತ್ಮಕ ಬೆಲೆ ಯೋಜನೆ ಅಡಿಯಲ್ಲಿ, ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಜಾಗತಿಕ ಕಚ್ಚಾ ತೈಲದ ಬೆಲೆಗಳೊಂದಿಗೆ ಸಮನ್ವಯದಲ್ಲಿ ಪ್ರತಿದಿನವೂ ಪರಿಷ್ಕರಿಸಲಾಗುತ್ತಿದೆ. ಇಂದು ಪ್ರತಿ ಲೀಟರ್ಗೆ 6 ಪೈಸೆ ದುಬಾರಿಯಾಗಿದ್ದು ಇದರೊಂದಿಗೆ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ 73.41 ರೂ., ದೆಹಲಿಯಲ್ಲಿ ಡೀಸೆಲ್ ಬೆಲೆ 64.24ರೂ. ಇದೆ.
ಈ ದರವು ಇಂದು ಬೆಳಿಗ್ಗೆ 6 ಗಂಟೆಯಿಂದ ನಾಳೆ ಬೆಳಿಗ್ಗೆ 6 ಗಂಟೆಯವರೆಗೆ ಅನ್ವಯವಾಗಲಿದೆ.
ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್-ಡೀಸೆಲ್ ಬೆಲೆಗಳು ಕೆಳಕಂಡಂತಿದೆ
ನಗರಗಳು |
ಪೆಟ್ರೋಲ್ (ರೂ./ಲೀ) |
ಡೀಸೆಲ್ (ರೂ./ಲೀ) |
ದೆಹಲಿ | 73.41 | 66.24 |
ಕೊಲ್ಕತ್ತಾ | 75.87 | 68.31 |
ಮುಂಬೈ | 79.02 | 69.43 |
ಚೆನ್ನೈ | 76.24 | 69.96 |
ಬೆಂಗಳೂರು | 75.84 | 68.43 |
ಹೈದರಾಬಾದ್ | 77.96 | 72.14 |
ತಿರುವನಂತಪುರಂ | 76.60 | 71.09 |
ದೇಶಾದ್ಯಂತ ಎಲ್ಲಾ ರಾಜ್ಯಗಳ ಪೆಟ್ರೋಲ್-ಡೀಸೆಲ್ ಬೆಲೆ ತಿಳಿಯಲು ಈ ಲಿಂಕ್ ಕ್ಲಿಕ್ ಮಾಡಿ:
https://www.iocl.com/TotalProductList.aspx