ಈ ರಾಜ್ಯದಲ್ಲಿ ಮಾತ್ರ ಏರಿಕೆ ಕಂಡ ಪೆಟ್ರೋಲ್ ಡೀಸೆಲ್
ಮಾರ್ಚ್ 16 ಪರಿಷ್ಕರಿಸಲಾದ ತೈಲ ಬೆಲೆಯಲ್ಲಿ ದೇಶದ ರಾಜಧಾನಿ ಸೇರಿದಂತೆ ಎಲ್ಲಾ ಮಹಾನಗರಗಳಲ್ಲಿ ಪೆಟ್ರೋಲ್ ಪ್ರತಿ ಲೀಟರ್ಗೆ 15-25 ಪೈಸೆ ಕಡಿಮೆ ಆಗಿದೆ. ಅದೇ ಸಮಯದಲ್ಲಿ, ಪ್ರತಿ ಲೀಟರ್ಗೆ 15-30 ಪೈಸೆ ಕಡಿತಗೊಳಿಸಲಾಗಿದ್ದು, ಸತತ ಹನ್ನೊಂದನೇ ದಿನವೂ ತೈಲ ದರದಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಅದಾಗ್ಯೂ ಕೇರಳದಲ್ಲಿ ಮಾತ್ರ ಪೆಟ್ರೋಲ್ ಪ್ರತಿ ಲೀಟರ್ಗೆ 21 ಪೈಸೆ ಏರಿಕೆಯಾಗಿದ್ದು, ಡೀಸೆಲ್ ಪ್ರತಿ ಲೀಟರ್ಗೆ 19 ಏರಿಕೆ ಕಂಡಿದೆ.
ನವದೆಹಲಿ: ಮಾರ್ಚ್ 16 ಪರಿಷ್ಕರಿಸಲಾದ ತೈಲ ಬೆಲೆಯಲ್ಲಿ ದೇಶದ ರಾಜಧಾನಿ ಸೇರಿದಂತೆ ಎಲ್ಲಾ ಮಹಾನಗರಗಳಲ್ಲಿ ಪೆಟ್ರೋಲ್ ಪ್ರತಿ ಲೀಟರ್ಗೆ 15-25 ಪೈಸೆ ಕಡಿಮೆ ಆಗಿದೆ. ಅದೇ ಸಮಯದಲ್ಲಿ, ಪ್ರತಿ ಲೀಟರ್ಗೆ 15-30 ಪೈಸೆ ಕಡಿತಗೊಳಿಸಲಾಗಿದ್ದು, ಸತತ ಹನ್ನೊಂದನೇ ದಿನವೂ ತೈಲ ದರದಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಅದಾಗ್ಯೂ ಕೇರಳದಲ್ಲಿ ಮಾತ್ರ ಪೆಟ್ರೋಲ್ ಪ್ರತಿ ಲೀಟರ್ಗೆ 21 ಪೈಸೆ ಏರಿಕೆಯಾಗಿದ್ದು, ಡೀಸೆಲ್ ಪ್ರತಿ ಲೀಟರ್ಗೆ 19 ಏರಿಕೆ ಕಂಡಿದೆ.
ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಗಳು ಕಡಿಮೆಯಾದ ನಂತರ, ಭಾರತದಲ್ಲಿ ಮಾರಾಟವಾಗುವ ಇಂಧನವೂ ಅಗ್ಗವಾಗಿದೆ. ಕ್ರಿಯಾತ್ಮಕ ಬೆಲೆ ಯೋಜನೆ ಅಡಿಯಲ್ಲಿ, ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಜಾಗತಿಕ ಕಚ್ಚಾ ತೈಲದ ಬೆಲೆಗಳೊಂದಿಗೆ ಸಮನ್ವಯದಲ್ಲಿ ಪ್ರತಿದಿನವೂ ಪರಿಷ್ಕರಿಸಲಾಗುತ್ತಿದೆ. ಪ್ರಪಂಚದಾದ್ಯಂತ ತೈಲ ಪೂರೈಕೆ ಕುಸಿಯುತ್ತಿರುವ ಕಾರಣ, ಏಷ್ಯಾದ ಮಾರುಕಟ್ಟೆಗಳಲ್ಲಿ ತೈಲ ದರದ ಮೇಲೆ ಹೆಚ್ಚು ಪರಿಣಾಮ ಬೀರುತ್ತಿದೆ.
ಮಾರ್ಚ್ 14 ರಂದು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಲೀಟರ್ಗೆ 3 ರೂ.ಗೆ ಹೆಚ್ಚಿಸುವುದಾಗಿ ಸರ್ಕಾರ ಈ ಹಿಂದೆ ಘೋಷಿಸಿತ್ತು. ಈ ಹೆಚ್ಚಳದಿಂದ ಸರ್ಕಾರವು ವಾರ್ಷಿಕ ಆಧಾರದ ಮೇಲೆ 39,000 ಕೋಟಿ ರೂ. ವಿಶೇಷ ಅಬಕಾರಿ ಸುಂಕವನ್ನು ಪ್ರತಿ ಲೀಟರ್ಗೆ ಎರಡು ರೂಪಾಯಿ ಮತ್ತು ರಸ್ತೆ ಮತ್ತು ಮೂಲಸೌಕರ್ಯ ಸೆಸ್ನಲ್ಲಿ ಸರ್ಕಾರವು ಪ್ರತಿ ಲೀಟರ್ಗೆ ಒಂದು ರೂಪಾಯಿ ಹೆಚ್ಚಿಸಿದೆ. ಒಟ್ಟಾರೆಯಾಗಿ, ಸುಂಕವನ್ನು ಪ್ರತಿ ಲೀಟರ್ಗೆ ಮೂರು ರೂಪಾಯಿಗೆ ಹೆಚ್ಚಿಸಲಾಯಿತು.
ದೇಶದಲ್ಲಿ ಅಂತರರಾಷ್ಟ್ರೀಯ ಮಾರುಕಟ್ಟೆಯ ಲಾಭ:
ಕಚ್ಚಾ ತೈಲದ ಬೆಲೆ ಕುಸಿತದಿಂದಾಗಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಕಡಿಮೆಯಾಗಿದೆ ಎಂದು ತಜ್ಞರು ಹೇಳುತ್ತಾರೆ. ಒಂದು ತಿಂಗಳಲ್ಲಿ ಕಚ್ಚಾ ತೈಲದ ಬೆಲೆ ಬ್ಯಾರೆಲ್ಗೆ $ 70 ರಿಂದ ಬ್ಯಾರೆಲ್ಗೆ $ 50 ಕ್ಕೆ ಇಳಿದಿದೆ. ಇದರ ನೇರ ಪರಿಣಾಮ ಈಗ ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಗೋಚರಿಸುತ್ತದೆ.
ಇಂದು ಪರಿಷ್ಕರಿಸಲಾದ ತೈಲ ಬೆಲೆ ದೆಹಲಿಯಲ್ಲಿ ಪೆಟ್ರೋಲ್ ದರ ಪ್ರತಿ ಲೀಟರ್ಗೆ 69.59 ರೂ. ಮತ್ತು ಡೀಸೆಲ್ ಲೀಟರ್ಗೆ 62.29 ರೂ. ಆಗಿದೆ.
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಪೆಟ್ರೋಲ್(Petrol) ದರ ಪ್ರತಿ ಲೀಟರ್ಗೆ 72.04 ರೂ. ಆಗಿದೆ, ಡೀಸೆಲ್(Diesel) ದರ ಪ್ರತಿ ಲೀಟರ್ಗೆ 64.48 ರೂ. ತಲುಪಿದೆ.
ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್-ಡೀಸೆಲ್ ಬೆಲೆಗಳು ಕೆಳಕಂಡಂತಿದೆ
ನಗರಗಳು |
ಪೆಟ್ರೋಲ್ (ರೂ./ಲೀ) |
ಡೀಸೆಲ್ (ರೂ./ಲೀ) |
ದೆಹಲಿ | 69.59 | 62.29 |
ಕೊಲ್ಕತ್ತಾ | 72.29 | 64.62 |
ಮುಂಬೈ | 75.30 | 65.21 |
ಚೆನ್ನೈ | 72.28 | 65.71 |
ಬೆಂಗಳೂರು | 71.97 | 64.41 |
ಹೈದರಾಬಾದ್ | 73.97 | 67.82 |
ತಿರುವನಂತಪುರಂ | 73.20 | 67.38 |
ದೇಶಾದ್ಯಂತ ಎಲ್ಲಾ ರಾಜ್ಯಗಳ ಪೆಟ್ರೋಲ್-ಡೀಸೆಲ್ ಬೆಲೆ ತಿಳಿಯಲು ಈ ಲಿಂಕ್ ಕ್ಲಿಕ್ ಮಾಡಿ:
https://www.iocl.com/TotalProductList.aspx