ಒಂದು ದಿನದ ನಂತರ ಮತ್ತೆ ಹೆಚ್ಚಾದ ಪೆಟ್ರೋಲ್-ಡೀಸೆಲ್!
ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಕಚ್ಚಾ ತೈಲದ ಬೆಲೆಯಲ್ಲಿನ ಏರಿಳಿತದ ನಡುವೆ ಗುರುವಾರ ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆಯಾಗಿದೆ. ಈ ಹಿಂದೆ ದೇಶೀಯ ಮಾರುಕಟ್ಟೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಮಂಗಳವಾರ ಹೆಚ್ಚಾಗಿದ್ದು, ಬುಧವಾರ ದರದಲ್ಲಿ ಯಾವುದೇ ಬದಲಾವಣೆ ಆಗಿರಲಿಲ್ಲ.
ಬೆಂಗಳೂರು: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಯಲ್ಲಿ ಸ್ವಲ್ಪ ಏರಿಕೆ ಕಂಡುಬಂದಿರುವ ಹಿನ್ನೆಲೆಯಲ್ಲಿ ಪೆಟ್ರೋಲ್-ಡೀಸೆಲ್ ಬೆಲೆ ಗುರುವಾರ ಏರಿಕೆಯಾಗಿದೆ. ಈ ಹಿಂದೆ ದೇಶೀಯ ಮಾರುಕಟ್ಟೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಮಂಗಳವಾರ ಹೆಚ್ಚಾಗಿದ್ದು, ಬುಧವಾರ ಬೆಲೆಗಳು ಸ್ಥಿರವಾಗಿತ್ತು.
ಗುರುವಾರ ಬೆಳಿಗ್ಗೆ ಪೆಟ್ರೋಲ್ ದರ ಲೀಟರ್ಗೆ 6 ಪೈಸೆ ಮತ್ತು ಡೀಸೆಲ್ 5 ಪೈಸೆ ಏರಿಕೆಯಾಗಿದೆ. ಇದರೊಂದಿಗೆ ದೆಹಲಿಯಲ್ಲಿ ಪೆಟ್ರೋಲ್ 71.82 ರೂ.ಗೆ ಮತ್ತು ಡೀಸೆಲ್ ಲೀಟರ್ಗೆ 65.19 ರೂ.ಗೆ ತಲುಪಿದೆ.
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಒಂದು ಲೀಟರ್ ಪೆಟ್ರೋಲ್ ಬೆಲೆ 74.21 ರೂ. ಮತ್ತು ಡೀಸೆಲ್ ಬೆಲೆ 67.50 ರೂ. ಆಗಿದೆ.
ಈ ದರವು ಇಂದು ಬೆಳಿಗ್ಗೆ 6 ಗಂಟೆಯಿಂದ ನಾಳೆ ಬೆಳಿಗ್ಗೆ 6 ಗಂಟೆಯವರೆಗೆ ಅನ್ವಯವಾಗಲಿದೆ.
ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್-ಡೀಸೆಲ್ ಬೆಲೆಗಳು ಕೆಳಕಂಡಂತಿದೆ
ನಗರಗಳು |
ಪೆಟ್ರೋಲ್ (ರೂ./ಲೀ) |
ಡೀಸೆಲ್ (ರೂ./ಲೀ) |
ದೆಹಲಿ | 71.82 | 65.19 |
ಕೊಲ್ಕತ್ತಾ | 74.55 | 67.60 |
ಮುಂಬೈ | 77.50 | 68.37 |
ಚೆನ್ನೈ | 74.63 | 68.90 |
ಬೆಂಗಳೂರು | 74.37 | 67.50 |
ಹೈದರಾಬಾದ್ | 76.35 | 71.07 |
ತಿರುವನಂತಪುರಂ | 74.89 | 69.91 |
ದೇಶಾದ್ಯಂತ ಎಲ್ಲಾ ರಾಜ್ಯಗಳ ಪೆಟ್ರೋಲ್-ಡೀಸೆಲ್ ಬೆಲೆ ತಿಳಿಯಲು ಈ ಲಿಂಕ್ ಕ್ಲಿಕ್ ಮಾಡಿ:
https://www.iocl.com/TotalProductList.aspx